ಇರಾನಿ ಗ್ಯಾಂಗ್ ಸರಗಳ್ಳನ ಬಂಧನ, 27 ಲಕ್ಷ ರು. ಚಿನ್ನಾಭರಣ ವಶ

Posted By:
Subscribe to Oneindia Kannada

ಬೆಂಗಳೂರು, ಮೇ 19 : ನಗರದ ವಿವಿಧ ಬಡಾವಣೆಗಳಲ್ಲಿ ಚಾಲಾಕಿತನದಿಂದ ಮಹಿಳೆಯರ ಸರ ದೋಚುತ್ತಿದ್ದ ಕುಖ್ಯಾತ ಸರಗಳ್ಳನನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದು, ಆತನಿಂದ 27 ಲಕ್ಷ ರು. ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಮನೆಯ ಮುಂದೆ ಹಾಗೂ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರುತಿಸಿ, ಆ ಮಹಿಳೆಯರ ಕುತ್ತಿಗೆಯಿಂದ ಸರ ಅಪಹರಣ ಮಾಡುತ್ತಿದ್ದ.

ಪುಣೆಯ 24 ವರ್ಷದ ಹೈದರ್ ಸೈಯದ್ ನೂರ್ ಇರಾನಿ ಅಲಿಯಾಸ್ ಹೈದರ್ ಎಂಬಾತನೇ ಬಂಧಿತ ವ್ಯಕ್ತಿ. ಮಹಾರಾಷ್ಟ್ರದ ಈ ಕುಖ್ಯಾತ ಆರೋಪಿಯನ್ನು ಸಿಸಿಬಿ ಪೊಲೀಸರು, ಸಂಘಟಿತ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

Bengaluru CCB police nab Irani gang chain snatcher

ಬಂಧಿತ ಆರೋಪಿಯ ವಿಚಾರಣೆಯಿಂದ ಬೆಂಗಳೂರು ನಗರದ ಜ್ಞಾನಭಾರತಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ 4, ಬಾಣಸವಾಡಿ 3, ಚಂದ್ರಲೇಔಟ್ 4, ಹನುಮಂತನಗರದ 2, ಎಚ್.ಎಸ್.ಆರ್ ಲೇಔಟ್‌ನ 2, ಸುಬ್ರಮಣ್ಯಪುರ 2, ಸಂಜಯ್‌ನಗರ 1, ವಿಜಯನಗರ 1, ವಿದ್ಯಾರಣ್ಯಪುರ 1, ವರ್ತೂರು 1, ಯಶವಂತಪುರ 1, ಅಮೃತಹಳ್ಳಿ 1, ಆಡುಗೋಡಿ 1, ಕೋರಮಂಗಲ 1 ಪ್ರಕರಣ ಸೇರಿ 25 ಸರ ಅಪಹರಣ ಪ್ರಕರಣಗಳು ಪತ್ತೆಯಾಗಿರುತ್ತವೆ.

ಪತ್ತೆಯಾದ ಕೇಸುಗಳಿಗೆ ಸಂಬಂಧಪಟ್ಟ ಸುಮಾರು 27 ಲಕ್ಷ ರು. ಬೆಲೆ ಬಾಳುವ 900 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A notorious chain snatcher from an inter-state gang wanted in several cases was arrested on Wednesday by Central Crime Branch sleuths of the City police Bengaluru. Hyder Syed Noor Irani (24), hails from Pune. During the probe he revealed his involvement in about 25 cases.
Please Wait while comments are loading...