ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಲಲಿತಾ ಸಂಬಂಧಿ ಎಂದು ಹೀಗೆಲ್ಲಾ ವಂಚನೆ ಮಾಡ್ತಾರಾ?

|
Google Oneindia Kannada News

ಬೆಂಗಳೂರು, ಮಾರ್ಚ್ , 14: ಆಧುನಿಕತೆ ಬೆಳೆದಂತೆ ಅದನ್ನೇ ಆಧಾರವಾಗಿಟ್ಟುಕೊಂಡು ವಂಚನೆ ಮಾಡುವವರು ಹೆಚ್ಚಿಕೊಂಡಿದ್ದಾರೆ. ಬಣ್ಣದ ಮಾತಿಗೆ ಮರುಳಾದ ಫೇಸ್ ಬುಕ್ ಸ್ನೇಹ ಭರ್ಜರಿ ವಂಚನೆಯನ್ನೇ ಮಾಡಿದೆ.

ತಾನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಂಬಂಧಿ ಎಂದು ಹೇಳಿಕೊಂಡ ಆಸಾಮಿಯೊಬ್ಬ ಮಹಿಳೆಯೊಬ್ಬರಿಗೆ 60 ಸಾವಿರ ರು. ವಂಚನೆ ಮಾಡಿದ್ದಾನೆ. ಇದೀಗ ಆಸಾಮಿ ಕಬ್ಬನ್ ಪಾರ್ಕ್ ಪೊಲೀಸರ ವಶದಲ್ಲಿದ್ದಾನೆ.[ದೋಷ ಕಂಡುಹಿಡಿದವಗೆ 10 ಲಕ್ಷ ಇನಾಮು ಕೊಟ್ಟ ಫೇಸ್ಬುಕ್]

bengaluru

ಸುಬ್ರಹ್ಮಣ್ಯಪುರ ರಸ್ತೆಯ ಗೌಡನಪಾಳ್ಯದ ನಿವಾಸಿ ನಿಜಂತನ್‌ ಅಲಿಯಾಸ್‌ ನಿಜು ಜಯರಾಮ್‌ ನನ್ನು ವಂಚನೆ ಆರೋಪದಡಿ ಬಂಧಿಸಲಾಗಿದೆ. ವಂಚನೆಯಿಂದ ಕೊಂಡೊಯ್ದಿದ್ದ ಐಫೋನ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣವೇನು? ಇಂದಿರಾನಗರದ ವೀಣಾ ಮತ್ತು ಉದ್ಯೋಗ ಹುಡುಕುತ್ತಿದ್ದ ನಿಜು ಫೇಸ್ ಬುಕ್ ನಲ್ಲಿ ಸ್ನೇಹಿತರಾಗಿದ್ದಾರೆ. ಫೇಸ್ ಬುಕ್ ನಲ್ಲಿ ನಿರಂತರ ಚಾಟ್ ನಡೆದಿದ್ದು ಮಹಿಳೆಯನ್ನು ಬಣ್ಣದ ಮಾತುಗಳಿಂದ ಮರುಳು ಮಾಡಿದ್ದಾನೆ. ಇಬ್ಬರ ನಡುವಿನ ಸ್ನೇಹ ಗಾಡವಾಗಿದ್ದು ಮೊಬೈಲ್ ಮೂಲಕ ಮಾತುಕತೆ ನಡೆಯಲು ಆರಂಭವಾಗಿದೆ.[ಫೇಸ್ ಬುಕ್ ಸ್ನೇಹ ಕೇವಲ ಹುಸಿ ಸ್ನೇಹವಂತೆ!]

ಐಪೋನ್ ವಂಚನೆ ಐಡಿಯಾ: ಒಂದು ದಿನ ಆರೋಪಿ ನಿಜು "ನಿನಗೆ ಐಫೋನ್‌ ಕೊಡಬೇಕು ಎಂದುಕೊಂಡಿದ್ದೇನೆ. ಹಾಗಾಗಿ ಮೊಬೈಲ್‌ ಆಯ್ಕೆ ಮಾಡಲು ದಯವಿಟ್ಟು ಯುಬಿ ಸಿಟಿಗೆ ಬರಬೇಕು' ಎಂದು ವೀಣಾ ಅವರನ್ನು ಆಹ್ವಾನಿದ್ದಾನೆ. ವೀಣಾ ಹಿಂದೂ ಮುಂದೂ ನೋಡದೇ ಯುಬಿ ಸಿಟಿಗೆ ಧಾವಿಸಿದ್ದಾರೆ. ಅಲ್ಲಿ ಅವಳ ಆಯ್ಕೆಯ ಐಪೋನ್ ಸಹ ಖರೀದಿ ಮಾಡಲಾಗಿದೆ.

ಆದರೆ ಬಿಲ್ಲ ನೀಡುವ ವೇಳೆ ನಾನು ಕಾರ್ಡ್ ಬಿಟ್ಟು ಬಂದಿದ್ದೇನೆ, ನೀನೆ ಹಣ ಕೊಡು ಎಂದು ಆರೋಪಿ ಹೇಳಿದ್ದಾನೆ. ಮಹಿಳೆ ಅಂತೆಯೇ 60 ಸಾವಿರ ರು. ಹಣ ಪಾವತಿ ಮಾಡಿದ್ದಾರೆ.[ಗಡಿಬಿಡಿಯಲ್ಲಿ ಕುಮಾರಸ್ವಾಮಿ ಜಯಾ ಕೇಸಿಗೆ ಮೊಳೆ ಹೊಡೆದರೆ?]

ನನ್ನ ಸ್ನೇಹಿತನದ್ದೇ ಮೊಬೈಲ್ ಅಂಗಡಿಯೊಂದಿದೆ. ಅಲ್ಲಿ ಹೊಸ ಹೊಸ ಅಪ್ಲಿಕೇಶನ್ ಹಾಕಿಸಿಕೊಂಡು ಬರುತ್ತೇನೆ ಎಂದು ಹೇಳಿ ಐಫೋನ್ ತೆಗೆದುಕೊಂಡು ಆರೋಪಿ ಮರೆಯಾಗಿದ್ದಾನೆ.

ಇತ್ತ ವೀಣಾ ಮನೆ ಸೇರಿದ್ದಾರೆ. ಎಷ್ಟು ಹೊತ್ತು ಆದರೂ ಸ್ನೇಹಿತನಿಂದ ಯಾವ ಕರೆಯೂ ಇಲ್ಲ. ಕರೆ ಮಾಡಿದರೆ ಸ್ವಿಚ್ ಆಫ್. ಫೆಸ್ ಬುಕ್ ನಲ್ಲಿ ಸಂದೇಶ ಕಳಿಸಿದರೂ ಉತ್ತರವಿಲ್ಲ.

ಮಹಿಳೆಗೆ ತಾನು ಮೋಸ ಹೋಗಿದ್ದು ಗೊತ್ತಾಗಿದ್ದು ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

English summary
Online Facebook friendship cost a 45-year-old women her iPhone when she befriended a 25-year postgraduate student, who introduced himself as a close relative of Tamil Nadu, Chief Minister Jayalalithaa. He fled away with her iPhone worth Rs 60,000 . It all began when Veena posted a Facebook note regarding her mother's death. Niju Jayaram, the accused befriended her and very soon on met her in February. He gave her a cheque worth Rs 2 lakh to use it when she's needed any financial help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X