ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸುತ್ತ ರೈಲ್ವೆ ಗೇಟ್‌ ಅಪಘಾತಕ್ಕೆ ತಿಲಾಂಜಲಿ, ಹೇಗಂತೀರಾ?

By Nayana
|
Google Oneindia Kannada News

ಬೆಂಗಳೂರು, ಜು.4: ಬೆಂಗಳೂರು ಸುತ್ತ ರೈಲ್ವೆ ಗೇಟ್‌ ಅಳವಡಿಸಿ ಅಪಘಾತಕ್ಕೆ ತಿಲಾಂಜಲಿ ಹಾಡಲು ನೈಋತ್ಯ ರೈಲ್ವೆ ಇಲಾಖೆ ಬೆಂಗಳೂರು ವಿಭಾಗವು ಸಜ್ಜಾಗಿದೆ. ರೈಲ್ವೆ ಹಾಗೂ ಜನರ ಹಿತದೃಷ್ಟಿಯಿಂದ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ನಿಗದಿತ ಅವಧಿಗೂ ಮುನ್ನವೇ ತನ್ನ ವ್ಯಾಪ್ತಿಯಲ್ಲಿದ್ದ ಎಲ್ಲಾ ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ ಗೇಟುಗಳು ಇಲ್ಲದಂತೆ ಮುಕ್ತ ಮಾಡಿದೆ.

ರೈಲ್ವೆ ಸಚಿವಾಲಯ ದೇಶದ ಎಲ್ಲ ರೈಲ್ವೆ ವಲಯಗಳಿಗೂ ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ ಗೇಟು ಇರದಂತೆ ಕ್ರಮಕೈಗೊಳ್ಳುವಂತೆ ಈ ವರ್ಷದ ಅಂತ್ಯದವರೆಗೆ ಗಡುವು ನೀಡಿತ್ತು. ಆದರೆ ಬೆಂಗಳೂರು ವಿಭಾಗ ನಿಗದಿತ ಸಮಯದೊಳಗೆ ತನ್ನ ಗುರು ಸಾಧಿಸಿದೆ.

ಹವಾನಿಯಂತ್ರಿತ ರೈಲ್ವೆ ಬೋಗಿಗಳ ಬ್ಲಾಂಕೆಟ್‌ 2 ತಿಂಗಳಿಗೊಮ್ಮೆ ವಾಷ್‌ಹವಾನಿಯಂತ್ರಿತ ರೈಲ್ವೆ ಬೋಗಿಗಳ ಬ್ಲಾಂಕೆಟ್‌ 2 ತಿಂಗಳಿಗೊಮ್ಮೆ ವಾಷ್‌

ಬೆಂಗಳೂರು ರೈಲ್ವೆ ವಿಭಾಗವು 2014ರ ಏಪ್ರಿಲ್‌ನಿಂದ 2018ರ ಜೂನ್‌ವರೆಗೆ 71 ಕಾವಲು ರಹಿತ ಲೆವೆಲ್‌ ಕ್ರಾಸಿಂಗ್‌ ಗೇಟುಗಳನ್ನು ತೆರವುಗೊಳಿಸಿದೆ. ಈ ಪೈಕಿ 48 ಕಾವಲು ರಹಿತ ಲೆವೆಲ್‌ ಕ್ರಾಸಿಂಗ್‌ಗಳನ್ನು ಮುಚ್ಚಿದ್ದು, 23 ಲೆವೆಲ್‌ ಕ್ರಾಸಿಂಗ್‌ಗಳಿಗೆ ಕಾವಲುಗಾರರನ್ನು ನೇಮಿಸಿದೆ.

Bengaluru division becomes unmanned level crossing free area!

ಹಾಗೆಯೇ 42 ಸ್ಥಳಗಳಲ್ಲಿ ರಸ್ತೆ ಕೆಳ ಸೇತುವೆ ಮತ್ತು ಸೀಮಿತ ಎತ್ತರದ ಸಬ್‌ವೇ ಹಾಗೂ 2 ಸ್ಥಳಗಳಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಿಸಿದೆ. ಹಾಗೆಯೇ ರಸ್ತೆಯನ್ನು ಸಮೀಪದ ಲೆವೆಲ್‌ ಕ್ರಾಸಿಂಗ್‌ಗೆ ತಿರುಗಿಸುವುದರ ಮೂಲಕ ಉಳಿದ ಲೆವೆಲ್‌ ಕ್ರಾಸಿಂಗ್‌ಗಳನ್ನು ಮುಚ್ಚಲಾಗಿದೆ.

2017ರ ಏಪ್ರಿಲ್‌ನಲ್ಲಿ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಒಂಭತ್ತು ಕಾವಲು ರಹಿಯ ಲೆವೆಲ್‌ ಕ್ಆಸಿಂಗ್‌ ಗೇಟುಗಳಿದ್ದವು. ವಿಭಾಗವು 2015ರಲ್ಲಿ ಸೂಕ್ಷ್ಮ ಮತ್ತು ಅಪಾಯಕಾರಿ ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಆಗಮಿಸುತ್ತಿರುವ ರೈಲುಗಳ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಸಲು ಗೇಟುಮಿತ್ರರನ್ನು ನೇಮಿಸಿತ್ತು.

ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಅಪಘಾತ ತಪ್ಪಿಸಲು ಆಹೋರಾತ್ರಿ ಗೇಟುಮಿತ್ರರನ್ನು ನೇಮಿಸಿತ್ತು. ಇದೀಗ ಕಾವಲ ರಹಿತ ರೈಲ್ವೆ ಕ್ರಾಸಿಂಗ್‌ ಗೇಟ್‌ ತೆರವುಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ.

English summary
Bengaluru division of south western railway has successfully declared unmanned railway crossing free route in its jurisdiction by removing 71 unmanned gates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X