ಗಣೇಶೋತ್ಸವ, ಯಶ್ ಸೇರಿ ವಿವಿಧ ಕಲಾವಿದರ ಕಾರ್ಯಕ್ರಮದ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 26 : ಬೆಂಗಳೂರಿನಲ್ಲಿ ಶ್ರೀರಾಮನವಮಿಯ ವಿಶೇಷ ಅಂದಾಕ್ಷಣ ಶ್ರೀರಾಮ ಸೇವಾ ಮಂಡಲಿಯ ನೆನಪಾದರೆ, ಗಣೇಶೋತ್ಸವ ಅಂದ ತಕ್ಷಣ ವಿದ್ಯಾರಣ್ಯ ಯುವಕ ಸಂಘದವರು ಆಯೋಜನೆ ಮಾಡುವ ಕಾರ್ಯಕ್ರಮಗಳು ಸಹ ನೆನಪಾಗುತ್ತವೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿನಾಯಕ ಚತುರ್ಥಿಯ ದಿನವಾದ ಆಗಸ್ಟ್ ಇಪ್ಪತ್ತೈದರಿಂದ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ. ಯಾವ ದಿನ, ಏನು ಕಾರ್ಯಕ್ರಮ ಎಂಬ ವಿವರಗಳು ಇಲ್ಲಿವೆ.

ಬಸವನಗುಡಿಯ ಅಭಿನವದಲ್ಲಿ ಭಾನುವಾರ ಸಂಜೆ 4ಕ್ಕೆ ಅಷ್ಟಾವಧಾನ

ಆಗಸ್ಟ್ 26, ಶನಿವಾರ ಸಂಜೆ 5- ಆದಿತ್ಯ ರಾವ್ ಅವರಿಂದ ಹಿಂದಿ ಚಿತ್ರಗೀತೆಗಳ ಗಾಯನ

Bengaluru Ganeshotsava program list here

ರಾತ್ರಿ 7ಕ್ಕೆ ಕುಮಾರ್ ಸಾನು ರಸಸಂಜೆ (ಕನ್ನಡ ಹಾಗೂ ಹಿಂದಿ ಗೀತೆಗಳು)

ಆಗಸ್ಟ್ 27 ಭಾನುವಾರ, ಸಂಜೆ 5ಕ್ಕೆ ಬೀಟ್ ಗುರು ತಂಡದಿಂದ ಸಂಗೀತ ಕಾರ್ಯಕ್ರಮ

ರಾತ್ರಿ 7ಕ್ಕೆ ನಟ ಯಶ್ ರಿಂದ ಕಾರ್ಯಕ್ರಮ

ಆಗಸ್ಟ್ 30, ಬುಧವಾರ ಸಂಜೆ 5ಕ್ಕೆ ಸಿದ್ಧಾರ್ಥ ಸುರೇಶ್ ಮತ್ತಿತರರಿಂದ ಸಂಗೀತ ಕಾರ್ಯಕ್ರಮ

ರಾತ್ರಿ 7ಕ್ಕೆ ಕೆ.ಎಸ್.ಚಿತ್ರಾ ಮತ್ತು ರಾಜೇಶ್ ಕೃಷ್ಣನ್ ಸಂಗೀತ ಕಾರ್ಯಕ್ರಮ (ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಹಾಡುಗಳು)

ವಿನಾಯಕ ಚೌತಿ ವಿಶೇಷ: ಸುಲ್ಲಮಲೆ ಅರಣ್ಯದಲ್ಲೊಂದು ವಿಶಿಷ್ಟ ಗುಹಾಲಯ

ಆಗಸ್ಟ್ 31, ಗುರುವಾರ ಸಂಜೆ 5ಕ್ಕೆ ದಾಸವಾಣಿ ಸಂಗೀತ ಕಾರ್ಯಕ್ರಮ

ರಾತ್ರಿ 7ಕ್ಕೆ ಶಂಕರ್ ಮಹಾದೇವನ್ ಸಂಗೀತ ಕಾರ್ಯಕ್ರಮ (ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಹಾಡುಗಳು)

ಸೆಪ್ಟೆಂಬರ್ 1, ಶುಕ್ರವಾರ ಸಂಜೆ 5ಕ್ಕೆ ಗಾಯತ್ರಿ ಚಂದ್ರಶೇಖರ್ ಭರತನಾಟ್ಯ

ರಾತ್ರಿ 7ಕ್ಕೆ ಅಮ್ಜದ್ ಅಲಿ ಖಾನ್ ಸರೋದ್ ವಾದನ

ಸೆಪ್ಟೆಂಬರ್ 2, ಶನಿವಾರ ಸಂಜೆ 5ಕ್ಕೆ ವಿದ್ವಾನ್ ಶ್ರೀಧರ್ ಸಾಗರ್ ಸ್ಯಾಕ್ಸೋಫೋನ್

ರಾತ್ರಿ 7ಕ್ಕೆ ಬೃಹತ್ ಪುರಂದರ, ತ್ಯಾಗರಾಜ ಆರಾಧನಾ ಮಹೋತ್ಸವ- ಪ್ರವೀಣ್ ಗೋಡ್ಖಿಂಡಿ ಮತ್ತಿತರರು

ಸೆಪ್ಟೆಂಬರ್ 3, ಭಾನುವಾರ ಬೆಳಗ್ಗೆ 9ಕ್ಕೆ ಆದಿತಿ ದೇವರಕೊಂಡ ಭರತನಾಟ್ಯ

ಬೆಳಗ್ಗೆ 10ಕ್ಕೆ ಡಾ.ರಾಜ್ ಗೌರವಾರ್ಥ ಸಂಗೀತ ಕಾರ್ಯಕ್ರಮ- ಮೋಹನ್ ಕೃಷ್ಣ ಮತ್ತಿತರರು

ಸಂಜೆ 5ಕ್ಕೆ ಕಿರಣ್ ಕಾಮತ್ ರಿಂದ ಸಂಗೀತ ಕಾರ್ಯಕ್ರಮ

ರಾತ್ರಿ 7ಕ್ಕೆ ರಘು ದೀಕ್ಷಿತ್ ಮತ್ತಿತರರಿಂದ ಸಂಗೀತ ಕಾರ್ಯಕ್ರಮ

ಸೆಪ್ಟೆಂಬರ್ 4, ಸೋಮವಾರ ಸಂಜೆ ಜಾನಪದ ಕಲಾತಂಡಗಳ ಕಾರ್ಯಕ್ರಮದ ಜತೆಗೆ ಗಣೇಶ ಮೂರ್ತಿ ವಿಸರ್ಜನೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Including Rocking star Yash program there is lot of good events organised in Bengaluru Ganeshotsava, which is started from August 25th will be end on September 4th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ