ಚಿಕನ್ ಮಾಡದ ಹೆಂಡ್ತಿ ಮೇಲಿನ ಕೋಪಕ್ಕೆ ಮಕ್ಕಳನ್ನು ಕೊಂದ ತಂದೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: 'ತಿನ್ನೋಕೆ ಚಿಕನ್ ಮಾಡಿಕೊಡು' ಎಂದು ಹೆಂಡತಿಯನ್ನು ಕೇಳಿದ್ದಾನೆ. ಆದರೆ, ಆಕೆ ಸಿಟ್ಟಿನಿಂದ ಇಲ್ಲ, ಮೊದಲು ಕುಡಿಯೋದು (ಸಾರಾಯಿ) ನಿಲ್ಲಿಸು ಎಂದಿದ್ದಾರೆ.

ಹೆಂಡತಿ ಚಿಕನ್ ಮಾಡಿಕೊಡಲಿಲ್ಲ ಎಂಬ ಕೋಪವನ್ನು ಮಕ್ಕಳ ಮೇಲೆ ತೋರಿಸಿದ ಕುಡಕ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಂದು ಹಾಕಿರುವ ದಾರುಣ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Bengaluru- Father murders sons, flees

ಸುಬ್ರಹ್ಮಣ್ಯಪುರದ ಬೀರೇಶ್ವರ ನಗರದ ನಿವಾಸಿ ಸತೀಶ್ ಎಂಬುವರು ಕುಡಿದ ಮತ್ತಿನಲ್ಲಿ ತನ್ನ ಮಕ್ಕಳಾದ ಶಿವಶಂಕರ್ (5), ಅದಿತ್ಯ(4) ಹತ್ಯೆಗೈದು ಪರಾರಿಯಾಗಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಕೆಲಸಕ್ಕೆ ಹೋಗಿದ್ದ ಮಕ್ಕಳ ತಾಯಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳವಾರ ಸಂಜೆ ಸತೀಶ್ ಹಾಗೂ ಆತನ ಹೆಂಡತಿ ಜ್ಯೋತಿ ನಡುವೆ ಚಿಕನ್ ಮಾಡುವ ಸಲುವಾಗಿ ಜಗಳವಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಹೆಂಡತಿ ಮೇಲೆ ಕೈ ಮಾಡಿದ್ದ ಸತೀಶ್ ಸುಮ್ಮನಾಗಿದ್ದ ಆದರೆ, ಬುಧವಾರದಂದು ಶಾಲೆಗೆ ಹೋಗಿದ್ದ ಮಕ್ಕಳನ್ನು ಕರೆ ತಂದು ಕತ್ತು ಹಿಸುಕಿ ಕೊಂದಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Subramanyapura police in Bengaluru are on the lookout for a father after he murdered his sons aged 3 and 4. The father identified as Satish is on the run.
Please Wait while comments are loading...