ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮಾರ್ಟಿನ್ ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ

|
Google Oneindia Kannada News

ಬೆಂಗಳೂರು, ಜನವರಿ 21: ಐಐಟಿಗಳಿಗೆ ಪ್ರವೇಶ ಕಲ್ಪಿಸುವ 2019ನೇ ಸಾಲಿನ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಜಯನಗರದ ಬೆಂಗಳೂರು ಇಂಟರ್‌ ನ್ಯಾಷನಲ್ ಅಕಾಡೆಮಿ ವಿದ್ಯಾರ್ಥಿ ಕೆವಿನ್ ಮಾರ್ಟಿನ್ ಶೇ.100 ರಷ್ಟು ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

ಎನ್‌ಟಿಎ ಈ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಂಡಿದೆ. ಇದು ಮೊದಲ ಪ್ರಯತ್ನದ (ಅಟೆಮ್ಟ್‌) ಮುಖ್ಯ ಪರೀಕ್ಷೆಯ ಫಲಿತಾಂಶವಾಗಿದೆ. ಎನ್‌ಟಿಇ 2019ರ ಜ.12ರಂದು ದೇಶ ಮತ್ತು ವಿದೇಶಗಳ ಒಟ್ಟು 467 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ಅಟೆಮ್ಟ್‌ ಪರೀಕ್ಷೆಗಳನ್ನು ನಡೆಸಿತ್ತು.

ಈ ಬಾರಿ ಒಟ್ಟು 9,29,198 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎರಡನೇ ಪ್ರಯತ್ನದ ಮುಖ್ಯ ಪರೀಕ್ಷೆಯು ಏಪ್ರಿಲ್‌ ತಿಂಗಳಲ್ಲಿ ನಡೆಯಲಿದೆ.

Bengaluru boy scores 100 percentile in JEE Main

ಶನಿವಾರ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಮುಖ್ಯ ಫಲಿತಾಂಶವನ್ನು ಪ್ರಕಟಿಸಿತ್ತು. ಈ ಬಾರಿ ದೇಶಾದ್ಯಂತ ಒಟ್ಟು 15 ಮಂದಿ ಶೇ. 100 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಇವರಲ್ಲಿ ಕೆವಿನ್ ಮಾರ್ಟಿನ್ ಕೂಡ ಒಬ್ಬರಾಗಿದ್ದಾರೆ. ಕೆವಿನ್ ಅವರು ಜೆಇಇ ಮುಖ್ಯ ಪರೀಕ್ಷೆಗೆ ನಗರದ ಆಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದಿದ್ದರು.

ತಮ್ಮ ಸಂತಸ ಹಂಚಿಕೊಂಡಿರುವ ಕೆವಿನ್ ಮಾರ್ಟಿನ್ ಇಷ್ಟು ಅಂಕ ನನಗೆ ಲಭ್ಯವಾಗಿರುವ ಸಂತಸದ ವಿಷಯ, ಇದರ ಶ್ರೇಯಸ್ಸು ನನ್ನ ಪೋಷಕರು, ಶಿಕ್ಷಕರಿಗೆ ಸಲ್ಲಬೇಕು. ಜೆಇಇ ಪರೀಕ್ಷೆಯಲ್ಲಿ ಕ್ಲಿಷ್ಟ ಸಮಸ್ಯೆಯಗಳನ್ನು ಸುಲಭವಾಗಿ ಬಿಡಿಸುವುದನ್ನು ಆಲೆನ್ ಇನ್‌ಸ್ಟಿಟ್ಯೂಟ್ ಹೇಳಿಕೊಟ್ಟಿತ್ತು ಎಂದು ತಿಳಿಸಿದ್ದಾರೆ.

English summary
Bengaluru boy Kevin Martin is one among the 15 candidates to have scored 100 percentile in the Joint Entrance Examination (JEE) Main 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X