ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್‌ನ ಗಾಜು ಒಡೆದು ಪುಡಿಪುಡಿ ಮಾಡಿದ ಟ್ರಾಫಿಕ್ ಎಎಸ್ಐ, ಕಾರಣವೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಟ್ರಾಫಿಕ್ ಉಲ್ಲಂಘಿಸಿದ ಕಾರಣಕ್ಕೆ ಟ್ರಾಫಿಕ್ ಎಎಸ್ಐ ಬಸ್‌ನ ಗಾಜನ್ನೇ ಒಡೆದು ಪುಡಿಪುಡಿ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಅನುಮತಿ ಇಲ್ಲದೆ ಮೇಲ್ಸೇತುವೆ ಮೇಲೆ ಸಂಚರಿಸುತ್ತಿದ್ದ ಚಾಲಕನಿಗೆ ಕೈ ತೋರಿಸಿದರೂ ಬಸ್‌ ನಿಲ್ಲಿಸಲಿಲ್ಲ ಅದಕ್ಕೆ ಕೋಪಗೊಂಡ ಟ್ರಾಫಿಕ್ ಎಎಸ್‌ಐ ಬಸ್‌ಗೆ ಹೆಲ್ಮೆಟ್‌ನಿಂದ ಹೊಡೆದು ಗಾಜು ಪುಡಿಪುಡಿ ಮಾಡಿದ್ದಾರೆ.

 ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ

ಮಡಿವಾಳ ಠಾಣೆಯ ಸಹಾಯಕ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಕರೆದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Bengaluru: ASI damages bus glass pane

ಬೆಳಗ್ಗೆ 11ರ ಸುಮಾರಿಗೆ ಚನ್ನಪಟ್ಟಣ ಡಿಪೋದ ಕೆಎಸ್‌ಆರ್‌ಟಿಸಿ ಬಸ್ ಹೊಸೂರು ಕಡೆಯಿಂದ ಕಲಾಸಿಪಾಳ್ಯಕ್ಕೆ ತೆರಳುತ್ತಿತ್ತು. ಸಿಲ್ಕ್‌ಬೋರ್ಡ್ ನ ಸಮೀಪ ಅಂಡರ್‌ಪಾಸ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದಲ್ದೆ, ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದೇ ರಸ್ತೆಯಲ್ಲಿ ಬಂದ ಬಸ್ ಚಾಲಕ ಮೇಲ್ಸೇತುವೆ ಮೇಲೆ ಓಡಿಸಿದ್ದಾನೆ.

 ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

ಅಲ್ಲಿಯೇ ಕರ್ತವ್ಯ ನಿರತ ಎಎಸ್‌ಐ ಗಿರಿಯಪ್ಪ ಬಸ್ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದರು, ಹಿಂದೆ ವಾಹನಗಳು ಹೆಚ್ಚಾಗಿದ್ದರಿಂದ ಚಾಲಕ ಸ್ವಲ್ಪ ಮುಂದಕ್ಕೆ ಹೋಗಿದ್ದಾನೆ. ಅದಕ್ಕೆ ಕೋಪಗೊಂಡ ಎಎಸ್‌ಐ, ಚಾಲಕ ಸೀಟು ಬಳಿಯ ಗ್ಲಾಸ್‌ಗೆ ಹೆಲ್ಮೆಟ್‌ನಿಂದ ಗಾಜು ಒಡೆದು ಹಾಕಿದ್ದಾರೆ.

 ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್ ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್

ಅದನ್ನು ಪ್ರಶ್ನಿಸಿದ್ದಕ್ಕೆ ಎಷ್ಟು ಹೇಳಿದರೂ ಕೇಳುವುದಿಲ್ಲ ಬಸ್‌ ನಿಲ್ಲಿಸದೆ ಮುಂದಕ್ಕೆ ಹೋಗುತ್ತೀಯಾ ಠಾಣೆಗೆ ಹೋಗಿ ದೂರು ಕೊಡು ಎಂದು ಹೇಳಿದ್ದರು. ಅಲ್ಲಿಂದ ಹೊರಟ ಚಾಲಕ ಘಟನೆಯ ವಿವರವನ್ನು ಚಿತ್ರೀಕರಿಸಿದ ಚಾಲಕ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.

English summary
An act of high-handedness by an angry Assistant Sub Inspector (ASI) of breaking the window pane of a KSRTC bus has gone viral on social media. The erring ASI has been identified as Giriyappa, attached to Madiwala traffic police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X