ರಾಜ ಕಾಲುವೆ ಒತ್ತುವರಿ: 20 ಅಧಿಕಾರಿಗಳ ವಿರುದ್ಧ ಪ್ರಕರಣ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 11 : ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಒಂದೆಡೆ ನಡೆಯುತ್ತಿದ್ದು ಅರಿಯದ ಜನ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ಇದರೊಂದಿಗೆ ಅಮಾನತು ಶಿಕ್ಷೆಗೆ ಗುರಿಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲೆ ಪ್ರಕರಣವೂ ದಾಖಲಾಗಿದೆ.

ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ ಒಟ್ಟು 20 ಜನರ ( ಅಮಾನತಿಗೆ ಗುರಿಯಾದ 14, ನಿವೃತ್ತ 6 ಅಧಿಕಾರಿಗಳ) ವಿರುದ್ಧ ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸಿದೆ.[ರಾಜ ಕಾಲುವೆ ಒತ್ತುವರಿ : 14 ಅಧಿಕಾರಿಗಳ ಅಮಾನತು]

bbmp


ಬುಧವಾರ ರಾಜ್ಯ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿ 14 ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಅಲ್ಲದೇ ಇದೆಲ್ಲದರ ಬಗ್ಗೆ ಇನ್ನು ಹೆಚ್ಚಿನ ವಿವರ ಕಲೆಹಾಕಲು ಬಿಬಿಎಂಪಿ ಮತ್ತು ಸರ್ಕಾರ ಮುಂದಾಗಿದೆ.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]

ಯಾವ ಅಧಿಕಾರಿಗಳ ಹೆಸರು ಪಟ್ಟಿಯಲ್ಲಿದೆ
* ಎಸ್ ಸಿ ಕರಿಗೌಡ (ನಿವೃತ್ತ ಬಿಡಿಎ ಅಧಿಕಾರಿ)
* ಜಿ.ಜೆ ನಾಯಕ್ (ನಿವೃತ್ತ ಬಿಡಿಎ ಅಧಿಕಾರಿ)
* ಡಿ. ಸತ್ಯನಾರಾಯಣ (ನಿವೃತ್ತ ಬಿಡಿಎ ಅಧಿಕಾರಿ)
* ಎಂ ಎನ್ ಶಂಕರ್ ಭಟ್, (ನಿವೃತ್ತ ಬಿಡಿಎ ಕಾನೂನು ಅಧಿಕಾರಿ)
* ಗುರುಪ್ರಸಾದ್( ಸಹಾಯಕ ಇಂಜಿನಿಯರ್, ಬಿಬಿಎಂಪಿ)
* ಗೋವಿಂದರಾಜು(ಜೆಡಿಟಿಪಿ, ಬಿಬಿಎಂಪಿ)
* ಶಶಿಧರ್ (ಎಡಿಟಿಪಿ, ಬಿಬಿಎಂಪಿ)
* ಬಿ ಟಿ ಮೋಹನ್ ಕೃಷ್ಣ( ಡಿಡಿಟಿಪಿ, ಬಿಬಿಎಂಪಿ)
* ಚೌಡೇಗೌಡ( ಹೆಚ್ಚುವರಿ ನಿರ್ದೇಶಕ, ಬಿಬಿಎಂಪಿ, ನಿವೃತ್ತ)
* ಕೆ ವೀರೇಂದ್ರನಾಥ್ (ಹೆಚ್ಚುವರಿ ನಿರ್ದೇಶಕ, ನಿವೃತ್ತ)
* ಮೊಹಮದ್ ಅಬ್ದುಲ್ಲಾ ಅಜೀಂ (ಎಇಇ)
* ಜಿ ಗುರುಮೂರ್ತಿ ( ಎಇಇ)
* ವಿಜಯಕುಮಾರ್ ಡಿ ಪಾಟೀಲ್(ಎಡಿಟಿಪಿ, ಬಿಬಿಎಂಪಿ)
* ಡಿ ಎಸ್ ಸರ್ವೋತ್ತಮರಾಜು(ಎಡಿಟಿಪಿ, ಬಿಬಿಎಂಪಿ)
* ಎಸ್ ಮೃತ್ಯುಂಜಯ (ಎಸ್ ಇ)
* ಟಿ ನಟರಾಜ್ (ಜೆಡಿಟಿಪಿ ಎಸ್)
* ಲಿಖತ್(ಎಇಇ, ಬಿಬಿಎಂಪಿ)
* ಸುನೀತಾ (ಎಇ, ಬಿಬಿಎಂಪಿ)
* ಗಂಗಪ್ಪ (ಎಇಇ, ಬಿಬಿಎಂಪಿ)
* ಮುನಿಕೃಷ್ಣ (ಮುಖ್ಯ ಇಂಜಿನಿಯರ್,ಬಿಬಿಎಂಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A case has been filed against 20 officials who were suspended after it had been found that they were allegedly involved allowing illegal constructions to take place in Bengaluru. Following a directive by the the commissioner of the Bruhat Bengaluru Mahanagara Palike (BBMP), the Bengaluru Metropolitan Task Force has filed cases of corruption against 20 officials of which 6 have retired.
Please Wait while comments are loading...