ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಾಯು ಮಾಲಿನ್ಯ ಏರು ಮುಖ: ವರದಿ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಜನದಟ್ಟಣೆ ವೇಳೆ ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ವಿಪರೀತ ಹೆಚ್ಚಾಗುತ್ತಿರುವ ಆತಂಕಕಾರಿ ಅಂಶ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯುನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದ್ದು, ಕೂಡಲೇ ಪರಿಹಾರ ಹುಡುಕುವ ಅನಿವಾರ್ಯತೆ ಎದುರಾಗಿದೆ.

ಆದರೆ ಉತ್ತರ ಭಾರತದ ನಗರಗಳಿಗಿಂತ ಬೆಂಗಳೂರು ಮಾಲಿನ್ಯ ವಿಚಾರದಲ್ಲಿ ತಕ್ಕಮಟ್ಟಿಗೆ ತೃಪ್ತಿಕರ ಪರಿಸ್ಥಿತಿ ಹೊಂದಿದೆ ಎಂಬ ಅಂಶವೂ ಇದೇ ವೇಳೆ ಗೊತ್ತಾಗಿದೆ. ಆದರೆ ಬೆಂಗಳೂರು ನಾಗರಿಕರು ಉಸಿರಾಡುತ್ತಿರುವ ಗಾಳಿ ಮನುಷ್ಯನಿಗೆ ಯೋಗ್ಯವೆ ಎಂದು ಪರಿಶೀಲಿಸಿದರೆ ಉತ್ತರ ಅಷ್ಟೇನೂ ತೃಪ್ತಿಕರವಾಗಿಲ್ಲ. ವಿಶೇಷವಾಗಿ ಜನದಟ್ಟಣೆ ವೇಳೆ ನಾಗರಿಕರು ಉಸಿರಾಡುತ್ತಿರುವ ವಾಯುವಿನ ಗುಣಮಟ್ಟ ಮಾತ್ರ ಆತಂಕಕಾರಿ ಪ್ರಮಾಣದಲ್ಲಿ ಮಾಲಿನ್ಯಗೊಂಡಿದೆ.

ದೆಹಲಿಯ ಅನಿಷ್ಟ ಮಾಲಿನ್ಯ ಬೆಂಗಳೂರಿಗೂ ಅಮರಿಕೊಂಡಿತೆದೆಹಲಿಯ ಅನಿಷ್ಟ ಮಾಲಿನ್ಯ ಬೆಂಗಳೂರಿಗೂ ಅಮರಿಕೊಂಡಿತೆ

ಮಾಲಿನ್ಯ ನಿಯಂತ್ರಣದ ಮಂಡಳಿಯು ಕೋ-ಮೀಡಿಯಾ ಲ್ಯಾಬ್ ಮತ್ತು ಕ್ಲೈಮೇಟ್ಸ್ ಟ್ರೆಂಡ್ಸ್ ಸಹಯೋಗದಲ್ಲಿ ಏಳು ದಿನಗಳ ಕಾಲ ನಡೆಸಿದ ಅಧ್ಯಯನದಲ್ಲಿ ಬೆಳಗ್ಗೆ ಹಾಗೂ ಸಂಜೆ ತಲಾ ಎರಡು ತಾಸುಗಳಂತೆ ಒಟ್ಟು ನಾಲ್ಕು ತಾಸಿನಲ್ಲಿ ಜನದಟ್ಟಣೆ ವೇಳೆ ಮಾಲಿನ್ಯ ಪ್ರಮಾಣದ 200 ಮೈಕ್ರೋಗ್ರಾಮ್ಸ್ ಪ್ರತಿ ಕ್ಯೂಬಿಕ್ ಮೀಟರ್‌ಗೆ ಇರುವುದು ಕಂಡುಬಂದಿದೆ.

Bengaluru breathes polluted air during peak traffic hours:Study

ಇದು ಅತ್ಯಂತ ಕಳಪೆ ಗಾಳಿಯ ಗುಣಮಟ್ಟವನ್ನು ಸೂಚಿಸುತ್ತದೆ. ಕೋ-ಮೀಡಿಯಾ ಲ್ಯಾಬ್ ಸಮುದಾಯ ಸಂವಹನ ಅಧ್ಯನದಲ್ಲಿ ತೊಡಗಿರುವ ಸಂಸ್ಥೆಯಾಗಿದ್ದರೆ, ಕ್ಲೈಮೇಟ್ ಟ್ರೆಂಡ್ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ.

ನಗರದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಪ್ರಮುಖ ಜನದಟ್ಟಣೆ ಪ್ರದೇಶಗಳಲ್ಲಿ ಜಿಪಿಎಸ್ ಅಳವಡಿಸಿದ ಅಗ್ಗದ ದರದ ಮಾನಿಟರ್‌ಗಳನ್ನಿಟ್ಟು ವಾಯು ಮಾಲಿನ್ಯದ ಪ್ರಮಾಣದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಜಯನಗರ, ಬನಶಂರಿ, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ , ಉತ್ತರಹಳ್ಳಿ, ಎಂಜಿ ರಸ್ತೆ ಹಾಗೂ ಮೇಖ್ರಿ ಸರ್ಕಲ್‌ನಲ್ಲಿ ಅತ್ಯಂತ ಆಘಾತಕಾರಿ ಪ್ರಮಾಣದ ವಾಯು ಮಾಲಿನ್ಯ ಇರುವುದು ಪತ್ತೆಯಾಗಿದೆ.

ಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಂಸ್ಥೆ ಜೊತೆ ಒಪ್ಪಂದಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಂಸ್ಥೆ ಜೊತೆ ಒಪ್ಪಂದ

ಆದರೆ ಈ ವರದಿಯ ಕುರಿತಂತೆ ಸ್ವತಃ ಕೆಎಸ್ ಪಿಸಿಬಿ ಆಕ್ಷೇಪ ಎತ್ತಿದ್ದು, ಅಗ್ಗದ ದರದ ಮಾನಿಟರ್‌ಗಳನ್ನು ಬಳಸಿ, ವಾಯುಮಾಲಿನ್ಯದ ಪ್ರಮಾಣದ ಸಮೀಕ್ಷೆ ನಡೆಸಲಾಗಿದೆ. ಹೀಗಾಗಿ ಇದರ ಡೇಟಾಗಳು ನಿಖರವಾಗಿಲ್ಲ. ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನದ ಉಪಕರಣ ಬಳಸಿ ಸಮೀಕ್ಷೆ ನಡೆಸಿದರೆ ಮಾತ್ರ ನಿಖರ ಮಾಹಿತಿ ಹೊರಬರಲು ಸಾಧ್ಯ ಎಂದಿದೆ.

English summary
Data on ambient air quality from the Karnataka State pollution control Board avreages out pollution through the day. The process claims that Benagluru has either moderate or satisfactory air quality-much better than some cities in northern India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X