ಬಾಣಸವಾಡಿಯಲ್ಲಿ ಬಾಗಿಲು ತೆರೆದ ಓರಾಯನ್ ಮಾಲ್

Written By:
Subscribe to Oneindia Kannada

ಬೆಂಗಳೂರು, ಜೂನ್. 14: ಬಾಣಸವಾಡಿ ಭಾಗದ ಜನರಿಗೂ ಓರಾಯನ್ ಮಾಲ್ ಆನಂದ ಇನ್ನು ಮುಂದೆ ಲಭ್ಯವಾಗಲಿದೆ. ಬಾಣಸವಾಡಿ ಮುಖ್ಯರಸ್ತೆಯ ಮಾರುತಿಸೇವಾ ನಗರ ಬಳಿ ಓರಾಯನ್ ಈಸ್ಟ್ ಮಾಲ್ ಆರಂಭವಾಗಿದೆ.

ಬ್ರಿಗೇಡ್ ಗ್ರೂಪ್ ಮತ್ತೊಂದು ಮಾಲ್ ನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್ ಉದ್ಘಾಟಿಸಿದರು.[ಬೆಂಗಳೂರು: ಬಡವರ ನೆರವಿಗೆ ನಿಂತ ಓರಾಯನ್ ಮಾಲ್]

bengaluru

ಕಣ್ಣಿಗೆ ಕೋರೈಸುತ್ತಿದ್ದ ವಿದ್ಯುದ್ದೀಪಗಳು ಮತ್ತು ಆಕರ್ಷಕ, ಮನಮೋಹಕವಾದ ಅಲಂಕಾರಗಳೊಂದಿಗೆ ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲಿ ಮಾಲ್ ಉದ್ಘಾಟನೆಗೊಂದಡದ್ದು ವಿಶೇಷವಾಗಿತ್ತು. ಖ್ಯಾತ ಸಂಗೀತ ಕಲಾ ತಂಡ ಕಾರ್ಲ್‍ಟನ್ ಬ್ರಗಾಂಝ ತಂಡದಿಂದ ಸಂಗೀತ ರಸಸಂಜೆಯು ಈ ಅದ್ಧೂರಿ ಉದ್ಘಾಟನೆ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿತು.[ಒರೈಯನ್ ಗೆ ವರ್ಷದ ಅತ್ಯುತ್ತಮ ಶಾಪಿಂಗ್ ಮಾಲ್ ಪ್ರಶಸ್ತಿ]

bengaluru

ಒರಾಯನ್ ಈಸ್ಟ್ ಮಾಲ್ ಗ್ರಾಹಕರಿಗೆ ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮವಾದ ಫ್ಯಾಷನ್ ಉಡುಗೆ-ತೊಡುಗೆಗಳು, ಮನರಂಜನೆ, ಊಟೋಪಚಾರದ ಸೇವೆಗಳನ್ನು ನೀಡಲಿದೆ. ಈ ಒರಾಯನ್ ಈಸ್ಟ್ ಮಾಲ್ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ಉಳಿಯುವಂತೆ ಮಾಡಲಿದೆ ಎಂದು ಸಚಿವರು ಹೇಳಿದರು.[ಅಪರಿಮಿತ ಕೊಡುಗೆಯೊಂದಿಗೆ ಹಾಜರಾದ ಜಬಾಂಗ್, ಅಮೆಜಾನ್]

bengaluru

ಕಮರ್ಷಿಯಲ್ ಅಂಡ್ ರೀಟೇಲ್ ಬ್ರಿಗೇಡ್ ನ ಸಿಇಒ ವಿಶಾಲ್ ಮೀರ್‍ಚಂದಾನಿ ಮಾತನಾಡಿ, ಅತ್ಯುತ್ತಮವಾದ ಶಾಪಿಂಗ್ ಸ್ಪೇಸ್, ಡೈನಿಂಗ್ ಮತ್ತು ಇತರೆ ಮನರಂಜನೆ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವುದು ನಮ್ಮ ಧ್ಯೇಯ. ಈ ಮಾಲ್ ದೇಶದಲ್ಲಿಯೇ ಅತ್ಯುತ್ತಮ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It's here - the much-awaited formal launch of Orion East Mall brought to you by Brigade Group. This superlative shopping and lifestyle destination was inaugurated in a grand style. Orion East Mall was inaugurated by Shri K J George, Hon'ble Minister for Bengaluru Development and Town planning and Mr. M R Jaishankar, Chairman and Managing Director of the Brigade Group.
Please Wait while comments are loading...