ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವರು ಬಂದರು, ಆಡಳಿತ ಬದಲಾತು: ಕಸ ಹಾಗೇ ಉಳಿತು

|
Google Oneindia Kannada News

ಬೆಂಗಳೂರು, ನವೆಂಬರ್. 20: ಬೆಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಮತ್ತೆ ಉಲ್ಬಣಿಸುತ್ತಿದೆ. ಬಿಬಿಎಂಪಿ ಆಡಳಿತ ಬದಲಾದರೂ, ಬೆಂಗಳೂರು ಅಭಿವೃದ್ಧಿಗೆ ಹೊಸ ಸಚಿವರು ಬಂದರೂ ಪರಿಸ್ಥಿತಿಲ್ಲಿ ಯಾವ ಬದಲಾವಣೆ ಕಂಡುಬರುತ್ತಿಲ್ಲ.

ನಾಲ್ಕೈದು ದಿನಗಳಿಂದ ರಸ್ತೆ ಪಕ್ಕದಲ್ಲಿ ಕೊಳೆಯುತ್ತಿರುವ ತ್ಯಾಜ್ಯ, ಮಳೆಗೆ ಗಾಳಿಗೆ ರಸ್ತೆಗೆ ಬರುವ ಪ್ಲಾಸ್ಟಿಕ್ ಕವರ್ ಗಳು, ಸಹಿಸಲಾರದ ವಾಸನೆ, ಜಾರುಬಂಡಿಯಂತಾದ ರಸ್ತೆಗಳು ಸದ್ಯದ ಬೆಂಗಳೂರು ನಗರದ ಚಿತ್ರಣ.[ಬೆಂಗಳೂರಿನ ರಸ್ತೆಗಳ ತುಂಬಾ ರಾಶಿ-ರಾಶಿ ಕಸ]

ಜಯನಗರ, ವಿದ್ಯಾಪೀಠ, ಎನ್ ಆರ್ ಕಾಲೋನಿ, ಶ್ರೀನಿವಾಸ ನಗರ, ಗಿರಿನಗರ, ಹನುಮಂತನಗರ ಎಲ್ಲ ಕಡೆಯೂ ತ್ಯಾಜ್ಯಗಳದ್ದೇ ಕಾರುಬಾರು. ಪೌರ ಕಾರ್ಮಿಕರು ಶ್ರಮವಹಿಸಿ ಕಸ ವಿಲೇವಾರಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಲೋಡ್ ಆದ ಕಸ ತುಂಬಿದ ಲಾರಿಗಳು ತೆರವಿಗೆ ಬೇರೆಡೆಗೆ ತೆರಳದೇ ಇರುವುದು ಸಮಸ್ಯೆಯಾಗಿ ಮಾಪರ್ಟ್ಟಿದೆ. ಸದ್ಯದ ಕಸದ ಬೆಂಗಳೂರಿನಲ್ಲಿ ಒಂದು ರೌಂಡ್ ಹಾಕಿಕೊಂಡು ಬನ್ನಿ...

ಜಯನಗರ 3ನೇ ಬ್ಲಾಕ್

ಜಯನಗರ 3ನೇ ಬ್ಲಾಕ್

ಜಯನಗರದ 3ನೇ ಬ್ಲಾಕ್ ನಲ್ಲೂ ಕಸ ಸಂಗ್ರಹಣೆಯಾಗಿದೆ. ಕಾಲೇಜು ವಿದ್ಯಾರ್ಥಿಗಳು ಕಸದ ಸಮೀಪವೇ ತೆರಳುತ್ತಿದ್ದ ದೃಶ್ಯ ಕಣ್ಣಿಗೆ ಬಿದ್ದಿದ್ದು ಹೀಗೆ.

ಭುವನೇಶ್ವರಿ ನಗರ

ಭುವನೇಶ್ವರಿ ನಗರ

ಕತ್ತರಿಗುಪ್ಪೆ ಸಮೀಪದ ಭುವನೇಶ್ವರಿ ನಗರದಲ್ಲೂ ಕಸ ಸಂಗ್ರಹಣೆಯಾಗಿದ್ದು ಪೌರ ಕಾರ್ಮಿಕರು ವಿಲೇವಾರಿಗೆ ಹರಸಾಹಸ ಪಡುತ್ತಿದ್ದಾರೆ.

ರಸ್ತೆಯಲ್ಲೇ ಕಸ

ರಸ್ತೆಯಲ್ಲೇ ಕಸ

ಮನೆ ಮನೆಗೆ ಬರುತ್ತಿದ್ದ ಕಸದ ಗಾಡಿಗಳು ತಿರುಗಾಟ ನಿಲ್ಲಿಸಿವೆ. ಪರಿಣಾಮ ಪ್ರತಿ ಮನೆಯ ಮುಂದೆ, ಖಾಲಿ ಸೈಟ್ ಗಳಲ್ಲಿ ಕಸ ಸಂಗ್ರಹವಾಗಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿದ ಸಾಂಕ್ರಾಮಿಕ ರೋಗ ಭೀತಿ

ಹೆಚ್ಚಿದ ಸಾಂಕ್ರಾಮಿಕ ರೋಗ ಭೀತಿ

ನಗರದಲ್ಲಿ ಜಡಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು ಮಲೇರಿಯಾ, ಕಾಲರಾ, ಟೈಫಾಯ್ಡ್‌, ವೈರಾಣು ಜ್ವರ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಭೀತಿ ವ್ಯಕ್ತವಾಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವೂ ಹೆಚ್ಚಿದೆ.

ಬೀದಿನಾಯಿ ಕಾಟ

ಬೀದಿನಾಯಿ ಕಾಟ

ಕಸದ ಪರಿಣಾಮ ಬೀದಿ ನಾಯಿಗಳ ಕಾಟವೂ ಹೆಚ್ಚಿದೆ. ಕೆಲ ರಸ್ತೆಗಳಲ್ಲಿ ರಾತ್ರಿ ಓಡಾಡುವುದು ಮತ್ತಷ್ಟು ದುರ್ಗಮವಾಗಿ ಪರಿಣಮಿಸಿದೆ.

English summary
Bengaluru roads now garbage dump yard. Its Deepavali festival effect. Here is the real picture of the 'garbage city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X