ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಯೋಜನೆ ಇಲ್ಲದ ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಮಾ. 18 : ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಮಂಗಳವಾರ ಮಂಡನೆಯಾಗಿದೆ. ಏ.22ಕ್ಕೆ ಬಿಬಿಎಂಪಿ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದ್ದು, ಚುನಾವಣೆ ಎದುರಾಗಲಿದೆ.

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಆನಂದ್ ಅವರು 2015-16ನೇ ಸಾಲಿನ ಒಟ್ಟು 6,729 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದರು. 2014-15ನೇ ಸಾಲಿನಲ್ಲಿ7,779 ಕೋಟಿ ಬಜೆಟ್ ಮಂಡಿಸಿದ್ದ ಪಾಲಿಕೆ ಈ ಬಾರಿ ಬಜೆಟ್ ಗಾತ್ರವನ್ನು ತಗ್ಗಿಸಿಕೊಂಡಿದೆ.

BBMP

ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದೇವೆ : 'ಹಾಸಿಗೆ ಇದ್ದಷ್ಟು ಕಾಲುಚಾಚಿ ಅನುಷ್ಠಾನಗೊಳಿಸಲು ಯೋಗ್ಯವಾದ ಬಜೆಟ್ ನೀಡಿದ್ದೇವೆ. ಅನಗತ್ಯ ಕಾಮಗಾರಿ ಮತ್ತು ಯೋಜನೆಗಳಿಗೆ ಕಡಿವಾಣ ಹಾಕಿದ್ದೇವೆ. ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಸರ್ಕಾರ ಬಜೆಟ್‌ಗೆ ಅನುಮತಿ ನೀಡಿದೆ' ಎಂದು ಮೇಯರ್ ಎನ್.ಶಾಂತಕುಮಾರಿ ಹೇಳಿದ್ದಾರೆ. [ಸಿದ್ದರಾಮಯ್ಯ ಬಜೆಟ್ : ಬೆಂಗಳೂರಿಗೆ ಏನು ಸಿಕ್ತು?]

ಬಜೆಟ್‌ನಲ್ಲಿ ನಗರೋತ್ಥಾನದಡಿ ಮೂಲ ಸೌಕರ್ಯ ಒದಗಿಸಲು 600 ಕೋಟಿ, ಘನತ್ಯಾಜ್ಯ ಮತ್ತು ಕಸ ವಿಲೇವಾರಿಗೆ 415 ಕೋಟಿ, ಕೆರೆ ಅಭಿವೃದ್ಧಿಗೆ 130 ಕೋಟಿ, ಬೀದಿ ದೀಪಗಳ ನಿರ್ವಹಣೆಗೆ 55 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. [ಕರ್ನಾಟಕ ಬಜೆಟ್ ಮುಖ್ಯಾಂಶಗಳು]

ಬಜೆಟ್ ಮುಖ್ಯಾಂಶಗಳು
* ರಾಜ್ಯ ಸರ್ಕಾರದಿಂದ 5,480.47 ಕೋಟಿ ರೂ. ಅನುದಾನಕ್ಕೆ ಮನವಿ
* ಕೇಂದ್ರ, ರಾಜ್ಯ ಸರ್ಕಾರಗಳ ಕಟ್ಟಡಗಳಿಂದ ಸೇವಾ ಶುಲ್ಕ ಕಡ್ಡಾಯ ವಸೂಲು
* ಅತಿಥಿಗೃಹ, ಪಿ.ಜಿ ಹಾಸ್ಟೆಲ್ ವಸತಿಯೇತರ ತೆರಿಗೆ ವ್ಯಾಪ್ತಿಗೆ
* ಭೂಪರಿವರ್ತನೆಯಾದ ಸ್ವತ್ತುಗಳಿಂದ ಸುಧಾರಣಾ ವೆಚ್ಚ ಸಂಗ್ರಹ
* ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಸಿಸಿಟಿವಿ ಆಳವಡಿಕೆ 1 ಕೋಟಿ ಅನುದಾನ
* ಆಸ್ತಿ ತೆರಿಗೆ ಸಂಗ್ರಹದ ಗುರಿ 2,480 ಕೋಟಿ
* ಪಾಲಿಕೆಯ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಆನ್‌ಲೈನ್ ಮೂಲಕ ಮಾಡಲು ಕ್ರಮ
* ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆನೀರು ಕೊಯ್ಲ ಅಳವಡಿಕೆ ಕಡ್ಡಾಯ ಮುಂದುವರಿಕೆ
* ಮಲ್ಲೇಶ್ವರಂನಲ್ಲಿ ಬಹುಮಹಡಿ ವಾಹನ ನಿಲ್ದಾಣ ಮತ್ತು ಮಾರುಕಟ್ಟೆ ನಿರ್ಮಾಣಕ್ಕೆ 20 ಕೋಟಿ
* ಏಪ್ರಿಲ್‌ನಲ್ಲಿ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಲೋಕಾರ್ಪಣೆ
* ಬೃಹತ್, ಸಣ್ಣ ಉದ್ಯಾನವನ ಸೇರಿ 1237 ಪಾರ್ಕ್‌ಗಳ ಅಭಿವೃದ್ಧಿ

English summary
Chairperson of the The Bruhat Bengaluru Mahanagara Palike (BBMP) Taxation and Finance Committee V.Anand presented budget for 2015-16 on Tuesday, March 17. Here is highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X