ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Instagam ಗೆ ಎಂಟ್ರಿ ಕೊಟ್ಟ ಬೆಂಗಳೂರು ಪೊಲೀಸರು

ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಕತ್ತಾಗಿ ಸಕ್ರಿಯವಾಗಿ ಜನಮೆಚ್ಚುಗೆ ಗಳಿಸಿರುವ ನಮ್ಮ ಬೆಂಗಳೂರು ಪೊಲೀಸರು ಈಗ ವಿಡಿಯೋ ಹಂಚಿಕೆ ತಾಣ ಇನ್ಸ್ಟಾಗ್ರಾಮ್ ಗೂ ಕಾಲಿರಿಸಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಕತ್ತಾಗಿ ಸಕ್ರಿಯವಾಗಿ ಜನಮೆಚ್ಚುಗೆ ಗಳಿಸಿರುವ ನಮ್ಮ ಬೆಂಗಳೂರು ಪೊಲೀಸರು ಈಗ ಫೋಟೋ, ವಿಡಿಯೋ ಹಂಚಿಕೆ ತಾಣ ಇನ್ಸ್ಟಾಗ್ರಾಮ್ ಗೂ ಕಾಲಿರಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಮೂಲಕ ಬೆಂಗಳೂರು ಪೊಲೀಸ್ ಆಯುಕ್ತ ಕಚೇರಿ ಮಾಹಿತಿ ನೀಡಿದೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರಲ್ಲಿ ಇತ್ತೀಚೆಗೆ 6 ಲಕ್ಷ ಹಿಂಬಾಲಕರನ್ನು ಹೊಂದಿದ ಬೆಂಗಳೂರು ನಗರ ಪೋಲಿಸರು, ಸಾಮಾಜಿಕ ಜಾಲ ತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಮೂಲಕ ಸಾರ್ವಜನಿಕ ಜತೆ ಉತ್ತಮ ಸಂಪರ್ಕ ಹೊಂದಿದ್ದು, ದೇಶದಲ್ಲೇ ವಿಶಿಷ್ಟ ಇಲಾಖೆ ಎನಿಸಿಕೊಂಡಿದೆ.

Bengaluru City Police Department enters Instagram

ದೆಹಲಿ,ಮುಂಬೈ, ಚೆನ್ನೈ, ಕೋಲ್ಕತಾ ದ ಪೊಲೀಸ್ ಇಲಾಖೆಗೆ ಹೋಲಿಸಿದರೆ ನಮ್ಮ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಾರ್ವಜನಿಕರ ಕುಂದು ಕೊರತೆಗಳು, ಕ್ರೈಂ ಮಾಹಿತಿ, ಮುನ್ನಚ್ಚರಿಕೆ ಕ್ರಮಗಳು ಮುಂತಾದ ಸಂದೇಶಗಳನ್ನು ಕಾಣಬಹುದು.

ನಿಮ್ಮ ನಗರಕ್ಕೆ ಸೂಪರ್ ಹೀರೋ ಅಗತ್ಯವಿಲ್ಲ ನಾವಿದ್ದೇವೆ ಎನ್ನುವ ಮೂಲಕ ಇನ್ಸ್ಟ್ರಾಗ್ರಾಮ್ ನಲ್ಲಿ Bengaluru City Police ಹೆಸರಿನಲ್ಲಿ ಖಾತೆ ಹೊಂದಲಾಗಿದೆ. ಈ ಸಮಯಕ್ಕೆ 269 ಹಿಂಬಾಲಕರನ್ನು ಹೊಂದಿದೆ.

English summary
Bengaluru City Police Department has officially entered video and photo sharing social network Instagram. One can contact @BlrCityPolice
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X