ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಧಾನಿಯಿಂದ ಕುಂದಾ ನಗರಿಗೆ ವಿಮಾನ ಸಂಚಾರ ಪುನರಾರಂಭ!

By Nayana
|
Google Oneindia Kannada News

ಬೆಂಗಳೂರು, ಜು.7: ಬೆಂಗಳೂರು, ಬೆಳಗಾವಿ ಮಾರ್ಗದಲ್ಲಿ ಅಲೈಯನ್ಸ್‌ ಏರ್‌ ಕಂಪನಿಯ ವಿಮಾನ ಜು.11ರಿಂದ ಸಂಚರಿಸಲಿದೆ.

ಉದ್ಯಮಿಗಳು, ವ್ಯಾಪಾರಸ್ಥರು, ಗಣ್ಯರು ವಿಮಾನ ಹಾರಾಟ ಆರಂಭವಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ ಇದರೊಂದಿಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಕಳೆ ಬರಲಿದೆ. ಮಂಗಳವಾರ, ಬುಧವಾರ ಮತ್ತು ಶನಿವಾರ ವಿಮಾನ ಸಂಚರಿಸಲಿದೆ. ಮಂಗಳವಾರ ಸಂಜೆ 5.05ಕ್ಕೆ ವಿಮಾನ ಬೆಳಗಾವಿಗೆ ಬರಲಿದ್ದು, 5.35 ಬೆಂಗಳೂರಿಗೆ ಹೊರಡಲಿದೆ.

ಹವಾಮಾನ ವೈಪರೀತ್ಯ: ನವದೆಹಲಿಯಲ್ಲಿ ಭೂ ಸ್ಪರ್ಶ ಮಾಡದ ವಿಮಾನಗಳುಹವಾಮಾನ ವೈಪರೀತ್ಯ: ನವದೆಹಲಿಯಲ್ಲಿ ಭೂ ಸ್ಪರ್ಶ ಮಾಡದ ವಿಮಾನಗಳು

ಬುಧವಾರ ಮತ್ತು ಶನಿವಾರ ಮಧ್ಯಾಹ್ನ 3.35ಕ್ಕೆ ಬೆಳಗಾವಿಗೆ ಆಗಮಿಸಲಿದ್ದು, 4.15ಕ್ಕೆ ಬೆಂಗಳೂರಿಗೆ ಟೇಕ್‌ ಆಫ್‌ ಆಗಲಿದೆ. ಬೇರೆ ಕಂಪನಿಯ ವಿಮಾನಗಳೂ ಶೀಘ್ರದಲ್ಲಿ ಬೆಳಗಾವಿಯಿಂದ ಹಾರಾಟ ಆರಂಭಿಸಲಿವೆ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

Bengaluru-Belagavi air service from July 11

ಬೆಂಗಳೂರಿನಿಂದ ಬೆಳಗಾವಿ ರೈಲು ಅಥವಾ ಬಸ್‌ನಲ್ಲಿ ತೆರಳಲು ಸಾಕಷ್ಟು ಜನದಟ್ಟಣೆ ಇರುತ್ತದೆ, ಅಗತ್ಯವಿದ್ದವರು, ಶೀಘ್ರವಾಗಿ ತೆರಳಬೇಕೆಂದರೆ ಬೆಳಗಾವಿಗೆ ವಿಮಾನದಲ್ಲಿ ತೆರಳಬಹುದಾಗಿದೆ.

ಹುಬ್ಬಳ್ಳಿ ವಿಮಾನ‌ ನಿಲ್ದಾಣ ಉಡಾನ್​ಯೋಜನೆಗೆ ಆಯ್ಕೆಯಾದ ಕಾರಣ ಸ್ಪೈಸ್​ಜೆಟ್​​ಸಂಸ್ಥೆ ಬೆಳಗಾವಿ ಸೇವೆ ರದ್ದುಗೊಳಿಸಿ, ಹುಬ್ಬಳ್ಳಿಯಲ್ಲಿ ಸೇವೆ ಆರಂಭಿಸಿವೆ.

ಈ‌ ಮೊದಲು ಬೆಳಗಾವಿ- ಬೆಂಗಳೂರು ಹಾಗೂ‌ ಬೆಳಗಾವಿ- ಬೆಂಗಳೂರು- ಚೆನ್ನೈ ಮಾರ್ಗ ಮಧ್ಯೆ ನಿತ್ಯ ಎರಡು ವಿಮಾನ‌ ಸಂಚರಿಸುತ್ತಿದ್ದವು. ಕೆಲ‌ ದಿನಗಳಿಂದ ಬೆಳಗಾವಿ-ಚೆನ್ನೈ ‌ವಿಮಾನ ಸೇವೆಯನ್ನು ಸ್ಪೈಸ್ ಜೆಟ್ ರದ್ದುಗೊಳಿಸಿತ್ತು.

English summary
Alliance airlines will resume air service from July 1. Every Tuesday, Wednesday and Saturday service available in this route. It is expected that will help business men in the north Karnataka region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X