ಚರ್ಚ್ ಸ್ಟ್ರೀಟ್‌ ಸ್ಫೋಟ, ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

Posted By:
Subscribe to Oneindia Kannada

ಬೆಂಗಳೂರು, ಜುಲೈ 26 : ಬೆಂಗಳೂರಿನಲ್ಲಿ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳ ಚಾರ್ಜ್‌ಶೀಟ್ ಸಲ್ಲಿಸಿದೆ. ಈಗಾಗಲೇ ಪೊಲೀಸರ ವಶದಲ್ಲಿರುವ ಅಲಮ್ ಜೆಬ್ ಅಫ್ರಿದಿ ಸ್ಫೋಟದಲ್ಲಿ ಪಾಲ್ಗೊಂಡಿದ್ದ ಎಂದು ದೋಷಾರೋಷ ಪಟ್ಟಿಯಲ್ಲಿ ಹೇಳಲಾಗಿದೆ.

ಜನವರಿಯಲ್ಲಿ ಎನ್‌ಐಎ ಬೆಂಗಳೂರು, ಮಂಗಳೂರುನಲ್ಲಿ ಐಎಸ್‌ಐಎಸ್ ಬೆಂಲಿಸುತ್ತಿದ್ದ ಉಗ್ರನ್ನು ಬಂಧಿಸಿತ್ತು. ಆಗ
ಅಲಮ್‌ ಜೆಬ್‌ ಅಫ್ರಿದಿ ಅಲಿಯಾಸ್‌ ಮೊಹಮ್ಮದ್‌ ರಫೀಕ್‌ ಅಲಿಯಾಸ್‌ ಜಾವೀದ್‌ನನ್ನು ಬಂಧಿಸಿತ್ತು. ಈತನೇ ಚರ್ಚ್‌ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.[ಸ್ಫೋಟಕ್ಕೆ ಸಿಕ್ಕಿತು 12 ಪುಟದ ದಾಖಲೆ]

2014ರ ಡಿಸೆಂಬರ್ 28ರಂದು ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿನ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಒಬ್ಬ ಮಹಿಳೆ ಈ ಸ್ಫೋಟದಿಂದಾಗಿ ಸಾವನ್ನಪ್ಪಿದ್ದರು.[ಬೆಂಗಳೂರು ಬಾಂಬ್ ಸ್ಫೋಟಕ್ಕೆ ಒಂದು ವರ್ಷ]

ಬೆಂಗಳೂರು ಪೊಲೀಸರು ಮೊದಲು ಸ್ಫೋಟದ ತನಿಖೆ ನಡೆಸುತ್ತಿದ್ದರು. ಕೆಲವು ದಿನಗಳ ನಂತರ ಹೈದರಾಬಾದ್‌ನ ಎನ್‌ಐಎ ವಿಭಾಗಕ್ಕೆ ತನಿಖೆಯನ್ನು ಹಸ್ತಾಂತರ ಮಾಡಲಾಗಿತ್ತು. ತನಿಖೆ ಪೂರ್ಣಗೊಳಿಸಿರುವ ಎನ್‌ಐಎ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದೆ.....

ಯಾವುದೇ ಸುಳಿವು ಸಿಕ್ಕಿರಲಿಲ್ಲ

ಯಾವುದೇ ಸುಳಿವು ಸಿಕ್ಕಿರಲಿಲ್ಲ

ಮೊದಲು ಚರ್ಚ್ ಸ್ಟ್ರೀಟ್‌ ಸ್ಫೋಟದ ತನಿಖೆಯನ್ನು ಆರಂಭಿಸಿದ ಬೆಂಗಳೂರು ನಡೆಸಿದರು. 25 ತಂಡಗಳನ್ನು ರಚನೆ ಮಾಡಿ, ತನಿಖೆ ಆರಂಭಿಸಿದರು. ಈ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೂ ಭೇಟಿ ನೀಡಿ ಸ್ಫೋಟದ ಕುರಿತು ಮಾಹಿತಿ ಸಂಗ್ರಹಿಸಲು ಪ್ರಯತ್ನ ನಡೆಸಿತು. ಆದರೆ, ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

ತನಿಖೆ ಕೈಗೆತ್ತಿಕೊಂಡ ಎನ್‌ಐಎ

ತನಿಖೆ ಕೈಗೆತ್ತಿಕೊಂಡ ಎನ್‌ಐಎ

ಕೇಂದ್ರ ಸರ್ಕಾರದ ಸೂಚನೆಯಂತೆ ಎನ್‌ಐಎ ಚರ್ಚ್‌ಸ್ಟ್ರೀಟ್‌ನಲ್ಲಿ ನಡೆದ ಸ್ಫೋಟದ ತನಿಖೆ ಆರಂಭಿಸಿತು. ಸುಮಾರು 3000 ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, 2 ಕೋಟಿಗೂ ಅಧಿಕ ಪೋನ್‌ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ ಎನ್‌ಐಎ ತನಿಖೆ ನಡೆಸಿತು.

ಸಿಕ್ಕಿಬಿದ್ದ ಆರೋಪಿ

ಸಿಕ್ಕಿಬಿದ್ದ ಆರೋಪಿ

2016ರ ಜನವರಿಯಲ್ಲಿ ಎನ್‌ಐಎ ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಐಎಸ್‌ಐಎಸ್ ಬೆಂಬಲಿಸುತ್ತಿದ್ದ ಶಂಕಿತ ಉಗ್ರರನ್ನು ಬಂಧಿಸಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಬಳಿ ರಫೀಕ್ ಅಲಿಯಾಸ್ ಅಫ್ರಿದಿಯನ್ನು ಬಂಧಿಸಲಾಗಿತ್ತು.

ತಪ್ಪೊಪ್ಪಿಕೊಂಡ ರಫೀಕ್

ತಪ್ಪೊಪ್ಪಿಕೊಂಡ ರಫೀಕ್

ಎನ್‌ಐಎ ಅಧಿಕಾರಿಗಳು ರಫೀಕ್ ವಿಚಾರಣೆ ನಡೆಸಿದಾಗ ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟದಲ್ಲಿ ತಾನು ಭಾಗಿಯಾದ ಬಗ್ಗೆ ಆತ ಹೇಳಿಕೊಂಡಿದ್ದ. ಕೋಕೋನಟ್ ಗ್ರೋವ್ ಹೋಟೆಲ್‌ವೊಳಗೆ ಬಾಂಬ್ ಇಡಲು ರಫೀಕ್ ಪ್ರಯತ್ನ ನಡೆಸಿದ್ದ. ಆದರೆ, ಹೋಟೆಲ್ ಸಿಬ್ಬಂದಿಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಹೋಟೆಲ್ ಗೇಟ್‌ ಬಳಿ ಇಟ್ಟಿದ್ದ.

5 ವರ್ಷದಿಂದ ನಾಪತ್ತೆಯಾಗಿದ್ದ

5 ವರ್ಷದಿಂದ ನಾಪತ್ತೆಯಾಗಿದ್ದ

ಎನ್‌ಐಎ ರಫೀಕ್‌ಗಾಗಿ ಸುಮಾರು 5 ವರ್ಷಗಳಿಂದ ಹುಡುಕಾಟ ನಡೆಸುತ್ತಿತ್ತು. ರಫೀಕ್ ಬಗ್ಗೆ ಮಾಹಿತಿ ನೀಡಿದವರಿಗೆ 3 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಮೂರು ವರ್ಷಗಳಿಂದ ಬೆಂಗಳೂರು ನಗರದ ಹೊರವಲಯದಲ್ಲಿ ವಾಸವಾಗಿದ್ದ ರಫೀಕ್ ಎಸಿ ರಿಪೇರಿ ಮಾಡಿಕೊಂಡು ಜೀವನ ನಡೆಸುತ್ತಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The National Investigation Agency on Monday filed a chargesheet in Bengaluru Church Street blast case. On December 28th 2014 at around 8.33 PM, a bomb went off at Church Street which claimed one life.
Please Wait while comments are loading...