ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಳ್ಳೆ ಗಂಡ ಬೇಕಾಗಿದ್ದಾನೆ, ಇಲ್ಲಿ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಮಾ, 4 : ಮೊದಲೊಂದು ಕಾಲವಿತ್ತು, ಮದುವೆಯಾಗಬೇಕೆಂದಿದ್ದರೆ ದಲ್ಲಾಳಿಗಳನ್ನೇ ನಂಬಿಕೊಳ್ಳಬೇಕಾಗಿತ್ತು. ನಂತರ ಬದಲಾದ ದಿನಗಳಲ್ಲಿ ಮ್ಯಾಟ್ರಿಮೋನಿ, ಶಾದಿ ಡಾಟ್ ಕಾಂ ನಂಥ ವೆಬ್ ಸೈಟ್ ಗಳು ಹುಟ್ಟಿಕೊಂಡವು. ಈಗ ಕಾಲ ಅದನ್ನೆಲ್ಲ ಮೀರಿ ಮುಂದೆ ಸಾಗಿದೆ.

ಫೇಸ್ ಬುಕ್, ಟ್ವಿಟ್ಟರ್ ಗಳು ಕೇವಲ ಸಾಮಾಜಿಕ ಜಾಲತಾಣವಾಗಿ ಉಳಿದುಕೊಂಡಿಲ್ಲ. ಒಂದರ್ಥದಲ್ಲಿ ಗಂಡು ಹೆಣ್ಣಿನ ಸಂಬಂಧ ಬೆಸೆಯುವ ತಾಣಗಳೇ ಆಗಿವೆ ಎಂದರೂ ಅತಿಶಯೋಕ್ತಿಯಲ್ಲ. ಆದರೆ, ಇಲ್ಲೊಬ್ಬಳು ತನಗಿಷ್ಟವಾದ ಹುಡುಗನ ಆಯ್ಕೆಗೆ ಇದೆಲ್ಲವನ್ನು ಮೀರಿದ ವಿಶಿಷ್ಟ ಪ್ರಯತ್ನವೊಂದನ್ನು ಮಾಡಿದ್ದಾಳೆ. ವೆಬ್ ಪೇಜ್ ವೊಂದನ್ನು ಕ್ರಿಯೆಟ್ ಮಾಡಿ ಬಯೋಡಾಟಾ ಕಳಿಸಿ, ಮದುವೆ ಮಾತುಕತೆ ಮಾಡಿ ಎಂದು ಬಹಿರಂಗ ಆಹ್ವಾನ ನೀಡಿದ್ದಾಳೆ.[ರೈಲ್ವೆ ದೂರು ದಾಖಲಿಸಲು ವೆಬ್ ಸೈಟ್, ಮೊಬೈಲ್ ಅಪ್ಲಿಕೇಶನ್]

marriage

ವೆಬ್ ಪೇಜ್ ಗೆ ಸಕತ್ ರೆಸ್ಪಾನ್ಸ್ ಬಂದಿದ್ದು ಈಗಾಗಲೇ 20 ಸಾವಿರಕ್ಕೂ ಅಧಿಕ ಜನ ಲೈಕ್ ಒತ್ತಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ತಮಿಳುನಾಡು ಮೂಲದ ಇಂದುಜಾ ಪಿಳ್ಳೈ ಕ್ರಿಯೆಟ್ ಮಾಡಿರುವ ವೆಬ್ ಪೇಜ್ ಗೆ ಜನ ಮುಗಿಬಿದ್ದು ಲೈಕ್ ಒತ್ತುತ್ತಿದ್ದಾರೆ.

ಅಲ್ಲದೇ ತನಗೆ ಬೇಕಾದ ಹುಡುಗ ಯಾವ ರೀತಿ ಇರಬೇಕು ಎಂಬ ಕಂಡಿಷನ್ ಗಳನ್ನು ಸಾಲಾಗಿ ಮುಂದಿಟ್ಟಿದ್ದಾಳೆ. ಗಡ್ಡ ಬೆಳೆಸಿರಬೇಕು. ಉತ್ಸಾಹದ ಚಿಲುಮೆಯಾಗಿರಬೇಕು. ಉದ್ಯೋಗ ವನ್ನು ದ್ವೇಷ ಮಾಡಬಾರದು. ತಂದೆ ತಾಯಿಯ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು. ಉತ್ತಮವಾದ ಧ್ವನಿ ನಿಮ್ಮದಾಗಿದ್ದರೆ ಅರ್ಜಿ ಮದುವೆಗೆ ಅರ್ಜಿ ಹಾಕಲು ಅಡ್ಡಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ.

ಇಂದುಜಾ ಪಿಳ್ಳೈ ಗೆ ಅವರ ತಂದೆ ತಾಯಿ ಸೂಕ್ತ ವರನನ್ನು ಹುಡುಕುತ್ತಿದ್ದು, ಇತ್ತೀಚಿಗೆ ಪತ್ರಿಕೆಯೊಂದರಲ್ಲಿ ಮಾಮೂಲಿಯಾಗಿ ಎಂದಿನಂತೆ ವರ ಬೇಕಾಗಿದ್ದಾನೆ ಎಂದು ಜಾಹೀರಾತು ನೀಡಿದ್ದರು. ಈ ಜಾಹೀರಾತು ವಿಚಾರ ಇಂದುಜಾಗೆ ಇಷ್ಟವಾಗಲಿಲ್ಲ. ಜಾಹೀರಾತು ನೀಡಿ ಹುಡುಗನ್ನು ಹುಡುಕುವುದಕ್ಕಿಂತ ವೆಬ್ ಪೇಜ್ ಓಪನ್ ಮಾಡಿ, ಯುವಕರೇ ನೇರವಾಗಿ ತಮ್ಮ ವಿವರವನ್ನು ಕಳುಹಿಸಿದರೆ ಉತ್ತಮವಲ್ಲವೇ ಎನ್ನುವ ನಿರ್ಧಾರಕ್ಕೆ ಬಂದ ಟೆಕ್ಕಿ ಷರತ್ತುಗಳುಳ್ಳ ಪುಟವನ್ನು ಓಪನ್ ಮಾಡಿದ್ದಾರೆ.[ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದರೆ ಬಂಧಿಸಲ್ಲ]

"ನಾನು ಕುಡಿಯುವುದಿಲ್ಲ ಮತ್ತು ಸ್ಮೋಕ್ ಮಾಡುವುದಿಲ್ಲ. ಮೊಟ್ಟೆ ತಿನ್ನುತ್ತೇನೆ. ಶಟಲ್ ಬ್ಯಾಡ್ಮಿಂಟನ್ ಆಡುತ್ತೇನೆ. ನೃತ್ಯ ಮತ್ತು ಹಾಡು ಹಾಡುತ್ತೇನೆ. ಜಾಸ್ತಿ ಓದುವುದಿಲ್ಲ. ಉದ್ದ ಕೂದಲು ಬೆಳೆಸಲು ನನಗೆ ಇಷ್ಟವಿಲ್ಲ' ಎಂದು ಇಂದುಜಾ ತನ್ನ ಬಗ್ಗೆ ಬರೆದುಕೊಂಡಿದ್ದಾಳೆ.

ಓಪನ್ ಮಾಡಿದ ಮೂರು ವಾರದಲ್ಲೇ ಪೇಜನ್ನು 2.50 ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದು, ಫೆಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕವು ಸಾವಿರಾರು ಯುವಕರು ತಮ್ಮ ಪ್ರಪೋಸಲ್ ಕಳುಹಿಸಿದ್ದಾರೆ. ಆದರೆ ಯುವಕನ ಆಯ್ಕೆ ಇನ್ನೂ ಫೈನಲ್ ಆಗಿಲ್ಲವಂತೆ. ಅಂದರೆ ಅರ್ಜಿ ಹಾಕಲು ಇನ್ನು ಅವಕಾಶವಿದೆ!

ಇಂದುಜಾ ಅವರ ವೆಬ್ ಪೇಜ್ ಓಪನ್ ಮಾಡಲು ಕ್ಲಿಕ್ ಮಾಡಿ

English summary
Benguluru: A matrimonial webpage created by a startup woman entrepreneur here to rebel against her parents' plan to get her married after they placed an advertisement in a newspaper has gone viral with two lakh page views. In the webpage "marry.induja.com", Induja Pillai, a 23-year-old Tamil girl, has made it clear that she is not a marriage material and would like to marry preferably a bearded man who is passionate about seeing the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X