ಖೈದಿಗಳಿಗೆ ಮಾದಕ ವಸ್ತು ಮಾರಲು ಯತ್ನಿಸುತ್ತಿದ್ದ 7 ಜನರ ಬಂಧನ

Subscribe to Oneindia Kannada

ಬೆಂಗಳೂರು, ಫೆಬ್ರವರಿ 8: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಖೈದಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡಲು ಯತ್ನಿಸುತ್ತಿದ್ದ 7 ಯುವಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ವ್ಯವಸ್ಥಿತವಾಗಿ ಮಾದಕ ವಸ್ತುಗಳನ್ನು ಖೈದಿಗಳಿಗೆ ಪೂರೈಕೆ ಮಾಡಲು ಮಂಗಳವಾರ ಜೈಲಿನ ಬಳಿ ಹೊಂಚು ಹಾಕಿ ಕುಳಿತಿದ್ದರು. ಈ ವೇಳೆ ಖಚಿತ ಮಾಹಿತಿ ಆಧರಿಸಿ ಮೇಲೆ ದಾಳಿ ನಡೆಸಿದ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸರು 7 ಯುವಕರ ತಂಡವನ್ನು ವಶಕ್ಕೆ ಪಡೆದಿದ್ದಾರೆ.[ಶೂಟೌಟ್ ಕೇಸ್ : 'ಅಗ್ನಿ' ಶ್ರೀಧರ್ ಆರೋಪಿ ನಂ. 8]

Bengaluru: CCB Police arrested 7 drug-suppliers to inmates of Parappana Agrahara Central Jail

ಬಂಧಿತರಿಂದ ಸುಮಾರು 400 ಗ್ರಾಂ ತೂಕದ ಗಾಂಜಾ ಪ್ಯಾಕೇಟುಗಳು, ಮಾದಕ ಮಾತ್ರೆಗಳು, ಮಾದಕ ಇಂಜೆಕ್ಷನ್ ಸಿರಿಂಜ್‍ಗಳು, 2 ದ್ವಿಚಕ್ರ ವಾಹನಗಳು, 7 ಮೊಬೈಲುಗಳನ್ನು ವಶಪಡಿಸಿಕೊಳ್ಳಲಾಗಿದೆ.[ಬಸ್ಸು ಕೆಟ್ಟು ನಿಂತಾಗ ಆಪದ್ಬಾಂಧವನಾದ ಟ್ರಾಫಿಕ್ ಪೊಲೀಸ್!]

ಬಂಧಿತರನ್ನು ದಿಲೀಪ್ ಡಿ, ಸತೀಶ್ ಎಸ್, ಮಣಿಕಂಠ ಕೆ ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಯುವಕರು ಅಪ್ರಾಪ್ತರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru CCB Police arrested 7 drug-suppliers, who try to supply drug to the inmates of Parappana Agrahara Central Jail. Police have been seized 400gms of Ganja, 9 Nitosun tablets, 2 bikes and other things from them.
Please Wait while comments are loading...