ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗಕರಿಕ ಸ್ನೇಹಿ ಇ-ಆಡಳಿತ ಪ್ರಶಸ್ತಿಗೆ ಪಾತ್ರವಾದ ಬೆಂಗಳೂರು ಪೊಲೀಸ್

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 1: ಸಾರ್ವಜನಿಕರಿಗೆ ಸಹಾಯ ಒದಗಿಸುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುವ ಬೆಂಗಳೂರು ಸಿಟಿ ಪೊಲೀಸರಿಗೆ ಇದೀಗ ಡಬ್ಬಲ್ ಸಂಭ್ರಮ.

ವಿಚಾರವಾದಿಗಳ ಬಂಧಿಸಿದ ಕ್ರಮ ಪ್ರಶ್ನಿಸಿ, ಮಹಾ ಸರ್ಕಾರಕ್ಕೆ ನೋಟಿಸ್ವಿಚಾರವಾದಿಗಳ ಬಂಧಿಸಿದ ಕ್ರಮ ಪ್ರಶ್ನಿಸಿ, ಮಹಾ ಸರ್ಕಾರಕ್ಕೆ ನೋಟಿಸ್

ಸಾಮಾಜಿಕ ಜಾಲತಾಣದಲ್ಲಿ ಉತ್ಸುಕತೆಯಿಂದ ಕೆಲಸ ನಿರ್ವಹಿಸುತ್ತಿರುವ ಕಾರಣ ರಾಜ್ಯದ ಸರ್ಕಾರದ 2016-17ನೇ ಸಾಲಿನ ನಾಗರಿಕ ಸ್ನೇಹಿ ಇ-ಆಡಳಿತ ಪ್ರಶಸ್ತಿಯನ್ನು ಜಿಐಎಸ್ ತಂತ್ರಜ್ಞಾನ ಅಳವಡಿಕೆ, ಮೊಬೈಲ್ ತಂತ್ರಜ್ಞಾನ ಬಳಕೆಯಲ್ಲಿ ಇ-ಲಾಸ್ಟ್ ಅಂಡ್ ಫೌಂಡ್ ವರದಿ ಯೋಜನೆಗಳ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. .

ತಂತ್ರಜ್ಞಾನ ದಿನದಿಂದ ದಿನಕ್ಕೆ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಾ ಮುಂದುವರೆಯುತ್ತಿದೆ, ಅದರ ಜತೆಗೆ ನಮ್ಮ ಭದ್ರತೆಗಾಗಿ ಇರುವ ಪೊಲೀಸ್ ಕೂಡ ಕೈಜೋಡಿಸಿರುವುದು ವಿಶೇಷ ಸಂಗತಿ. ಬೆಂಗಳೂರು ಸಿಟಿ ಪೊಲೀಸರು ಇ-ಲಾಸ್ಟ್ ಅಂಡ್ ಫೌಂಡ್ ವಿಭಾಗದಲ್ಲಿ ಕಳೆದುಕೊಂಡವರ ವಸ್ತುಗಳನ್ನು ಹಿಂದಿರುಗಿಸಲು ಸಾಕಷ್ಟು ಶ್ರಮವಹಿಸಿದ್ದಾರೆ.

ಜೆಜೆ ನಗರ ಪೊಲೀಸ್ ಪೇದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಜೆಜೆ ನಗರ ಪೊಲೀಸ್ ಪೇದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

Bengaluru city police won two awards in digital technology

ಮೊಬೈಲ್, ಟ್ವಿಟ್ಟರ್, ಫೇಸ್ ಬುಕ್ ಮೂಲಕ ಜನರ ಜಾಗೃತಿಗಾಗಿ ಸಾಕಷ್ಟು ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ, ಹಾಗೆಯೇ ಕೇವಲ ಠಾಣೆಗೆ ಬಂದು ದೂರು ನೀಡಿದರೆ ಮಾತ್ರ ಸ್ವೀಕರಿಸುತ್ತೇವೆ ಎನ್ನುವ ಮನೋಭಾವವನ್ನು ಸಂಪೂರ್ಣ ಹೋಗಲಾಡಿಸಿ ನಿಮ್ಮ ರಕ್ಷಣೆ ನಮ್ಮ ಕರ್ತವ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡಿದರೂ ಕೂಡ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಗುರುತಿಸಿರುವ ರಾಜ್ಯ ಸರ್ಕಾರ ನಾಗರಿಕ ಸ್ನೇಹಿ ಇ-ಆಡಳಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

English summary
Bengaluru traffics police has won two awards in implementation of digital technology through social media forum and GIS in Namma 100 service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X