ಎಸೆಸ್ಸೆಲ್ಸಿ ಪಾಸಾದವರೆ ಒಳ್ಳೆ ಅವಕಾಶ, ಕೂಡಲೇ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 21: ಎಸ್ಎಸ್ ಎಲ್ ಸಿ ಪಾಸಾದವರಿಗೆ ಉದ್ಯೋಗದಲ್ಲಿ ತೊಡಗಿಕೊಳ್ಳಲು ಉತ್ತಮ ಅವಕಾಶ ಇಲ್ಲಿ ಲಭ್ಯವಿದೆ.
ಹದಿನಾಲ್ಕು ವಾರದ ಬೇಕರಿ ಟೆಕ್ನಾಲಜಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೆಬ್ಬಾಳದ ಕೃಷಿ ವಿಶ್ವ ವಿದ್ಯಾಲಯದ ಬೇಕರಿ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ.

ಅಭ್ಯರ್ಥಿಯು ಕನಿಷ್ಟ ಎಸ್.ಎಸ್.ಎಲ್.ಸಿ. (ಹತ್ತನೇ ತರಗತಿ) ಪಾಸಾಗಿರಬೇಕು. ನಿಗದಿತ ಅರ್ಜಿ ನಮೂನೆಗಳನ್ನು ರೂಪಾಯಿ 10-00 (ಹತ್ತು) ಸಂದಾಯಿಸಿ, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560024, ಇಲ್ಲಿಂದ ಪಡೆದುಕೊಳ್ಳಬಹುದು.[ಕಳೆದ 59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!]

Bengaluru : Apply for certificate course in Bakery Technology

ಅರ್ಜಿಯನ್ನು ಪಡೆಯಲು ಹಾಗೂ ಭರ್ತಿಮಾಡಿದ ಅರ್ಜಿಯನ್ನು ಹಿಂದಿರುಗಿಸಲು ಕೂನೆಯ ದಿನಾಂಕ 02.07.2016 ರಂದು 12.00 ಗಂಟೆ ಒಳಗೆ,

ಅರ್ಜಿ ಸಲ್ಲಿಸಬೇಕಾದ ವಿಳಾಸ: ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ಕೃಷಿ ವಿಶ್ವ ವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560 024, ಈ ವಿಳಾಸಕ್ಕೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗೆ ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ ಇವರನ್ನು ಖುದ್ದಾಗಿ ಅಥವಾ ದೂರವಾಣಿಯ ಮೂಲಕ ಸಂಪರ್ಕಿಸಿ 080-2351 3370.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bakery Training Unit, University of Agricultural Sciences, Hebbal,has invited application for 14 weeks certificate course in Bakery Technology. Minimum qualification required is pass in SSLC/10th Standard.
Please Wait while comments are loading...