ಗಾರ್ಡೇನಿಯಾ ಉತ್ಸವದಲ್ಲಿ ಬಗೆ ಬಗೆಯ ಸ್ಪರ್ಧೆಗಳು

Written By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರಿನ ಕೆ.ಆರ್.ಪುರ ಸಮೀಪದ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಗಾರ್ಡೇನಿಯಾ ಉತ್ಸವ ಮತ್ತು ಓಲಂಪಿಯಾ ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್​.ಎನ್​.ಹಿಂಚಿಗೇರಿ ತಿಳಿಸಿದ್ದಾರೆ.

ನಾಲ್ಕು ದಿನಗಳು ನಡೆಯುವ ಈ ಉತ್ಸವದಲ್ಲಿ ಅಂತರ ಕಾಲೇಜು ವಿದ್ಯಾರ್ಥಿಗಳಿಗೆ ಏಕವ್ಯಕ್ತಿ ಗಾಯನ, ಏಕವ್ಯಕ್ತಿ ನೃತ್ಯ, ಏಕ ವ್ಯಕ್ತಿ ವಾದ್ಯ ನುಡಿಸುವುದು, ಗುಂಪು ನೃತ್ಯ, ಬ್ಯಾಂಡ್​ ಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮ, ರಂಗೋಲಿ, ತೇಪೆ ಚಿತ್ರಗಾರಿಕೆ, ಆಕೃತಿ ಬಿಡಿಸುವುದು, ಬೆಂಕಿ ಇಲ್ಲದೆ ಅಡುಗೆ ತಯಾರಿಸುವುದು, ಪೂರ್ವಸಿದ್ಧತೆ ಚಿತ್ರ ಬಿಡಿಸುವುದು, ಮುಖದ ಮೇಲೆ ಚಿತ್ರ ಬಿಡಿಸುವುದು, ಉಗುರು ಕಲೆ, ಟರ್ನ್ಕೋಟ್, ಚರ್ಚಾ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.[ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ತೆರೆದುಕೊಂಡ ಪುಸ್ತಕ ಭಂಡಾರ]

bengaluru

ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸೆ.10 ರಂದು ನಗದು ಬಹುಮಾನ ವಿತರಿಸಲಾಗುವುದು. ಜತೆಗೆ ಉತ್ಸವದ ಭಾಗವಾಗಿ ಸೆ.10 ರಂದು ವಿಶ್ವ ಆತ್ಮಹತ್ಯಾ ತಡೆ ದಿನ ಆಚರಿಸಿ ಕಾಲೇಜಿನ ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.[ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಜ್ಞಾನದ ಹರಿವು]

ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತ ವಿದ್ಯಾರ್ಥಿಗಳು 080 66487600 ದೂರವಾಣಿ ಸಂಖ್ಯೆ ಹಾಗೂ 9243750017 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೇ http://www.gardencitycollege.edu/gardenia/ ವೆಬ್​ಸೈಟ್​ಗೆ ಲಾಗಿನ್​ ಆಗಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
One of the top college of Bengaluru The Garden City Collage hosting series of events "GARDENIA 2016" on 7 Sept to 10 Sept 2016. The Programme promises to involve the youth of our nation to carry forward the spirit of Olympic.
Please Wait while comments are loading...