ಇವರು ಹಗಲಿನಲ್ಲಿ ಸೆಲ್ಸ್‌ಮನ್, ರಾತ್ರಿ ದರೋಡೆಕೋರರು

Subscribe to Oneindia Kannada

ಬೆಂಗಳೂರು, ಮಾರ್ಚ್, 01: ತಡ ರಾತ್ರಿ ಕಚೇರಿ ಮುಗಿಸಿ ಮನೆಗೆ ಹೋಗುವವರು, ಬೇರೆ ಊರಿಂದ ಬೆಂಗಳೂರಿಗೆ ಆಗಮಿಸುವವರು ಇವರ ಕೈಗೆ ಸಿಕ್ಕರೆ ಕತೆ ಮುಗಿದಂತೆಯೇ.. ಇವರಿಗೆ ಲಕ್ಷಗಟ್ಟಲೇ ರು. ಹಣ ಸಿಗಬೇಕು ಎಂದೂ ಇಲ್ಲ. ನಿಮ್ಮ ಬಳಿ ಇರುವ ನೂರಾರು ರೂಪಾಯಿಯೇ ಸಾಕು.

ಹಗಲಿಗೆ ಬೇರೆ ಕೆಲಸ, ರಾತ್ರಿ ಬೇರೆ ಕೆಲಸ ಇವರ ಡ್ಯೂಟಿ. ಸೆಲ್ಸ್ ಮ್ಯಾನ್. ಡೆಲಿವರಿ ಬಾಯ್, ಟೆಕ್ನಿಕಲ್ ಸಪೋರ್ಟರ್ ಆಗಿ ಹಗಲಿಗೆ ಕೆಲಸ ಮಾಡುವವುರು ರಾತ್ರಿ ದರೋಡೆಗೆ ಇಳಿಯುತ್ತಿದ್ದರು.[ಮನೆಯಲ್ಲೇ ಜೂಜಾಡು, ವಿಡಿಯೋ ಗೇಮ್ ಗೂ ಹಣ ಕಟ್ಟಿ ನೋಡು!]

Bengaluru: Four arrested on charge of Robbery

ದರೋಡೆಕೋರರಾದ ಮಾಗಡಿ ರಸ್ತೆಯ ಕಾರ್ತಿಕ್ (ಸರ್ಜಾಪುರ ರಿಲಯನ್ಸ್ ಕಂಪನಿಯಲ್ಲಿ ಸೆಲ್ಸ್ ಮ್ಯಾನ್), ಕೆಪಿ ಅಗ್ರಹಾರದ ವಿಜಯ್ (ವಿದ್ಯಾರಣ್ಯ ಪುರ ಪ್ಲಿಪ್ ಕಾರ್ಟ್ ಶಾಖೆಯಲ್ಲಿ ಡೆಲಿವರಿ ಬಾಯ್) ಕೆಪಿ ಅಗ್ರಹಾರದ ರಾಜೇಂದ್ರನ್ (ಖಾಸಗಿ ಕಂಪನಿಯಲ್ಲಿ ಟೆಕ್ನಿಕಲ್ ಸಪೋರ್ಟರ್) ಮತ್ತು ಕೆಪಿ ಅಗ್ರಹಾರದ ಭರತ್ (ಚಾಮರಾಜಪೇಟೆಯ ರಿಲಯನ್ಸ್ ಫ್ರೆಷ್‍ನಲ್ಲಿ ಸೇಲ್ಸ್ ಬಾಯ್) ರನ್ನು ಪೊಲೀಸರು ಬಂಧಿಸಿದ್ದಾರೆ.[ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಯಾಗಿದ್ದು ಮಗನಿಂದಲೇ!]

ಇವರಿಂದ ದರೋಡೆಗೆ ತುತ್ತಾಗಿದ್ದ ಬಿನ್ನಿಪೇಟೆಯ ಮೋತಿಲಾಲ್ ದೂರು ಸಲ್ಲಿಸಿದ್ದರು. ಮಾಹಿತಿ ಕಲೆಹಾಕಿದ ಜಗಜೀವನರಾಂನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಲಿಂಗರಾಜ, ಪಿಎಸ್ ಐ ಲಕ್ಷ್ಮಣ್, ಅಶ್ವಥಯ್ಯ ಹಾಗೂ ಸಿಬ್ಬಂದಿ ಗಜೇಂದ್ರ, ಸತೀಶ್, ವೆಂಕಟೇಶ್‍ಮೂರ್ತಿ, ದಾದಾಪೀರ್, ಮಲ್ಲು.ವೈ.ಎಂ. ರವರ ತಂಡ ಆರೋಪಿಗಳನ್ನು ದೂರು ದಾಖಲಾದ 24 ಗಂಟೆಯೊಳಗೆ ಬಂಧಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Bengaluru city Jagjeevan Ram Nagar Police have arrested 4 who ware involved the robbery case. Kartik, Vijay, Rajendran, Bharath arrested by Bengaluru city police.
Please Wait while comments are loading...