ಬೆಂಗಳೂರು: ಅಪ್ರಾಪ್ತ ಯುವತಿ ಮೇಲೆ ಇವೆಂಟ್ ಮ್ಯಾನೇಜರ್ ಅತ್ಯಾಚಾರ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಫೆಬ್ರವರಿ 9: ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 26 ವರ್ಷದ ಇವೆಂಟ್ ಮ್ಯಾನೇಜರ್ ನನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಗದೀಶ್ ಕಪೂರ್ ಬಂಧಿತ. ಹದಿನೇಳು ವರ್ಷದ ಯುವತಿ ನೀಡಿದ ದೂರಿನ ಅನ್ವಯ ಅತನನ್ನು ಪೊಲೀಸರ್ ವಶಕ್ಕೆ ಪಡೆದಿದ್ದಾರೆ.

ಪ್ರಗದೀಶ್ ಮನೆಯಲ್ಲೇ ಶನಿವಾರ ಅತ್ಯಾಚಾರ ನಡೆದಿದೆ. ಮುಂಬೈ ಮೂಲದ ಯುವತಿ ಸದ್ಯಕ್ಕೆ ಬೆಂಗಳೂರಿನಲ್ಲಿ ಫ್ಯಾಷನ್ ಡಿಸೈನ್ ಕೋರ್ಸ್ ಮಾಡುತ್ತಿದ್ದಾಳೆ. ಮಾಡೆಲಿಂಗ್ ಗೆ ಸಂಬಂಧಿಸಿದ ಕೆಲವು ಅಸೈನ್ ಮೆಂಟ್ ಗಳಿವೆ ಎಂದು ಪುಸಲಾಯಿಸಿದ ಪ್ರಗದೀಶ್ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಹಾಲಿಗೆ ಮತ್ತು ಬರುವ ಔಷಧಿ ಬೆರೆಸಿ ನೀಡಿದ್ದಾನೆ.[ತರಬೇತಿ ಪಡೆಯಲು ಬಂದವಳನ್ನೇ ರೇಪ್ ಮಾಡಿದ ಯೋಗ ಗುರು]

Bengaluru event manager held for allegedly raping minor

ಆ ಯುವತಿ ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ ಆತ, ವಿಡಿಯೋ ಕೂಡ ಮಾಡಿಕೊಂಡಿದ್ದಾನೆ. ಆ ವಿಡಿಯೋ ತೋರಿಸಿ, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ ಪ್ರಗದೀಶ್ ಮೇಲೆ ಯುವತಿ ಪೊಲೀಸರಲ್ಲಿ ದೂರು ನೀಡಿದ್ದಾಳೆ. "ಮನೆಯೊಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿದ. ನನ್ನ ಜೊತೆ ಮಲಗು ಎಂದು ಪೀಡಿಸಲಾರಂಭಿಸಿದ

"ನನಗೆ ಹುಷಾರಿಲ್ಲ. ಹೊರಡಬೇಕು ಎಂದು ಅವಸರಿಸಿದಾಗ ಬಲವಂತವಾಗಿ ಹಾಲು ಕುಡಿಯುವಂತೆ ಮಾಡಿದ. ಅ ನಂತರ ನಾನು ಪ್ರಜ್ಞೆ ತಪ್ಪಿದೆ. ಆಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದಾನೆ. ಅದನ್ನು ಡಿಲೀಟ್ ಮಾಡುವಂತೆ ನಾನು ಕೇಳಿದರೆ, ಮತ್ತೊಂದು ಸಲ ನನ್ನ ಜೊತೆ ಮಲಗಿದರೆ ಡಿಲೀಟ್ ಮಾಡ್ತೀನಿ ಅಂದ" ಎಂದು ಆ ಯುವತಿ ಹೇಳಿದ್ದಾಳೆ.[ಸೌಜನ್ಯ ಪ್ರಕರಣ: ಹೆಚ್ಚಿನ ತನಿಖೆಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ]

ಪ್ರಗದೀಶ್ ಬಳಿ ಕೆಲವು ಮಾಡೆಲ್ ಗಳ ಫೋಟೋ ಸಿಕ್ಕಿವೆ. ಅವರನ್ನು ಈತ ಬ್ಲ್ಯಾಕ್ ಮೇಲ್ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Ramamurthy Nagar police in Bengaluru arrested a 26-year-old event manager on Tuesday, for allegedly raping a minor girl student.
Please Wait while comments are loading...