ಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಂಸ್ಥೆ ಜೊತೆ ಒಪ್ಪಂದ

Posted By: Gururaj
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05 : ಬೆಂಗಳೂರು ನಗರದ ವಾಯುಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಹಭಾಗಿತ್ವ ಸಿಗಲಿದೆ. ಬಿಬಿಎಂಪಿ ಮೇಯರ್ ಸಂಪತ್ ರಾಜ್ ಲಂಡನ್ ಸಂಸ್ಥೆಯ ಜೊತೆ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಬೆಂಗಳೂರು ಬೆಳೆದಂತೆ ವಾಯು ಮಾಲಿನ್ಯವೂ ಹೆಚ್ಚಾಗುತ್ತಿದೆ!

ದೆಹಲಿಯಲ್ಲಿ ಬಿಬಿಎಂಪಿ ಮೇಯರ್ ಸಂಪತ್ ರಾಜ್, ಲಂಡನ್ ಮೇಯರ್ ಸಾದಿಕ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಸಿ40 ಸಂಸ್ಥೆ ಜೊತೆ ಬಿಬಿಎಂಪಿ ಒಪ್ಪಂದ ಮಾಡಿಕೊಳ್ಳಲಿದ್ದು, ಇದು ವಾಯು ಮಾಲಿನ್ಯದ ಕುರಿತು ತಪಾಸಣೆ ನಡೆಸಿ ಪರಿಹಾರ ಸೂಚಿಸಲಿದೆ.

ವಾಯುಮಾಲಿನ್ಯದಲ್ಲಿ ಮೋದಿಯ ವಾರಣಾಸಿಗೆ ಅಗ್ರಸ್ಥಾನ!

ಲಂಡನ್ ಮೂಲದ ಸಿಟೀಸ್ ಕ್ಲೈಮೆಟ್ ಲೀಡರ್ ಶಿಪ್ ಗ್ರೂಪ್ (ಸಿ40) ಸಂಸ್ಥೆ ಮಹಾನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಲಹೆ ನೀಡುತ್ತದೆ. ವಿಶ್ವದ 90ಕ್ಕೂ ಹೆಚ್ಚು ಮಹಾನಗರಗಳನ್ನು ಸಿ40 ಸಂಸ್ಥೆ ಆಯ್ಕೆ ಮಾಡಿಕೊಳ್ಳಲಿದೆ.

ವಾಯುಮಾಲಿನ್ಯ : ಬೆಂಗಳೂರು ಸಹ ಅಪಾಯದ ಅಂಚಿನಲ್ಲಿ!

ಬೆಂಗಳೂರು ನಗರದ ಮಾಲಿನ್ಯದ ಬಗ್ಗೆಯೂ ಅಧ್ಯಯನ ನಡೆಸುತ್ತೇವೆ ಎಂದು ಸಿ40 ಬಿಬಿಎಂಪಿಗೆ ಪತ್ರ ಬರೆದಿತ್ತು. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಒಟ್ಟಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಉತ್ತರ ಬರೆದಿದ್ದರು. ಇಂದು ದೆಹಲಿಯಲ್ಲಿ ಲಂಡನ್ ಮೇಯರ್ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

ಲಂಡನ್ ಮೇಯರ್ ಭೇಟಿ

ಲಂಡನ್ ಮೇಯರ್ ಭೇಟಿ

ದೆಹಲಿಯಲ್ಲಿ ಬಿಬಿಎಂಪಿ ಮೇಯರ್ ಸಂಪತ್ ರಾಜ್, ಲಂಡನ್ ಮೇಯರ್ ಸಾದಿಕ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತ ಒಪ್ಪಂದ ಡಿ.7ರಂದು ನಡೆಯಲಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

1 ವರ್ಷದ ಕಾರ್ಯಕ್ರಮ

1 ವರ್ಷದ ಕಾರ್ಯಕ್ರಮ

ಒಡಂಬಡಿಕೆ ಪ್ರಕಾರ ಇದು ಒಂದು ವರ್ಷದ ಕಾರ್ಯಕ್ರಮವಾಗಿದೆ. ಸುಮಾರು 64 ಕೋಟಿ ಅನುದಾನ ಸಿಗಲಿದೆ. ಈ ಹಣದಲ್ಲಿ ಬೆಂಗಳೂರು ನಗರದಾದ್ಯಂಂತ 1000 ವಾಯುಗುಣಮಟ್ಟ ಮೇಲ್ವಿಚಾರಣಾ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ.

ಮೇಯರ್ ಹೇಳಿದ್ದೇನು?

ಮೇಯರ್ ಹೇಳಿದ್ದೇನು?

ಮಾಧ್ಯಮಗಳ ಜೊತೆ ಮಾತನಾಡಿರುವ ಬೆಂಗಳೂರು ಮೇಯರ್ ಸಂಪರ್ ರಾಜ್, ‘ಪ್ರಸ್ತುತ ನಗರದಲ್ಲಿ 19 ಕಡೆ ಮಾಲಿನ್ಯ ಮಾಪಕ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಿತರ ಪ್ರದೇಶಗಳಲ್ಲಿಯೂ ಆಳವಡಿಸಲಾಗುತ್ತದೆ' ಎಂದು ಹೇಳಿದರು.

ಸಿ40 ಗ್ರೂಪ್ ಏನು ಮಾಡುತ್ತದೆ?

ಸಿ40 ಗ್ರೂಪ್ ಏನು ಮಾಡುತ್ತದೆ?

ಸಿ40 ಸಂಸ್ಥೆ ತನ್ನ ಜಾಲದಲ್ಲಿರುವ ನಗರಗಳಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಗಮನಹರಿಸಲಿದೆ. ವಾಯು ಮಾಲಿನ್ಯ ಗುಣಮಟ್ಟದ ಮೇಲ್ವಿಚಾರಣೆ, ಪರಿಹಾರದ ಕುರಿತು ಚರ್ಚಿಸಲಾಗುತ್ತದೆ. ವಾಯು ಮಾಲಿನ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಜತೆಗೆ ಸುಸ್ಥಿರ ನಗರ ಅಭಿವೃದ್ಧಿ ಮಾಡುವುದು ಹೇಗೆ? ಎಂದು ವಿಚಾರ ವಿನಿಮಯವನ್ನು ಮಾಡಲಿದೆ.

'ಮತ್ತೊಂದು ದೆಹಲಿಯಾಗಲು ಬಿಡಬಾರದು'

'ಮತ್ತೊಂದು ದೆಹಲಿಯಾಗಲು ಬಿಡಬಾರದು'

‘ಬೆಂಗಳೂರು ನಗರದಲ್ಲಿ 20-30 ವರ್ಷಗಳಿಂದ ಸಂಚಾರ ನಡೆಸುತ್ತಿರುವ ವಾಹನಗಳು ನಗರಕ್ಕೆ ಅಪಾಯಕಾರಿಯಾಗಿವೆ. ನಗರದಲ್ಲಿ ನೋಂದಣಿಯಾಗಿರುವ ವಾಹನಗಳ ಮಾಹಿತಿ ಮಾತ್ರ ಇದೆ. ಆದರೆ, ಬೇರೆ ನಗರಗಳಿಂದ ಬಂದಿರುವ ವಾಹನಗಳ ಮಾಹಿತಿ ಇಲ್ಲ. ಬೆಂಗಳೂರು ಮತ್ತೊಂದು ದೆಹಲಿಯಾಗಲು ಬಿಡಬಾರದು' ಎಂದು ಮೇಯರ್ ಸಂಪರ್ ರಾಜ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru is all set to join hands with the C40 Cities Climate Leadership Group (C40) an international organisation. C40 will focusing on tackling climate change and greenhouse gas emissions. BBMP will sign an agreement with the C40 soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ