ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ನೆಚ್ಚಿಕೊಂಡ ಬೆಂಗ್ಳೂರು ಮಹಿಳೆಯರೇ ಹುಷಾರ್!

|
Google Oneindia Kannada News

ಬೆಂಗಳೂರು,ಜು. 22: ನೀವು ಒಬ್ಬರೆ ಕೆಲಸ ಮುಗಿಸಿ ಪ್ರತಿದಿನ ಮನೆಗೆ ಲೇಟಾಗಿ ಬರುತ್ತೀರಾ? ಅಥವಾ ಬರುವ ದಾರಿಯಲ್ಲಿ ಯಾವುದಾದರೂ ಉದ್ದದಾದ ಅಂಡರ್ ಪಾಸ್ ಸಿಗುತ್ತದೆಯೇ? ನೀವು ಆಟೋದಲ್ಲಿ ಬರುತ್ತೀರಾ ಇಲ್ಲಾ ಕ್ಯಾಬ್ ಅವಲಂಬಿಸಿಕೊಂಡಿದ್ದೀರಾ? ಯಾಕೆ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಎಂದರೆ ಜಯದೇವ ಆಸ್ಪತ್ರೆ ಸಮೀಪದ ಅಂಡರ್ ಪಾಸ್ ನಲ್ಲಿ ಸೋಮವಾರ ನಡೆದ ಪ್ರಕರಣ ಬೆಂಗಳೂರಿನ ಮಹಿಳೆಯರನ್ನೇ ಬೆಚ್ಚಿಬಿಳಿಸಿದೆ.

ಸೋಮವಾರ ಸಂಜೆ ಬನ್ನೇರುಘಟ್ಟ ರಸ್ತೆ ಕಡೆಯಿಂದ ಬಿಟಿಎಂ ಕಡೆ ತೆರಳಬೇಕಿದ್ದ ಟೆಕ್ಕಿ ನೇಹಾ ಅಗರ್ ವಾಲ್ ಆಟೋವೊಂದನ್ನು ಹಿಡಿದು ತೆರಳುತ್ತಿದ್ದರು ಈ ವೇಳೆನ ನಡೆದ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. [ಮರಳು ಗುಡಿಸುವ ಜಾಲಹಳ್ಳಿ ಪೊಲೀಸ್ ಗೊಂದು ಸಲಾಂ]

auto

ನೇಹಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಘಟನಾವಳಿಗಳ ಚಿತ್ರಣ ವನ್ನು ನೀಡಿದ್ದು ಏನಾಯಿತು ಎಂಬುದನ್ನು ನೀವು ಅವರ ಬಾಯಿಂದಲೇ ಕೇಳಿ,,,

ನಾನು ಬನ್ನೇರುಘಟ್ಟದ ರಸ್ತೆಯಲ್ಲಿ ಕೆಲಸ ಮುಗಿಸಿ ಬಿಟಿಎಂ ಲೇಔಟ್ ಕಡೆ ತರಳಲು ಆಟೋವೊಂದನ್ನು ಏರಿದ್ದೆ. ಜಯದೇವ ಆಸ್ಪತ್ರೆ ಸಮೀಪದ ಅಂಡರ್ ಪಾಸ್ ಪ್ರವೇಶಿಸಿದಾಗ ಇದಕ್ಕಿದ್ದಂತೆ ಆಟೋ ಸೀಟಿನ ಹಿಂದಿನ ಜಾಗಕ್ಕೆ ಯಾರೋ ಬಂದು ಕುಳಿತುಕೊಂಡಂತೆ ಅನಿಸಿತು. ಅಲ್ಲದೇ ವ್ಯಕ್ತಿ ಕೈ ಯಲ್ಲಿ ಮಾರಕಾಸ್ತ್ರವನ್ನು ಹಿಡಿದುಕೊಂಡಿರುವ ಬಗ್ಗೆಯೂ ಅನುಮಾನ ಬಂದಿತು.[ಗುಂಡಿ ಮುಚ್ಚುವ ಟ್ರಾಫಿಕ್ ಪೊಲೀಸ್ ಪೇದೆಗೆ ಸನ್ಮಾನ]

ತಕ್ಷಣಕ್ಕೆ ನನಗೆ ಏನು ಮಾಡಬೇಕು ಎಂದು ತೋಚಲಿಲ್ಲ. ಸುತ್ತಲೂ ಕತ್ತಲು ಬೇರೆ, ಆಟೋ ಅಂಡರ್ ಪಾಸ್ ನಲ್ಲಿ ಚಲಿಸುತ್ತಿತ್ತು. ಒಂದು ಕ್ಷಣ ಯಾವುದೇ ಚಲನ ವಲನ ಮಾಡದೇ ಸುಮ್ಮನೆ ಕುತಿದ್ದೆ.

ಈ ವೇಳೆ ನನ್ನ ನೆರವಿಗೆ ಬಂದಿದ್ದು ಮಳೆ. ನಗರದಲ್ಲಿ ಸಂಜೆ ಸುರಿದ ಮಳೆ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗೋಪಾಲನ್ ಮಾಲ್ ಸಮೀಪ ಆಟೋ ಸಂಚರಿಸುತ್ತಿದ್ದಂತೆ ಏನಾದರಾಗಲಿ ಎಂದು ಕೆಳಕ್ಕೆ ನೆಗದೆ. ಈ ವೇಳೆ ನಾನು ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದೆ. ಆದರೆ ಕಾರು ನಿಧಾನವಾಗಿ ಬರುತ್ತಿದ್ದರಿಂದ ನನಗೆ ಗಂಭೀರ ಗಾಯಗಳಾಗಲಿಲ್ಲ.[ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ]

ನಾನು ಕೆಳಕ್ಕೆ ನೆಗೆದಿದ್ದನ್ನು ನೋಡಿ ಸುತ್ತಲೂ ಜನ ಸೇರಿದ್ದಾರೆ. ಹತ್ತಿರದಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ಸಹ ಆಗಮಿಸಿದ್ದಾರೆ, ಆಟೋ ಟ್ರಾಫಿಕ್ ನಲ್ಲಿಯೇ ಸಿಕ್ಕಿಕೊಂಡಿತ್ತು. ಅದನ್ನು ನಾನು ಪೊಲೀಸರಿಗೆ ತೋರಿಸಿದ್ದೇನೆ. ತಕ್ಷಣ ಆಟೋ ವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿಂಬದಿ ಸೀಟಿನ ಹಿಂದಕ್ಕೆ ನೋಡಿದಾಗ ಕೈಯಲ್ಲಿ ಚಾಕು ಹಿಡಿದು ನಿಂತಿದ್ದ ಹುಡುಗನೊಬ್ಬ ಸಿಕ್ಕಿದ್ದಾನೆ. ಮತ್ತಿಬ್ಬರು ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಮತ್ತೊಂದು ಆಟೋವನ್ನು ಕರೆಸಿ ನನಗೆ ಮನೆಗೆ ತೆರಳಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಬೆಂಗಳೂರು ಪೊಲೀಸರಿಗೆ ಧನ್ಯವಾದ ಅರ್ಪಣೆ ಮಾಡುತ್ತೇನೆ. ಹೀಗೆಂದು ಐಬಿಎಂನಲ್ಲಿ ಇಂಜಿನಿಯರ್ ಆಗಿರುವ ನೇಹಾ ಕರಾಳ ಘಟನೆಯನ್ನು ತಿಳಿಸಿ ಪೊಲೀಸರಿಗೆ ಧನ್ಯವಾದ ಸಲ್ಲಿಕೆ ಮಾಡಿದ್ದಾರೆ. ನೇಹಾ ಅವರ ದಿಟ್ಟತನ ಮತ್ತು ಪೊಲೀಸರ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

English summary
Travelling in an auto in Bengaluru might be dangerous. Beware before boarding an auto rickshaw, check the back side of the rear seat. Neha Agrawal, an IBM employee, had a horrendous experience while travelling in an auto. The incident occurred at busy Jayadeva Circle around 8 pm on Monday, July 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X