ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸದ ವಾಣಿಜ್ಯ ಸಮ್ಮೇಳನ

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ನವೆಂಬರ್ 05 : ಚೆನ್ನೈನಲ್ಲಿನ ಅಮೆರಿಕ ದೂತಾವಾಸವು ಅಟ್ಲಾಂಟಿಕ್‌ ಕೌನ್ಸಿಲ್‌ ಸೌತ್‌ ಏಷ್ಯಾ ಸೆಂಟರ್‌ ಸಹಯೋಗದಲ್ಲಿ "ಅಮೆರಿಕ-ಭಾರತದ ನಡುವಿನ ವಾಣಿಜ್ಯ ಅವಕಾಶಗಳ ಹುಡುಕಾಟ" ವಾಣಿಜ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಿದೆ.

  ಈ ಸಮ್ಮೇಳನವು ನವೆಂಬರ್‌ 7 ಮತ್ತು 8ರಂದು ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್ ಹೋಟೆಲ್ ನಲ್ಲಿ ನಡೆಯಲಿದೆ.

  "ಉಭಯದೇಶಗಳ ನಡುವಿನ ವಾಣಿಜ್ಯ ಸಂಬಂಧ ಇನ್ನಷ್ಟು ಹೆಚ್ಚಿದೆ. ಪ್ರಸಕ್ತ ವರ್ಷ $114 ಬಿಲಿಯನ್‌ ಡಾಲರ್‌ಗೂ ಅಧಿಕ ವಹಿವಾಟು ನಡೆದಿದೆ. ಆ ಮೂಲಕ ದ್ವಿಮುಖ ಹೂಡಿಕೆ $40 ಬಿಲಿಯನ್‌ ಡಾಲರ್‌ಗೆ ತಲುಪಿದೆ" ಎಂದು ಯು.ಎಸ್‌. ಕಾನ್ಸಲ್‌ ಜನರಲ್‌ ರಾಬರ್ಟ್‌ ಬರ್ಜಸ್‌ ಹೇಳಿದರು.

  Bengaluru Conference to Focus on Unlocking US-India Trade Potential

  "ಅಮೆರಿಕವು ವಿಶ್ವದ ಯಾವುದೇ ದೇಶಗಳಿಗಿಂತ ಹೆಚ್ಚು ಭಾರತೀಯ ವಸ್ತು ಮತ್ತು ಸೇವೆಗಳನ್ನು ಪಡೆಯುತ್ತದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಅಮೆರಿಕದ ಕಂಪನಿಗಳು ಭಾರತದಲ್ಲಿ ಅಮೋಘ ಅವಕಾಶಗಳನ್ನು ಕಾಣುತ್ತಿವೆ. ಅಮೆರಿಕದ ಉದ್ಯೋಗಗಳಿಗೆ ಒತ್ತಾಸೆ ನೀಡುವ ಹೂಡಿಕೆ ಮತ್ತು ವಾಣಿಜ್ಯ ವಹಿವಾಟಿಗೆ ತೆರೆದುಕೊಳ್ಳುವ ಭಾರತದ ಪ್ರಯತ್ನವನ್ನು ನಾವು ಬೆಂಬಲಿಸುತ್ತೇವೆ. ಈ ಸಮ್ಮೇಳನ ಮತ್ತು ಮುಂದಿನ ತಿಂಗಳು ಹೈದರಾಬಾದಿನಲ್ಲಿ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಂತಹ ಉಪಕ್ರಮಗಳು ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿವೆ." ಎಂದು ಅವರು ತಿಳಿಸಿದರು.

  ಕಳೆದ ದಶಕಕ್ಕೆ ಹೋಲಿಸಿದರೆ ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವಹಿವಾಟು ಸುಮಾರು ಐದು ಪಟ್ಟು ಹೆಚ್ಚಿದೆ. ಇನ್ನೂ ಹೆಚ್ಚಲು ಅಗಾಧ ಅವಕಾಶಗಳಿವೆ. "ಅಮೆರಿಕ-ಭಾರತದ ವಾಣಿಜ್ಯ ಅವಕಾಶಗಳ ಹುಡುಕಾಟ" ಸಮ್ಮೇಳನದಲ್ಲಿ ಭಾರತ, ಅಮೆರಿಕ ಮತ್ತು ವಿವಿಧ ದೇಶಗಳ ಉದ್ಯಮಿಗಳು, ವಾಣಿಜ್ಯ ವಹಿವಾಟು ತಜ್ಞರು ಭಾಗವಹಿಸಲಿದ್ದಾರೆ. ಚಿಂತಕರು, ನೀತಿ ನಿರೂಪಕರು ಉದ್ಯಮದ ಸಹಭಾಗಿಗಳ ನಡುವಿನ ಸಂವಾದಕ್ಕೆ ಈ ಸಮ್ಮೇಳನ ವೇದಿಕೆ ಒದಗಿಸಲಿದೆ.

  ಸುಮರು 100ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಅಮೆರಿಕ ಮತ್ತು ಭಾರತದ ನಡುವಿನ ಆರ್ಥಿಕ ಸಹಭಾಗಿತ್ವ, ಬೆಳವಣಿಗೆ ಕುಂಠಿತಗೊಳಿಸುವ ಎಡರು ತೊಡರುಗಳು ಮತ್ತು ಅವುಗಳ ನಿವಾರಣೆಗೆ ಮಾರ್ಗಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಯಾವುದೇ ತೊಡಕಿಲ್ಲದೆ ಉದ್ಯಮ ನಿರ್ವಹಣೆ; ರಕ್ಷಣಾ ವಲಯದಲ್ಲಿ ಸಹಕಾರದ ಹೆಚ್ಚಳ; ಇಂಧನ ವಲಯದಲ್ಲಿನ ಸಹಕಾರದ ಕುರಿತಂತೆ ಇಲ್ಲಿ ಚರ್ಚೆ ನಡೆಯಲಿದೆ.

  ವಿಶ್ವಾದ್ಯಂತ ಇರುವ ಉದಯೋನ್ಮುಖ ಉದ್ಯಮಿಗಳು, ಹೂಡಿಕೆದಾರರು ಮತ್ತು ಉದ್ಯಮ ಮುಖಂಡರು ಒಂದೆಡೆ ಸೇರಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಗೆ ಈ ಸಮ್ಮೇಳನ ಮುನ್ನುಡಿಯಾಗಲಿದೆ. ಹೈದರಾಬಾದ್‌ನಲ್ಲಿ ನವೆಂಬರ್ 28-30, 2017ರಂದು ನಡೆಯಲಿರುವ ಜಿಇಎಸ್‌ 2017 ಶೃಂಗಸಭೆಯ ಆತಿಥ್ಯವನ್ನು ಅಮೆರಿಕ ಮತ್ತು ಭಾರತ ಸರಕಾರಗಳು ಜಂಟಿಯಾಗಿ ವಹಿಸಲಿವೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Bengaluru Conference to Focus on Unlocking US-India Trade Potential. The conference is being conducted by US Consulate in association with Atlantic Council South Asia Center at Taj West End hotel in Bengaluru on 7 and 8 of November.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more