ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ಕಿನ ಸೇತುವೆ ಟೆಂಡರ್ ರದ್ದತಿಗೆ ಆಗ್ರಹಿಸಿ ಸತ್ಯಾಗ್ರಹ

By Ramesh
|
Google Oneindia Kannada News

ಬೆಂಗಳೂರು, ನವೆಂಬರ್. 07 : ಸ್ಟೀಲ್ ಫ್ಲೈಓವರ್ ತೊಲಗಿಸಿ ಗಿಡಗಳನ್ನು ಉಳಿಸಿ, ಬೇಡವೇ ಬೇಡ ಸ್ಟೀಲ್ ಫ್ಲೈಓವರ್ ಬೇಡ, ಉಕ್ಕಿನ ಸೇತುವೆ ನಿಲ್ಲಿಸಿ, ಪರಿಸರ ಉಳಿಸಿ, ಹಸಿರೇ ಉಸಿರು.

ಹೀಗೆ ಹಲವು ಭಿತ್ತಿಪತ್ರಗಳನ್ನು ಹಿಡಿದು ಉಕ್ಕಿನ ಟೆಂಡರ್ ರದ್ದು ಮಾಡುವಂತೆ ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆ ಹಾಗೂ ಬೇಡ ಬ್ರಿಗೇಡ್ ಸೇರಿದಂತೆ ಹಲವು ಸಂಘಟನೆಗಳು ಭಾನುವಾರ ಫ್ರೀಡಂ ಪಾರ್ಕ್ ಬಳಿ ಸತ್ಯಾಗ್ರಹ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.[ಉಕ್ಕಿನ ಸೇತುವೆ ನಿರ್ಮಾಣ ಸದ್ಯಕ್ಕಿಲ್ಲ: ಕರ್ನಾಟಕ ಸರ್ಕಾರ]

BENGALURU FASTS AGAINST STEEL FLYOVER

ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ರಂಗಕರ್ಮಿ ಪ್ರಕಾಶ್ ಬೆಳವಾಡಿ ಪ್ರತಿಕ್ರಿಯಿಸಿ, ನಗರದಲ್ಲಿ ದಿನೇ ದಿನೇ ಪರಿಸರ ಕಲುಷಿತಗೊಳ್ಳುತ್ತಿದೆ. ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸ್ವಚ್ಛ ಗಾಳಿ ಸಿಗುವುದು ದುಸ್ತರವಾಗಿದೆ. [ಉಕ್ಕಿನ ಸೇತುವೆ: ತಡೆಯಾಜ್ಞೆಗೆ ಸರ್ಕಾರದ ಮೇಲ್ಮನವಿ]

ಇಂತಹ ಪರಿಸ್ಥಿತಿಯಲ್ಲಿ ಸಾವಿರಾರು ಕೋಟಿ ರು. ವೆಚ್ಚದ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾಗಿ 800 ಮರಗಳನ್ನು ಕಡಿದು ನೆಲಕ್ಕುರುಳಿಸಲು ಮುಂದಾಗಿರುವುದನ್ನು ನೋಡಿದರೆ ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದು ಆರೋಪಿಸಿದರು.

BENGALURU FASTS AGAINST STEEL FLYOVER

ಮುಂದಿನ ದಿನಗಳಲ್ಲೂ ಸರ್ಕಾರ ಹಠಮಾರಿ ಧೋರಣೆ ಮುಂದುವರೆಸಿದರೆ ಉಗ್ರಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಕರಣ ಹಸಿರು ನ್ಯಾಯ ಮಂಡಳಿ ಮುಂದಿದೆ.

ನ್ಯಾಯಾಲಯದಲ್ಲೂ ಹೋರಾಟ ಮುಂದುವರೆಸುತ್ತೇವೆ. ಪರಿಸರಕ್ಕೆ ಹಾನಿ, ಜನರ ದುಡ್ಡು ಪೋಲು ಮಾಡುವುದನ್ನು ತಪ್ಪಿಸುತ್ತೇವೆ ಎಂದರು.

English summary
Bengaluru came together at Freedom Park on Sunday, in a chorus against a mammoth steel flyover project that will strip the city bare of hundreds of fully-grown trees. The Beda Brigade’s Satyagraha has sent a powerful message to the government’s adamant stance on the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X