ಹೆಣ್ಮಕ್ಕಳೇ ಸೇರಿ ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ ಫುಡ್ ಟ್ರಕ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಆಗಸ್ಟ್ 24: ತುಂಬ ರುಚಿಕಟ್ಟಾದ ಊಟ-ತಿಂಡಿಯ ತರಹ ಬೇರೆ ಯಾವುದೂ ಜನರನ್ನು ನಿಮಗೆ ಹತ್ತಿರದವರನ್ನಾಗಿ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ ಬೆಂಗಳೂರು ಮೂಲದ ಮಾಲಕಿ ಅರ್ಚನಾ ಸಿಂಗ್. ಆಕೆ ಫುಡ್ ಟ್ರಕ್ ವೊಂದನ್ನು ನಡೆಸುತ್ತಾರೆ. ಅದು ಪೂರ್ತಿಯಾಗಿ ನಡೆಯುತ್ತಿರುವುದು ಮಹಿಳೆಯರಿಂದಲೇ.

ಔಟರ್ ರಿಂಗ್ ರೋಡ್ ನ ಬಾಗ್ ಮನೆ ಟೆಕ್ ಪಾರ್ಕ್ ನಲ್ಲಿ 'ದಿ ಸೆವೆಂತ್ ಸಿನ್' ಫುಡ್ ಟ್ರಕ್ ಕೆಲಸ ಆರಂಭಿಸಿದೆ. 'ಜನರಿಗೆ ನಮ್ಮ ಕಾನ್ಸೆಪ್ಟ್ ಬಗ್ಗೆ ಕುತೂಹಲ ಇದೆ. ಮೊದಲ ದಿನದಿಂದಲೇ ಆಸಕ್ತಿ ತೋರಿಸುತ್ತಿದ್ದಾರೆ' ಎನ್ನುತ್ತಾರೆ ಅರ್ಚನಾ. ಈ ಫುಡ್ ಟ್ರಕ್ ವಿಶೇಷ ಏನು ಗೊತ್ತಾ? ಇದನ್ನು ಚಾಲನೆ ಮಾಡೋರು, ದೇಖ-ರೇಖಿ ಮಾಡೋರು, ಸರ್ವೀಸ್ ಕೊಡೋರು ಎಲ್ಲ ಮಹಿಳೆಯರೇ. ಹೀಗೆ ಮಹಿಳೆಯರಿಂದಲೇ ನಡೆಯುವ ಏಷ್ಯಾದ ಏಕೈಕ ಫುಡ್ ಟ್ರಕ್ ಇದು.[ಫುಡ್ ವೇಸ್ಟೇಜ್ ಸೆನ್ಸ್, ಮತ್ತ ದೊಡ್ಡಸ್ತಿಕಿ ನಾನ್ ಸೆನ್ಸ್!]

Bengaluru food truck caters global cuisine for foodies

ಶುರು ಮಾಡಿದ್ದು ಏಕೆ?: ಬೆಂಗಳೂರಿನ ಟ್ರಾಫಿಕ್ ನಲ್ಲಿ ಹೋಗುವುದೇ ಸಮಸ್ಯೆ. ಆದ್ದರಿಂದ ಒಳ್ಳೆ ಆಹಾರವನ್ನು ಮನೆ ಬಾಗಿಲಿಗೆ ತಂದುಕೊಡುವ ಹಾಗಿದ್ದರೆ ಹೇಗೆ ಎಂಬ ಯೋಚನೆ ಬಂದಿದೆ ಅರ್ಚನಾ ಅವರಿಗೆ. ಆಗ ಅಂದರೆ ಎರಡು-ಎರಡೂವರೆ ವರ್ಷದಿಂದ ಇಂಥದೊಂದು ಆಲೋಚನೆ ಅವರ ತಲೆ ಹೊಕ್ಕು, ಅದೀಗ ಕಾರ್ಯರೂಪಕ್ಕೆ ಬಂದಿದೆ.

'ದಿ ಸಿನ್ ಆಫ್ ಗ್ಲುಟೋನಿ' ನಂತರ ಕಳೆದ ವರ್ಷ ಸೆವೆಂತ್ ಸಿನ್ ಹಾಸ್ಪಿಟಾಲಿಟಿ ಸರ್ವೀಸಸ್ ಎಂಬುದನ್ನು ಆರಂಭಿಸಿದ್ದಾರೆ. ಈ ಕಂಪೆನಿಯು ಬೆಂಗಳೂರು ಕೇಂದ್ರಿತ ಕಾರ್ಪೊರೇಟ್ ಕಂಪೆನಿಗಳಿಗಾಗಿ ಕಾರ್ಯಕ್ರಮ ಆಯೋಜನೆ, ಊಟ-ತಿಂಡಿ ಕೇಟರಿಂಗ್ ಮಾಡುತ್ತದೆ. ಅದರಲ್ಲಿ ಯಶಸ್ಸು ಪಡೆದ ನಂತರ ಫುಡ್ ಟ್ರಕ್ ಆರಂಭಿಸಲಾಗಿದೆ.[ಮೈಸೂರ್ ಪಾಕ್ ಜನ್ಮ ತಾಳಿದ ಸವಿಯಾದ ಕಥೆ]

Bengaluru food truck caters global cuisine for foodies

ಏನೇನು ಮಾಡ್ತಾರೆ?: ಫುಡ್ ಟ್ರಕ್ ನಲ್ಲಿ ಜಗತ್ತಿನ ವಿವಿಧ ಆಹಾರ ಖಾದ್ಯಗಳನ್ನು ಉಣಬಡಿಸಲಾಗುತ್ತದೆ ಅದು ಭಾರತೀಯ ಶೈಲಿಯ ಜತೆಗೆ. ಮೆನು ಪ್ರತಿ ದಿನ ಬದಲಾಗುತ್ತದೆ. ಭಾರತೀಯ ಅಡುಗೆ ಶೈಲಿಯ ಜತೆಗೆ ಜಗತ್ತಿನ ನಾನಾ ಭಾಗದ ಖಾದ್ಯ ತಯಾರಿಕೆ ವಿಧಾನ ಸೇರಿಸಲಾಗುತ್ತದೆ. ಉದಾಹರಣೆಗೆ ಚಿಕನ್ ಟಿಕ್ಕಾ ಪಾಸ್ತಾ, ಮಲಾಯ್ ವೆಜಿ ರಿಸೊಟ್ಟೊ, ಬಿರಿಯಾನಿ ರೈಸ್ ರಿಸೊಟ್ಟೊ, ಇಂಡೋನೆಷ್ಯಾ ಅಥವಾ ಶ್ರೀಲಂಕನ್ ಬಿರಿಯಾನಿ, ಕಸಡಿಲಾ ಜತೆಗೆ ಚೆಟ್ಟಿನಾಡ್ ಸೈಡ್ಸ್ ಹೀಗಿರುತ್ತವೆ. ಡೆಸರ್ಟ್ಸ್ ನಲ್ಲೂ ಭಾರತೀಯ ಫ್ಲೇವರ್ ಗಳಿವೆ.

ಸದ್ಯಕ್ಕೆ ಏಳು ಮಹಿಳೆಯರು ಈ ಟ್ರಕ್ ನಡೆಸುತ್ತಿದ್ದಾರೆ. ಅಡುಗೆ ಮಾಡುವವರು, ಚಾಲಕಿ, ಉಣಬಡಿಸುವವರು, ಸಿಇಒ ಪ್ರವೀಣ್ ನಂದು, ಅರ್ಚನಾ ಮತ್ತು ಸೇವೆಗಾಗಿ ಇರುವವರು ಅಷ್ಟೂ ಮಹಿಳೆಯರೇ. ಬೆಂಗಳೂರಿನ ವಿವಿಧ ಭಾಗದಲ್ಲಿ ವಾರದ ಆರು ದಿನ ಈ ಟ್ರಕ್ ಕಾರ್ಯ ನಿರ್ವಹಿಸುತ್ತದೆ. ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮದ ಅಡಿಯಲ್ಲಿ ಇನ್ನೊಂದು ದಿನ ಬಡವರಿಗಾಗಿ ಉಚಿತವಾಗಿ ಆಹಾರ ಹಂಚಲಾಗುತ್ತದೆ.[ಫೇಸ್ ಬುಕ್ ಪುಟದ ವಿಳಾಸ]

ಬೇರೆ ಬೇರೆ ಟೆಕ್ ಪಾರ್ಕ್ ನವರು ಫುಡ್ ಪಾರ್ಕ್ ಸೇವೆ ನಮಗೂ ಕೊಡಿ ಎಂದು ನಮ್ಮ ಬಳಿ ಬಂದಿದ್ದಾರೆ. ಮುಂದೆ ಚೆನ್ನೈ, ಹೈದರಾಬಾದ್ ನಲ್ಲೂ ಫುಡ್ ಟ್ರಕ್ ಆರಂಭಿಸುವ ಉದ್ದೇಶ ಇದೆ ಎನ್ನುತ್ತಾರೆ ಅರ್ಚನಾ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 7th Sin food truck opened for service outside the Bagmane Tech Park on the Outer Ring Road in Bangalore.This is Asia’s only all-women food truck and is driven, managed and serviced only by women.
Please Wait while comments are loading...