ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಡಿದು ವಾಹನ ಚಲಾಯಿಸಿದವರಿಗೆ 2 ದಿನ ಜೈಲೂಟ

|
Google Oneindia Kannada News

ಬೆಂಗಳೂರು, ನವೆಂಬರ್. 18: ಕಂಠ ಪೂರ್ತಿ ಕುಡಿದು ವಾಹನ ಚಲಾವಣೆ ಮಾಡಿಕೊಂಡು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಏನಾಗುತ್ತದೆ? ದಂಡ ಕಟ್ಟಿ ಮನೆಗೆ ಹೋಗಬಹುದು. ಪೊಲೀಸರು ವಾಹನ ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ನಾಳೆಯೋ ನಾಡಿದ್ದೋ ಬಿಡಿಸಿಕೊಂಡು ಬಂದರಾಯಿತು ಎಂದು ಲೆಕ್ಕ ಹಾಕಿತ್ತಿರುವ ಎಲ್ಲರಿಗೆ ಟ್ರಾಫಿಕ್ ನ್ಯಾಯಾಲಯ ಸರಿಯಾದ ಶಾಕ್ ನೀಡಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಆಟೋ ಚಾಲಕ ಸೇರಿ ಇಬ್ಬರಿಗೆ 2 ದಿನಗಳ ಜೈಲು ಶಿಕ್ಷೆ ಮತ್ತು ತಲಾ ರು.3500 ದಂಡ ವಿಧಿಸಿದೆ. ಅಂದರೆ ಕುಡಿದು ವಾಹನ ಚಲಾವಣೆ ಮಾಡಿದರೆ ಜೈಲು ವಾಸ ಗ್ಯಾರಂಟಿ.

Bengaluru: Drunken driving, jail for repeat offenders

ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತ್ರಿವೇಣಿ ನಗರದ ಆಟೋ ಚಾಲಕ ಸರವಣ (38) ಎಂಬುವರು ನ.10ರಂದು ಮದ್ಯಪಾನ ಮಾಡಿ ಆಟೋ ಚಾಲನೆ ಮಾಡುತ್ತಿದ್ದರು. ವೇಳೆ ಪರಿಶೀಲನೆಯಲ್ಲಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.

ಆರೋಪಿ ವಿರುದ್ಧ ಈ ಹಿಂದೆಯು ಮದ್ಯಪಾನ ಮಾಡಿ ವಾಹನ ಚಲಾವಣೆ ಕೇಸ್ ದಾಖಲಾಗಿತ್ತು. ವಿಚಾರಣೆ ನಡೆಸಿದ ಎಂಎಂಟಿಸಿ ನ್ಯಾಯಾಲಯ ದಂಡ ಹಾಗೂ 2 ದಿನ ಜೈಲು ಶಿಕ್ಷೆ ವಿಧಿಸಿದೆ.

ಕುಮಾರಸ್ವಾಮಿ ಲೇಔಟ್ ಬೈಕ್ ಸವಾರ
ಮಕ್ಕಳ ದಿನಾಚರಣೆ ದಿನ ಕುಡಿದು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ನಂದೀಶ್ (30) ಪೊಲೀಸರ ಕೈ ಗೆ ಸಿಕ್ಕಿಬಿದ್ದಿದ್ದರು. ನ್ಯಾಯಾಲಯ ನಂದೀಶ್ ಗೆ 1,500 ರು. ದಂಡ ಮತ್ತು ಎರಡು ದಿನ ಜೈಲು ವಾಸ ಶಿಕ್ಷೆ ನೀಡಿದೆ.

English summary
Bengaluru: As a strict warning to those who drink and drive, two persons who have been identified as repeat offenders for drunken driving, have been sent to jail for two days. In an order by the 6th Magistrate Metropolitan Traffic Court, the judge sentenced Nandish, who was caught by the Kumarswamy Layout Traffic Police, and Sharavana, caught by Yeshwanthpur Traffic Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X