ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಚರ ! ಬಲಿಗಾಗಿ ಕಾದಿವೆ, ಬೆಂಗ್ಳೂರ್ ರಸ್ತೆಗುಂಡಿಗಳು

By Mahesh
|
Google Oneindia Kannada News

ಬೆಂಗಳೂರು, ಜುಲೈ 29: ಮುಂಗಾರು, ಹಿಂಗಾರು, ಸೈಕ್ಲೋನ್ ಯಾವುದೇ ಮಳೆ ಬರಲಿ ತೆಪ್ಪಗೆ ನಿದ್ದೆ ಮಾಡುವುದೇ ನಮ್ಮ ಕೆಲಸ ಎಂಬಂತೆ ವರ್ತಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತ್ತೊಮ್ಮೆ ಮೈಕೊಡವಿಕೊಂಡು ಏಳಬೇಕಿದೆ. ರಸ್ತೆಗುಂಡಿಗಳು ಬಲಿಗಾಗಿ ಕಾದಿವೆ.

ಸುಮಾರು ಹತ್ತು ವರ್ಷಗಳ ಬಳಿಕ ಬೆಂಗಳೂರು ದಕ್ಷಿಣ ಭಾಗದ ಬೇಗೂರು ಹೋಬಳಿಯಲ್ಲಿ ಭಾರಿ ಮಳೆ ಕಂಡು ಬಂದಿದೆ. ಬೇಗೂರು ಕೆರೆ, ಕೋಡಿ ಚಿಕ್ಕನಹಳ್ಳಿ, ಮಡಿವಾಳ ಕೆರೆಗಳು ಕೋಡಿ ಹರಿದಿವೆ. [ಮುಂಗಾರು ಮಳೆ ಎದುರಿಸಲು ನಮ್ಮ ಬೆಂಗಳೂರು ಸಿದ್ಧವೇ?]

2015ರಲ್ಲಿ ರಸ್ತೆಗುಂಡಿಗಳಿಂದ 38 ಜನ ಬಲಿಯಾಗಿದ್ದರೆ, 176 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 182ಕ್ಕೂ ಅಧಿಕ ಅಪಘಾತ ಪ್ರಕರಣಗಳು ದಾಖಲಾಗಿವೆ.

Bengaluru : Beware of Potholes in Monsoon season

ಕರ್ನಾಟಕದಲ್ಲಿ 82 ಸಾವು ನೋವಿಗೆ ರಸ್ತೆ ರಿಪೇರಿ, ರಸ್ತೆ ಗುಂಡಿಯೇ ಕಾರಣವಾಗಿದೆ. ಅವೈಜ್ಞಾನಿಕ ಹಂಪ್ ಗಳಿಂದ ಕೂಡಾ ಅನೇಕ ಸಾವುಗಳನ್ನು ರಾಜ್ಯ ಕಂಡಿದೆ.

ಮಳೆ ಬಂದಾಗ ರಸ್ತೆಗಿಳಿಯಲು ಭಯವಾಗಲು ಕಾರಣ ಅವೈಜ್ಞಾನಿಕ ಹಂಪ್ಸ್, ರಸ್ತೆಗುಂಡಿಗಳು, ತೆರೆದ ಮ್ಯಾನ್ ಹೋಲ್ ಗಳು (2 ಲಕ್ಷಕ್ಕೂ ಅಧಿಕ ಇವೆ). ಹೋಗಲಿ ಮರದ ಕೆಳಗೆ ನಿಲ್ಲೋಣ ಎಂದರೆ ಮರ ಯಾವಾಗ ತಲೆ ಮೇಲೆ ಬೀಳುತ್ತದೆಯೋ ಎಂಬ ಭಯ.

10 ಕಂಟ್ರೋಲ್ ರೂಮ್ ಗಳಿವೆ, 24X7 ಅವಧಿ ಕಾರ್ಯನಿರ್ವಹಿಸುತ್ತದೆ. ಬಿಬಿಎಂಪಿ ಸಹಾಯವಾಣಿ ಸಂಖ್ಯೆ ಈ ಲಿಂಕ್ ನಲ್ಲಿ ಲಭ್ಯ

English summary
Bengaluru : Beware of Potholes this Monsoon season. Potholes claimed 38 lives in 2015. One hundred and eighty-two is the number of road accidents caused by potholes or ‘rutted’ roads in Karnataka in 2015 according a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X