ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಕರ್ಮಿ ಎ ಎಸ್ ಮೂರ್ತಿ ಸ್ಮರಣೆಗೆ ಕಲೋತ್ಸವ

|
Google Oneindia Kannada News

ಬೆಂಗಳೂರು, ಡಿಸೆಂಬರ್, 16: ರಂಗಕರ್ಮಿ ಎ ಎಸ್ ಮೂರ್ತಿ ಅವರ ಸ್ಮರಣೆ ಹಿನ್ನೆಲೆಯಲ್ಲಿ ಕಲಾಮಂದಿರ ಅಭಿನಯ ತರಂಗ ಮತ್ತು ಹನುಮಂತನಗರ ಬಿಂಬದ ಆಶ್ರಯದಲ್ಲಿ ಎರಡು ದಿನಗಳ 'ಕಲೋತ್ಸವ 2015' ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ಡಿಸೆಂಬರ್ 19 ಮತ್ತು 20 ರಂದು ಹನುಮಂತನಗರದ ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಮಕ್ಕಳು ಮತ್ತು ಹಿರಿಯರಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಿತ್ರ ಬಿಡಿಸುವುದು, ಫೋಟೋ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನ, ಜಾನಪದ ಗೀತೆ ಮತ್ತು ನೃತ್ಯ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಸಂವಾದ, ಕವಿಗಳ ಸಭೆ, ಜಾದೂ ಪ್ರದರ್ಶನ, ಬೀದಿ ನಾಟಕಗಳು, ಮೂಕಾಭಿನಯ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.['ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ]

drama

ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ಕಲಾವಿದ ಎಸ್ ಜಿ ವಸುದೇವ್, ವಿಮರ್ಶಕ ಎಂ ಎಸ್ ಕೃಷ್ಣಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ಕಾರ್ಯಕ್ರಮಗಳನ್ನು ರಂಗಕರ್ಮಿ ಎ ಎಸ್ ಮೂರ್ತಿ ಅವರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಕಲೋತ್ಸವ ಸಮಿತಿ ಗೌರವಾಧ್ಯಕ್ಷ ಅ ರಾ ಮಿತ್ರ ತಿಳಿಸಿದ್ದಾರೆ.[ಅಗಲಿದ ನೆನಪು ಮರೆಸಿ ಶಾಶ್ವತ ಸಂತಸ ಬೆಸೆಯುವ 3ಡಿ ಕಾಸ್ಟಿಂಗ್]

ನಟ ಎಚ್ ಎಸ್ ಸೋಮಶೇಖರ್ ಕಲೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಖ್ಯಾತ ಗಾಯಕಿ ಎಂ ಡಿ ಪಲ್ಲವಿ ಸಂಗೀತ ರಸದೌತಣ ನೀಡಲಿದ್ದಾರೆ. ಎರಡನೇ ದಿನ ಹಿರಿಯ ಕವಿ ಎಚ್ ಎಸ್ ವೆಂಕಟೇಶ್ ಮೂರ್ತಿ ಸಂವಾದ ನಡೆಸಿಕೊಡಲಿದ್ದಾರೆ. ಅಭಿನಯತರಂಗದ ವಿದ್ಯಾರ್ಥಿಗಳಿಂದ ನಾಟಕ ಮತ್ತು ರಘು ದೀಕ್ಷಿತ್ ತಂಡ ಸಂಗೀತ ಸಂಜೆ ನಡೆಸಿಕೊಡಲಿದೆ.

English summary
Bengaluru: ‘Kalotsava 2015', a two-day cultural fair, will be organised by the Kalotsava Samiti, a joint forum of theatre schools Kalamandir, Abhinayataranga and Hanumanthagara Bimba. The event will be held from December 19 on the Kalamandir premises in Hanumanthanagar Bengaluru. The Event being organised in memory of theatre personality A.S. Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X