ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಮೈದುನ ನಾದಿನಿ ಜೋಡಿ

By Ananthanag
|
Google Oneindia Kannada News

ಬೆಂಗಳೂರು, ಜನವರಿ ೦9: ರಾಜ್ಯಕ್ಕೆ ಮುಜುಗರವನ್ನುಂಟು ಮಾಡಿ, ಚರ್ಚೆಗೆ ಕಾರಣವಾಗಿದ್ದ 'ಚುಂಬಿಸಿ,ಯುವತಿಯ ನಾಲಿಗೆ ಕಚ್ಚಿದ' ಆರೋಪ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಮೈದುನ ನಾದಿನಿ ವಿವಾಹವಾಗಲು ಸಮಾಜಕ್ಕೆ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿರುವ ಕಟ್ಟಕತೆ ಎಂಬುದು ಜಗಜ್ಜಾಹೀರವಾಗಿದೆ.

ಬಾಣಸವಾಡಿ ಸಮೀಪದ ಮನೆಯೊಂದರ ಸಮೀಪ ಯುವತಿಯ ತುಟಿ, ನಾಲಿಗೆ ಕಚ್ಚಿ ಪರಾರಿಯಾಗಿದ್ದ ಆರೋಪದ ಮೇಲೆ ಕಾಡುಗೊಂಡನಹಳ್ಳಿ ಪೊಲೀಸರು ಇರ್ಷಾದ್ ಖಾನ್(34) ನನ್ನು ಬಂಧಿಸಿದ್ದರು. ಪೊಲೀಸರ ತೀವ್ರ ವಿಚಾರಣೆ ಬಳಿಕ ಮೈದುನ-ನಾದಿನಿ ಆಟ ಗೋಚರವಾಗಿದೆ.[ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾದ ವಿಕೃತಕಾಮಿ]

Bengaluru cops expose stage managed molestation

ನಾಲ್ಕು ವರ್ಷಗಳಿಂದ ನಾನು ಮತ್ತು ನನ್ನ ನಾದಿನಿ( ಪತ್ನಿಯ ತಂಗಿ) ಪ್ರೀತಿಸುತ್ತಿದ್ದೆವು. ಆಕೆಯನ್ನು ವಿವಾಹವಾಗಲು ಕುಟುಂಬದಲ್ಲಿ ವಿರೋಧವಿತ್ತು ಹೀಗಾಗಿ ಕಮ್ಮನಹಳ್ಳಿ ಪ್ರಕರಣದಂತೆ ಘಟನೆ ಜರುಗಿದರೆ ಆಕೆಯನ್ನು ಯಾರು ವಿವಾಹವಾಗುವುದಿಲ್ಲ ನಾನೇ ಆಕೆಯನ್ನು ಮದುವೆಯಾಗಬಹುದು ಎಂದು ಹೀಗೆ ಮಾಡಿದೆ ಎಂದು ಆರೋಪಿ ಇರ್ಷಾದ್ ಹೇಳಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದರು.[ಯುವತಿಯ ಟಿ ಶರ್ಟ್ ಹಿಡಿದು ಎಳೆದಾಡಿದ ಕಾಮುಕರು]

ಚಿತ್ತೂರು ಮೂಲದ ಇರ್ಷಾದ್ ಖಾಸಗಿ ಕಂಪನಿ ನೌಕರ. ಆತನಿಗೆ ವಿವಾಹವಾಗಿದ್ದು, ಮಡದಿಯ ತಂಗಿಯ ಮೇಲೂ ಆತನಿಗೆ ಕಣ್ಣು ಬಿದ್ದಿದೆ. ಆಕೆಯು ಇದಕ್ಕೆ ಒಪ್ಪಿ ಇಬ್ಬರು ಒಬ್ಬನ್ನೊಬ್ಬರು ಪ್ರೀತಿಸಲು ಮುಂದಾಗಿದ್ದರು. ಹೀಗಾಗಿ ಸಂಚು ರೂಪಿಸಿದ ಇರ್ಷಾದ್ ವಿನೋಬನಗರದಲ್ಲಿದ್ದ ನಾದಿನಿಯನ್ನು ತನ್ನ ಮನೆಗೆ ಕರೆ ತಂದಿದ್ದಾನೆ.

Bengaluru cops expose stage managed molestation

ರಾತ್ರಿಯೇ ಲೆಕ್ಕಾಚಾರ ಹಾಕಿ ಬೆಳಗ್ಗೆ ಯಾವ ಜಾಗದಲ್ಲಿ ನಿಲ್ಲಬೇಕು. ಎಲ್ಲಿ ಸಿಸಿಟಿವಿ ಇದೆ ಮತ್ತು ಯಾವ ಭಾಗದಿಂದ ಆಕ್ರಮಣ ನೆಡೆಸಬೇಕು ಎಂದು ಬೆಳಗ್ಗಿನ ಜಾವ 4:30ಕ್ಕೆ ಎದ್ದು ಸ್ಥಳವನ್ನು ನಿಗದಿ ಮಾಡಿಕೊಂಡಿದ್ದಾನೆ. ಆಕೆಯನ್ನು 5:15 ಸುಮಾರಿಗೆ ಕರೆಮಾಡಿ ಸ್ಥಳಕ್ಕೆ ಆಗಮಿಸುವಂತೆ ಹೇಳಿದ್ದಾನೆ. ನಾದಿನಿ ಗೋವಿಂದಪುರ ಬಸ್ ನಿಲ್ದಾಣದ ಕಡೆಗೆ ನಡೆದು ಹೋಗುತ್ತಿದ್ದಂತೆಯೇ, ಇರ್ಷಾದ್ ದುಷ್ಕರ್ಮಿಯಂತೆ ಆಕ್ರಮಣ ನಡೆಸಿದ್ದಾನೆ.[ಕಮ್ಮನಹಳ್ಳಿ ಪುಂಡರನ್ನು ಪೊಲೀಸರು ಬಂಧಿಸಿದ್ದು ಹೇಗೆ?]

ನಂತರ ಈತನೇ ಸಂಘಟನೆಗಳಿಗೆ ತಿಳಿಸಿದ್ದು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಈತನೇ ಪಡೆದು ಮಾಧ್ಯಮಗಳಿಗೆ ತಲುಪಿಸಿದ್ದಾನೆ. ಇನ್ನು ನಾದಿನಿ ತುಟಿ ನಾಲಿಗೆಯನ್ನು ಪಿನ್ನಿನಲ್ಲಿ ಚುಚ್ಚಿಕೊಂಡು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾಳೆ.[ಕಮ್ಮನಹಳ್ಳಿ ಕಾಮುಕರ ವಿರುದ್ಧ ಸಂತ್ರಸ್ತೆ ನುಡಿದಿದ್ದೇನು?]

ಇರ್ಷಾದ್ ಪ್ರಕರಣ ಕುರಿತಂತೆ ಪೊಲೀಸ್ ಠಾಣೆ ಮುಂದೆ ಸಂಘಟನೆಗಳೊಂದಿಗೆ ಒಡಗೂಡಿ ಪ್ರತಿಭಟಿಸಿದ್ದು, ಅಲ್ಲದೆ ಕ್ರಮಕ್ಕೆ ಒತ್ತಾಯಿಸಿದ್ದ. ಕಮ್ಮನಹಳ್ಳಿ ಪ್ರಕರಣವನ್ನು ಬಳಸಿಕೊಂಡು ಯೋಜನೆ ರೂಪಿಸಿದ್ದ ಈತನಿಗೆ ಯಾವ ರೀತಿ ಶಿಕ್ಷೆಯಾಗಬೇಕೆಂದು ತಜ್ಞರ ಸಲಹೆಯನ್ನು ಪೊಲೀಸರು ಪಡೆದಿದ್ದಾರೆ.

English summary
The Bengaluru east division police on Sunday exposed how a case of molestation was stage managed and misused by an accused in K G Halli of the city. The police managed to crack the case in less than 42 hours after the alleged victim case started contradicting her statements. Thorough investigations into the allegation made by the woman led the police to the fact that the woman as well as the alleged perpetrator knew each other and had stage managed the molestation bid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X