ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಗಿಲ್ ವಿಜಯೋತ್ಸವಕ್ಕಾಗಿ ಬೆಂಗಳೂರು-ಕಾರ್ಗಿಲ್ ಬೈಕ್ ಪ್ರಯಾಣ

|
Google Oneindia Kannada News

ಬೆಂಗಳೂರು, ಜುಲೈ 2: ಕಾರ್ಗಿಲ್ ವಿಜಯೋತ್ಸವ ದಿವಸದ ಅಂಗವಾಗಿ ಸೇನಾ ಪಡೆಯ ಪೊಲೀಸರ ತಂಡ ಬೆಂಗಳೂರಿನಿಂದ ಕಾರ್ಗಿಲ್‌ಗೆ ಮೋಟಾರ್‌ಸೈಕಲ್ ಪ್ರಯಾಣ ಬೆಳೆಸಿದೆ.

ಐವರು ಅತ್ಯುನ್ನತ ಪರಿಣತ ಬೈಕ್ ರೈಡರ್‌ಗಳ ತಂಡ ಸುಮಾರು 3,250 ಕಿ.ಮೀ. ಹಾದು ಕಾರ್ಗಿಲ್ ವಿಜಯೋತ್ಸವ ದಿವಸವಾದ ಜುಲೈ 24ಕ್ಕೂ ಮುನ್ನ ಕಾರ್ಗಿಲ್ ತಲುಪಲಿದೆ.

ಆಸ್ಟಿನ್‌ಟೌನ್‌ನಲ್ಲಿ 2 ಮಹಡಿ ಕಟ್ಟಡ ಕುಸಿತ: ಇಬ್ಬರಿಗೆ ಗಂಭೀರ ಗಾಯಆಸ್ಟಿನ್‌ಟೌನ್‌ನಲ್ಲಿ 2 ಮಹಡಿ ಕಟ್ಟಡ ಕುಸಿತ: ಇಬ್ಬರಿಗೆ ಗಂಭೀರ ಗಾಯ

ಸೇನಾ ಪೊಲೀಸ್‌ನ ಮೋಟಾರ್ ಸೈಕಲ್ ಪರಿಣತರ 'ಶ್ವೇತಾಶ್ವ' ಪಡೆ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟಿತು.

bengaluru army corps ride to kargil

ಲೆಫ್ಟಿನೆಂಟ್ ಕರ್ನಲ್ ವಿಕ್ರಮ್ ರಾಜೆಭೋಸ್ಲೆ ಮತ್ತು ಮಿಲಿಟರಿ ಪೊಲೀಸ್‌ನ ಇತರೆ ನಾಲ್ವರು ಪೊಲೀಸ್ ಸಿಬ್ಬಂದಿ ಇತ್ತೀಚೆಗೆ ಬಿಡುಗಡೆಯಾದ 200 ಸಿಸಿಯ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿದರು.

ಬೆಂಗಳೂರಿನಿಂದ ಕಾರ್ಗಿಲ್ ನಡುವೆ 20 ದಿನಗಳ ಪ್ರಯಾಣ ನಡೆಸಲಿದ್ದು, ಬೆಳಗಾವಿ, ಪುಣೆ, ಮುಂಬೈ, ವಡೋದರ, ಉದಯಪುರ, ನಜಿರಾಬಾದ್, ನವದೆಹಲಿ, ಚಂಡಿಗಡ, ಮನಾಲಿ, ಸರ್ಚು ಮತ್ತು ಲೆಹ್ ಮೂಲಕ ತೆರಳಲಿದೆ.

ಬಸ್‌ನಲ್ಲಿ ಕೋಳಿ ಸಾಗಿಸಿದರೆ ಹಾಫ್‌ ಟಿಕೆಟ್‌ ತೆಗೆದುಕೊಳ್ಳಲೇ ಬೇಕು!ಬಸ್‌ನಲ್ಲಿ ಕೋಳಿ ಸಾಗಿಸಿದರೆ ಹಾಫ್‌ ಟಿಕೆಟ್‌ ತೆಗೆದುಕೊಳ್ಳಲೇ ಬೇಕು!

ಬ್ರಾತೃತ್ವ ಭಾವನೆಯನ್ನು ಬಲಗೊಳಿಸುವುದು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಯೋಧರ ಬಲಿದಾನಗಳಿಗೆ ಗೌರವ ಸಲ್ಲಿಸುವುದು ಮತ್ತು ಭಾರತೀಯ ಸೇನೆಯ ವರ್ಚಸ್ಸನ್ನು ಹೆಚ್ಚಿಸುವ ಮೂಲಕ ಸೇನೆಗೆ ಸೇರುವಂತೆ ಯುವಜನರನ್ನು ಹುರಿದುಂಬಿಸುವುದು ಈ ಪ್ರಯಾಣದ ಉದ್ದೇಶ ಎಂದು ರಕ್ಷಣಾ ಪಡೆ ತಿಳಿಸಿದೆ.

English summary
Bengaluru team of Corps of Military Police went on a motorcycle ride to Kargil as a part of Vijay Diwas celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X