ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದ್ರನ ಮೇಲೆ ಸ್ವಂತ ಆಕಾಶಕಾಯ ಇಳಿಸಲಿರುವ ಬೆಂಗಳೂರು ಸಂಸ್ಥೆ!

ಚಂದ್ರನ ಮೇಲೆ ತನ್ನದೇ ಸ್ವಂತ ಆಕಾಶಕಾಯ ಇಳಿಸಲು ಬೆಂಗಳೂರಿನ ಕಂಪನಿ ಆಲೋಚನೆ. ಇದು ಸಾಧ್ಯವಾದರೆ, ಚಂದ್ರನಲ್ಲಿಗೆ ತನ್ನ ಆಕಾಶಕಾಯ ಹಾರಿಸಿದ ವಿಶ್ವದ ಮೊದಲ ಖಾಸಗಿ ಸಂಸ್ಥೆಯೆಂಬ ಹೆಗ್ಗಳಿಕೆ ಇಂಡಸ್ ಕಂಪನಿಯ ಪಾಲಾಗಲಿದೆ.

|
Google Oneindia Kannada News

ಬೆಂಗಳೂರು, ಜುಲೈ 22: ಎಲ್ಲವೂ ಅಂದುಕೊಂಡಂತೆ ನಡೆದರೆ, ಚಂದ್ರನ ಅಂಗಳದಲ್ಲಿ ತನ್ನದೇ ಆದ ಆಕಾಶಕಾಯವನ್ನು ಇಳಿಸಿದ ವಿಶ್ವದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಇಂಡಸ್ ಸಂಸ್ಥೆ ಪಾತ್ರವಾಗಲಿದೆ.

ಶುಕ್ರವಾರ ಸಂಜೆ, ಕಂಪನಿಯ ಸಂಸ್ಥಾಪಕರಾದ ರಾಹುಲ್ ನಾರಾಯಣ್ ಅವರು, ದೆಹಲಿಯಲ್ಲಿ ತಮ್ಮ ಸಂಸ್ಥೆಯ ಈ ಯೋಜನೆಯ ಬಗ್ಗೆ ವಿಸ್ತೃತ ವರದಿ ನೀಡಿದರು.

ಇಸ್ರೋಗೆ ಇಂದಿರಾ ಗಾಂಧಿ ಶಾಂತಿ ಪಾರಿತೋಷಕ ಪ್ರಶಸ್ತಿ ಇಸ್ರೋಗೆ ಇಂದಿರಾ ಗಾಂಧಿ ಶಾಂತಿ ಪಾರಿತೋಷಕ ಪ್ರಶಸ್ತಿ

ಚಂದ್ರನಲ್ಲಿಗೆ ಹೋಗಿ ತಲುಪಲಿರುವ ತಮ್ಮ ಸಂಸ್ಥೆಯ ಸಂಶೋಧನಾ ವಾಹನವನ್ನು ಸಿದ್ಧಪಡಿಸಲಾಗಿದ್ದು, ಅದರ ಅಂತಿಮ ಸ್ಪರ್ಶದ ಕಾರ್ಯ ಸದ್ಯಕ್ಕೀಗ ನಡೆಯುತ್ತಿದೆ. ಆಗಸ್ಟ್ ತಿಂಗಳ ಎರಡನೇ ವಾರದಿಂದ ಈ ವಾಹನದ ತಪಾಸಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ನಡೆಸಲಿದ್ದಾರೆ.

Bengaluru firm eyes to land first private spacecraft on moon

ಅದರಲ್ಲಿ ಆ ವಾಹನವು ಉತ್ತೀರ್ಣವಾದ ನಂತರ, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋ ಉಡಾವಣಾ ಕೇಂದ್ರದಿಂದ ರಾಕೆಟ್ ಮೂಲಕ ಆ ವಾಹನವನ್ನು ಚಂದ್ರನ ಕಡೆಗೆ ಉಡಾವಣೆಗೊಳಿಸಲಾಗುವುದು ಎಂದು ಅವರು ತಿಳಿಸಿದರು.

104 ಉಪಗ್ರಹಗಳನ್ನು ಒಟ್ಟಿಗೆ ಉಡಾಯಿಸಿ ಹೊಸ ದಾಖಲೆ ಬರೆದ ಭಾರತ 104 ಉಪಗ್ರಹಗಳನ್ನು ಒಟ್ಟಿಗೆ ಉಡಾಯಿಸಿ ಹೊಸ ದಾಖಲೆ ಬರೆದ ಭಾರತ

ಈ ಆಕಾಶಕಾಯವನ್ನು ತಯಾರಿಸಲು ಇಸ್ರೋದ 24 ನಿವೃತ್ತ ವಿಜ್ಞಾನಿಗಳ ಸಲಹಾ ಮಂಡಳಿಯನ್ನು ರಚಿಸಲಾಗಿದೆ. ಈ ಮಂಡಳಿಯ ಸಲಹೆಗಳ ಮೇರೆಗೆ 100ಕ್ಕೂ ಹೆಚ್ಚು ತಂತ್ರಜ್ಞರು ಈ ಆಕಾಶಕಾಯದ ಸೃಷ್ಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 600 ಕೆಜಿ ತೂಕವಿರುವ ಈ ಆಕಾಶಕಾಯದೊಂದಿಗೆ 6 ಕೆಜಿಯ, ರೋವರ್ ಕೂಡ ಜತೆಗೆ ಸಾಗಲಿದೆ.

Bengaluru firm eyes to land first private spacecraft on moon

ಇತ್ತೀಚೆಗೆ, ವಿಶ್ವ ವಿಖ್ಯಾತ ಅಂತರ್ಜಾಲ ಸರ್ಚ್ ಇಂಜಿನ್ ಸಂಸ್ಥೆಯಾದ ಗೂಗಲ್, ಚಂದ್ರನಲ್ಲಿಗೆ ತಮ್ಮ ಖಾಸಗಿ ಸಂಶೋಧನಾ ವಾಹನಗಳನ್ನು ಇಳಿಸುವ ಇಚ್ಛೆಯುಳ್ಳ ಕಂಪನಿಗಳಿಗೆ ಸ್ಪರ್ಧೆಯನ್ನು ಆಯೋಜಿಸಿತ್ತು.

ಆ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಐದು ಕಂಪನಿಗಳಲ್ಲಿ ಇಂಡಸ್ ಸಂಸ್ಥೆಯೂ ಒಂದು. ಶೇ. 90ರಷ್ಟು ಸ್ವಯಂ ಖರ್ಚಿನಲ್ಲಿಯೇ ಚಂದ್ರನಲ್ಲಿಗೆ ಸಾಗುವ ಯೋಜನೆಯನ್ನು ಕಂಪನಿ ಕೈಗೆತ್ತಿಕೊಂಡಿರುವುದು ದೊಡ್ಡ ಸಾವಾಲಾಗಿದೆ ಎಂದು ಕಂಪನಿಯ ಸಂಸ್ಥಾಪಕ ರಾಹುಲ್ ನಾರಾಯಣ್ ತಿಳಿಸಿದ್ದಾರೆ.

English summary
If everything goes as planned, this December, the Bengaluru-based Team Indus+ will become the first private firm in the world to land a spacecraft on the moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X