ವಿಧಾನಸೌಧದಲ್ಲೇ ಕಳ್ಳತನ, ಎಂಥಾ ಕಾಲಬಂತು!

Subscribe to Oneindia Kannada

ಬೆಂಗಳೂರು, ಏಪ್ರಿಲ್, 11: ರಾಜ್ಯದ ಶಕ್ತಿ ಕೇಂದ್ರದಲ್ಲಿಯೇ ಕಳ್ಳತನವಾಗಿದೆ. ಶಾಸನಗಳನ್ನು ರೂಪಿಸಿ ಜನರಿಗೆ ನೀಡಬೇಕಾದ ವಿಧಾನಸೌಧದಲ್ಲಿಯೇ ಕಳ್ಳತನವಾಗಿದೆ.

ವಿಧಾನ ಪರಿಷತ್ ಆಡಳಿತ ಶಾಖಾ ಕಚೇರಿಯಲ್ಲಿ ಮಹತ್ವದ ದಾಖಲೆಗಳು ಕಳುವಾಗಿವೆ. ಇದು ಶಕ್ತಿ ಕೇಂದ್ರದ ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ. ವಿಧಾನ ಪರಿಷತ್ ಆಡಳಿತ ಶಾಖಾ ಕಚೇರಿಯ ಬೀಗ ಒಡೆದು ಮಹತ್ವದ ದಾಖಲೆಗಳನ್ನು ಕಳ್ಳತನ ಮಾಡಲಾಗಿವೆ.[ವಿಧಾನ ಸೌಧ ಹಾಗೇ ಇದೆ, ವಿಧಾನ ವೀಧಿ ಬದಲಾಗಿದೆ!]

Vidhana Soudha

ಪೊಲೀಸ್ ಭದ್ರತೆ ನಡುವೆಯೂ ಕನ್ನ ಹಾಕಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಕಳುವಾದ ಪ್ರದೇಶದಲ್ಲಿ ಸಿಸಿಟಿವಿ ಇಲ್ಲ ಎನ್ನಲಾಗಿದೆ. ಯುಗಾದಿ ಹಬ್ಬದ ರಜೆ ದಿನ ಘಟನೆ ನಡೆದಿದೆ ಎನ್ನಲಾಗಿದೆ.

ವಿಧಾನಪರಿಷತ್ ಸಚಿವಾಲಯದ ಆಡಳಿತ ಶಾಖೆ ಕಚೇರಿಯಲ್ಲಿರುವ 159ನೇ ಕೊಠಡಿಯ ಬೀಗ ಮುರಿದು ರಹಸ್ಯ ಕಡತಗಳನ್ನು ಕಳವು ಮಾಡಿರುವ ಘಟನೆ ಭಾನುವಾರ ನಡೆದಿದೆ.[ಈ ಊರಲ್ಲಿ ಇರೋರೆಲ್ಲಾ ಮನೇಲಿ ತರಬೇತಿ ಪಡೆದ ಖತರ್ನಾಕ್ ಕಳ್ಳರು!]

ಕಳ್ಳತನ ನಡೆದಿರುವುದು ಸೋಮವಾರ ಬೆಳಕಿಗೆ ಬಂದಿದೆ.ಈ ಸಂಬಂಧ ಸಚಿವಾಲಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹತ್ವದ ದಾಖಲೆ ಪತ್ರಗಳನ್ನು ಕಳವು ಮಾಡಲಾಗಿದ್ದು, ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದಲೆ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ರಾಜ್ಯದ ಆಡಳಿತ ನಿರ್ವಹಿಸುವ ಸ್ಥಳದಲ್ಲಿ ಪೊಲೀಸ್ ಸರ್ಪಗಾವಲಿನಲ್ಲೇ ಕಳ್ಳತನ ನಡೆದಿರುವುದು ವಿಧಾನಸೌಧದಲ್ಲಿ ಭದ್ರತಾ ಲೋಪವಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: This is the shocking news for Karnataka citizens. Some important files which are related to Vidhana Parishad has been stolen. The incident came to light on Mondaಯ, April 11.
Please Wait while comments are loading...