ಎಂಜಿ ರೋಡಿಗೆ ಬಂದಿದೆ ಶೆಲಾರ್ಕ್ ನ 'ಗ್ರೀನ್ ಪಬ್ '

Posted By:
Subscribe to Oneindia Kannada

ಬೆಂಗಳೂರು, ಜೂನ್ 16: ಬೆಂಗಳೂರು ಪೂರ್ವದ ಹೆಗ್ಗುರುತಾದ ಶೆರ್ಲಾಕ್ಸ್ ಪಬ್ 25ನೇ ವರ್ಷಾಚರಣೆಯನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡಿದ್ದು, ಈ ಶುಕ್ರವಾರ ಇನ್ನೊಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ.

ಬೆಂಗಳೂರು ಮತ್ತು ದುಬೈನಲ್ಲಿ 6 ಪಬ್‍ಗಳ ಕಾರ್ಯಾಚರಣೆ ನಡೆಸುತ್ತಿರುವ ಆ ಪಬ್ ಸರಣಿ ಐತಿಹಾಸಿಕ ಎಂಜಿ ರೋಡ್‍ನಲ್ಲಿ 7ನೇ ತಾಣವನ್ನು ತೆರೆದಿದೆ. ಈಗಷ್ಟೇ ಪ್ರಾರಂಭಗೊಂಡಿರುವ ಶೆರ್ಲಾಕ್ಸ್ ಪಬ್ ನ ಹೈಲೈಟ್ ಎಂದರೆ, ಆಡಳಿತ ಮಂಡಳಿ ತೆಗೆದುಕೊಂಡಿರುವ ಪರಿಸರ ಸ್ನೇಹಿ ಕ್ರಮಗಳು.

ಈ ಬ್ರಿಟಿಷ್ ಸ್ಟೈಲ್ ಪಬ್ ಅನೇಕ ಫೇವರಿಟ್ ಗಳ ತಾಣವಾಗಿದೆ. 'ಪಬ್‍ನೊಂದಿಗೆ ಬೆಳೆದ ಪೋಷಕರ ಒಂದು ಪೀಳಿಗೆಯೇ ಇದೆ. ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ಪ್ರದೇಶಗಳು ದೇಶದ ಪಬ್‍ಗಳ ತಾಣವಾಗಿದೆ.

ನಮ್ಮ ಎಂಜಿ ರೋಡ್ ಪಬ್ ನೀರು, ವಿದ್ಯುತ್ ಸಂರಕ್ಷಣೆಗೆ ಹಾಗೂ ತ್ಯಾಜ್ಯದ ಮರುಬಳಕೆಗೆ ಅನೇಕ ಕ್ರಮಗಳನ್ನು ಅಳವಡಿಸಿಕೊಂಡಿದೆ' ಎನ್ನುತ್ತಾರೆ ಸಾಯಿ ನಟೇಶನ್, ಅಧ್ಯಕ್ಷರು, ಜಸ್‍ಬೀಸ್ ಹಾಸ್ಪಿಟಾಲಿಟಿ ಪ್ರೈ.ಲಿ. ಇವರು ಬೆಂಗಳೂರು ಮೂಲದ ಪಬ್‍ಗಳ ಸರಣಿಯ ಮಾಲೀಕತ್ವ ಹೊಂದಿದ್ದಾರೆ ಹಾಗೂ ನಿರ್ವಹಿಸುತ್ತಿದ್ದಾರೆ.

ಮೊಹಮದ್ ಹ್ಯಾರಿಸ್ ನಲಪಾಡ್

ಮೊಹಮದ್ ಹ್ಯಾರಿಸ್ ನಲಪಾಡ್

ಮೊಹಮದ್ ಹ್ಯಾರಿಸ್ ನಲಪಾಡ್, ಹೊಸದಾಗಿ ಚುನಾಯಿತರಾದ ನಲಪಾಡ್ ಸಮೂಹದ ಕಂಪನಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯಕಾರಿ ನಿರ್ದೇಶಕರು ಎಂಜಿ ರೋಡ್‍ನ ಶೆರ್ಲಾಕ್ಸ್ ಪಬ್ ಅನ್ನು ಉದ್ಘಾಟಿಸಿದರು.

ಮೊಹಮ್ಮದ್ ಹ್ಯಾರಿಸ್ ನಲಪಾಡ್

ಮೊಹಮ್ಮದ್ ಹ್ಯಾರಿಸ್ ನಲಪಾಡ್

ಈ ಸಂದರ್ಭದಲ್ಲಿ ಮಾತನಾಡಿದ ಮೊಹಮ್ಮದ್ ಹ್ಯಾರಿಸ್ ನಲಪಾಡ್,'ಸುಸ್ಥಿರ ಮಾದರಿಯಲ್ಲಿ ಪರಿಸರಸ್ನೇಹಿ ಕ್ರಮಗಳನ್ನು ಕೈಗೊಂಡ ಆಡಳಿತ ಮಂಡಳಿಯ ನಡೆ ಕಂಡು ನನಗೆ ಖುಷಿಯಾಗಿದೆ. ಕಾಸ್ಮೋಪಾಲಿಟನ್ ಬೆಂಗಳೂರಿನ ಯುವಕರು ಹೊಸ ಹ್ಯಾಂಗೌಟ್ ಝೋನ್‍ ಗಳನ್ನು ನೋಡುತ್ತಾರೆ. ಶೆರ್ಲಾಕ್ಸ್ ಸಮೂಹದ ಪಬ್ ಎಂಜಿ ರೋಡ್ ಪ್ರದೇಶದಲ್ಲಿ ಪಬ್ ವ್ಯವಹಾರದ ಸ್ಚಾಂಡರ್ಡ್‍ಗೆ ಬದ್ಧವಾಗಿರುತ್ತದೆ ಎಂಬ ಖಾತ್ರಿ ನನಗಿದೆ' ಎಂದರು.

ರೂಫ್- ಟಾಪ್ ಪರಿಸರವನ್ನು ಹೊಂದಿದೆ

ರೂಫ್- ಟಾಪ್ ಪರಿಸರವನ್ನು ಹೊಂದಿದೆ

ಈ ಪಬ್ ರೂಫ್- ಟಾಪ್ ಪರಿಸರವನ್ನು ಹೊಂದಿದೆ. 72 ಸೀಟುಗಳ ಸಾಮರ್ಥ್ಯವಿದ್ದು, ಸಭೆ ಮತ್ತು ಸಮಾರಂಭಗಳಿಗೆ ಒಂದು ಮಿನಿ ಅರೇನಾ ಇದೆ. ಗೋಡೆಗಳಲ್ಲಿ ವರ್ಟಿಕಲ್ ಗಾರ್ಡನ್‍ ಗಳಿದ್ದು, ಹನಿ ನೀರಾವರಿ ಅಳವಡಿಸಿಕೊಂಡಿದೆ. ಇದರೊಂದಿಗೆ ಮಳೆ ನೀರು ಇಂಗಿಸುವ ಘಟಕವೂ ಇದೆ.

ಶೆರ್ಲಾಕ್ಸ್ ಪಬ್

ಶೆರ್ಲಾಕ್ಸ್ ಪಬ್

ಕಿಚನ್‍ನ ಹಸಿ ತ್ಯಾಜ್ಯವನ್ನು ಕಂಪೋಸ್ಟ್ ಮಾಡಲಾಗುತ್ತದೆ. ಏರ್ ಕಂಡೀಶನಿಂಗ್ ವ್ಯವಸ್ಥೆಯ ಬದಲಾಗಿ ಏರ್ ಕೂಲಿಂಗ್ ಅಳವಡಿಸಿಕೊಳ್ಳಲಾಗಿದೆ. ನೈಸರ್ಗಿಕ ಬೆಳಕಿನ ಗರಿಷ್ಠ ಬಳಕೆಯನ್ನು ನಾವು ಮಾಡಿಕೊಂಡಿದ್ದೇವೆ. ಇದರಿಂದಾಗಿ ಬೇರೆ ಪಬ್‍ಗಳಿಗಿಂತ 70% ರಷ್ಟು ಕಡಿಮೆ ಇಂಧನ ಬಳಕೆಯಾಗಲಿದೆ

ಎಂಜಿ ರೋಡ್‍ನ ಶೆರ್ಲಾಕ್ಸ್ ಪಬ್ ಸಾಂಪ್ರದಾಯಿಕ ಬ್ರಿಟಿಷ್ ಪಬ್ ವಾತಾವರಣ ಮತ್ತು ಸಂಸ್ಕೃತಿಯನ್ನು ಒಳಗೊಂಡಿರಲಿದ್ದು, ಹಗಲು ಹೊತ್ತಿನಲ್ಲಿ "ವರ್ಕ್ ಫ್ರಂ ಪಬ್ " ಆಯ್ಕೆಯನ್ನೂ ಒದಗಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru East’s landmark 'Sherlock’s Pub' recently completed 25 years of glorious existence in Bengaluru. The legendary British style Pub has been a favorite destination of many, now available at MG Road.
Please Wait while comments are loading...