ಹೊಸ ವರ್ಷಕ್ಕೆ ಬೆಂಗಳೂರಿಗೆ ನೂತನ ಪೊಲೀಸ್ ಆಯುಕ್ತ

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 31 : ಹೊಸ ವರ್ಷಕ್ಕೆ ಹೊಸ ಪೊಲೀಸ್ ಕಮಿಷನರ್ ಅವರನ್ನು ಬೆಂಗಳೂರು ಪಡೆಯಲಿದೆ. ಪ್ರವೀಣ್ ಸೂದ್ ಅವರು ಜನವರಿ 1ರಿಂದ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರು ಭ್ರಷ್ಟಾಚಾರ ವಿರೋಧಿ ದಳಕ್ಕೆ ವರ್ಗಾವಣೆಗೊಂಡಿರುವ ಎನ್ಎಸ್ ಮೇಘರಿಕ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಐಐಟಿ ದೆಹಲಿಯಲ್ಲಿ ಪದವಿ ಪಡೆದಿರುವ ಪ್ರವೀಣ್ ಸೂದ್ ಅವರು ಮೊದಲು 1989ರಲ್ಲಿ ಮೈಸೂರಿನ ಸಹಾಯಕ ಪೊಲೀಸ್ ಸುಪರಿಂಟೆಂಡ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಮೈಸೂರಿನ ಪೊಲೀಸ್ ಆಯುಕ್ತರಾಗಿಯೂ 2004ರಿಂದ 2007ರವರೆಗೆ ಅವರು ಅಧಿಕಾರ ವಹಿಸಿಕೊಂಡಿದ್ದರು. ['ಹೊಸ ವರ್ಷದ ಪಾರ್ಟಿಗೆ ದಯವಿಟ್ಟು ಕರೆಯಬೇಡಿ!']

Bengaluru city gets new police chief on New year’s eve

ಈ ಮೊದಲು ಡೆಪ್ಯೂಟೇಷನ್ ಮೇಲೆ ಮಾರಿಷಸ್ ಸರಕಾರದ ಸಲಹೆಗಾರರಾಗಿ ಪ್ರವೀಣ್ ಸೂದ್ ಅವರು ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಪಬ್ಲಿಕ್ ಪಾಲಿಸಿ ಮತ್ತು ಮ್ಯಾನೇಜ್ಮೆಂಟ್ ವಿಷಯದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.

ಈ ವರ್ಗಾವಣೆ ಮತ್ತು ನೇಮಕಾತಿಯೊಂದಿಗೆ ಬೆಂಗಳೂರು ಪೂರ್ವ ಮತ್ತು ಪಶ್ಚಿಮ ವಿಭಾಗಕ್ಕೆ ಹೊಸ ಹೆಚ್ಚುವರಿ ಆಯುಕ್ತರು ನೇಮಕಗೊಂಡಿದ್ದಾರೆ. ಹೇಮಂತ್ ನಿಂಬಾಳ್ಕರ್ ಅವರು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ನಿಯೋಜನೆಗೊಂಡಿದ್ದಾರೆ.

ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಮಾಲಿನಿ ಕೃಷ್ಣಮೂರ್ತಿ ಅವರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಮಲ್ ಪಂತ್ ಅವರು ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Praveen Sood IPS is all set to take charge as Bengaluru city's new commissioner of Police. The 1986 batch Karnataka cadre officer previously held the post of ADGP administration. He will succeed current commissioner of police N S Megharikh.
Please Wait while comments are loading...