ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾನಮತ್ತ ಊಬರ್ ಚಾಲಕ: ಕ್ಯಾಬ್ ಓಡಿಸಿದ ಪ್ರಯಾಣಿಕ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಊಬರ್ ಚಾಲಕನೊಬ್ಬ ಪಾನಮತ್ತನಾಗಿ ಕ್ಯಾಬ್ ಚಲಾಯಿಸಲು ಸಾಧ್ಯವಾಗದೆ ಪ್ರಯಾಣಿಕರೇ ಕ್ಯಾಬ್ ಓಡಿಸಿಕೊಂಡು ಮನೆ ತಲುಪಿದ ಘಟನೆ ಬೆಂಗಳೂರಲ್ಲಿ ನಿಡೆದಿದೆ.

ಉಬರ್ ನಿಂದ ಮಹಾವಂಚನೆ 500 ಮಿಲಿಯನ್ ಡಾಲರ್ ಗುಳಂ? ಉಬರ್ ನಿಂದ ಮಹಾವಂಚನೆ 500 ಮಿಲಿಯನ್ ಡಾಲರ್ ಗುಳಂ?

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಊಬರ್ ಅಪ್ಲಿಕೇಷನ್ ಮೂಲಕ ಸೂರ್ಯ ಒರುಗಂಟಿ ಎಂಬುವವರು ಕ್ಯಾಬ್ ಬುಕ್ ಮಾಡಿದಾಗ ಅಪ್ಲಿಕೇಷನ್ ನಲ್ಲಿದ್ದ ಚಾಲಕನಿಗೂ ಬಂದಿರುವ ಚಾಲಕನಿಗೂ ಸಾಮ್ಯತೆ ಇರಲಿಲ್ಲ. ಆದರೂ ಸೂರ್ಯ ಕ್ಯಾಬ್ ನಲ್ಲಿ ಹತ್ತಿ ಕುಳಿತಾಗ ಕ್ಯಾಬ್ ಚಾಲಕ ವಾಹನ ಓಡಿಸುವ ಸ್ಥಿತಿಯಲ್ಲಿರಲಿಲ್ಲ.

ಆಗ ಪಾನಮತ್ತನಾಗಿ ಓಲಾಡುತ್ತಿರುವುದನ್ನು ಕಂಡ ಪ್ರಯಾಣಿಕ ಸೂರ್ಯ ಆತನನ್ನು ಪಕ್ಕದ ಸೀಟಿನಲ್ಲಿ ಕೂರಿಸಿ ತಾವೇ ಕಾರ್ ಚಲಾಯಿಸಿಕೊಂಡು ಮನೆ ತಲುಪಿದ್ದಾರೆ, ಈ ಎಲ್ಲಾ ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿರುವ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸಂಪೂರ್ಣ ವಿವರಗಳನ್ನು ಅಪ್ ಲೋಡ್ ಮಾಡಿದ್ದಾರೆ.

Bengaluru cabbie drunk, Uber passenger drives car

ಇದಕ್ಕೆ ಟ್ವಿಟ್ಟರ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ಊಬರ್ ಸಂಸ್ಥೆಯು ಪ್ರಕರಣ ಕುರಿತಂತೆ ತಮ್ಮ ಭದ್ರತಾ ವಿಭಾಗದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

ಓಲಾ-ಊಬರ್ ಟ್ಯಾಕ್ಸಿಗಳಿಗೆ ಸರ್ಕಾರದಿಂದಲೇ ರೇಟ್ ಫಿಕ್ಸ್! ಓಲಾ-ಊಬರ್ ಟ್ಯಾಕ್ಸಿಗಳಿಗೆ ಸರ್ಕಾರದಿಂದಲೇ ರೇಟ್ ಫಿಕ್ಸ್!

ಇತ್ತೀಚಿನ ದಿನಗಳಲ್ಲಿ ಊಬರ್ ಹಾಗೂ ಓಲಾದಂತಹ ಅಪ್ಲಿಕೇಷನ್ ಆಧಾರಿತ ಕ್ಯಾಬ್ ಸೇವೆಗಳ ಚಾಲಕರ ವಿರುದ್ಧ ನಾನಾ ರೀತಿಯ ದೂರುಗಳು ಬರುತ್ತಿದ್ದು, ವಿಶೇಷವಾಗಿ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿದ್ದವು.

English summary
An Uber cab passenger has claimed his driver, who was a different person from the one whose name appeared on the app, was in an inebriated condition, facing him to take the wheel to reach his residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X