ಡಿಸೆಂಬರ್ 2ಕ್ಕೆ ಬಿಬಿಎಂಪಿ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳ ಪ್ರತಿಭಟನೆ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 20 : ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್ (ಬಿಎಎಫ್) ಅಪಾರ್ಟ್ ಮೆಂಟ್ ಗಳ ಮೇಲಾಗುತ್ತಿರುವ ನಿರಂತರ ಕಿರುಕುಳ ವಿಚಾರವಾಗಿ ಡಿಸೆಂಬರ್ 2 ರಂದು ಪ್ರತಿಭಟನಾ ಮೆರವಣಿಗೆಯನ್ನು ನಗರಾದ್ಯಂದ ಹಮ್ಮಿಕೊಂಡಿದೆ.

ಅಪಾರ್ಟ್ ಮೆಂಟ್ ಗಳ ಮೇಲೆ ಜಲಮಂಡಳಿಯ ಮಲತಾಯಿ ಧೋರಣೆ

ಎಚ್' ಎಸ್ ಆರ್ ಲೇಔಟ್, ಬೆಳ್ಳಂದೂರು, ಬನ್ನೇರುಘಟ್ಟ, ಕನಕಪುರ, ಜೆಪಿ ನಗರ, ಜಯನಗರ, ವಿಲ್ಸನ್ ಗಾರ್ಡನ್, ಓಲ್ಡ್ ಏರ್ ಪೋರ್ಟ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಮೈಸೂರು ರಸ್ತೆ, ಸಂಜಯನಗರ, ಮಲ್ಲೇಶ್ವರಂ, ಹೆಬ್ಬಾಳ ಇನ್ನಿತರೆ ಪ್ರದೇಶಗಳಿಂದ ಸಾವಿರಕ್ಕಿಂತ ಹೆಚ್ಚು ಅಪಾರ್ಟ್ ಮೆಂಟ್ ನಿವಾಸಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯು ಡಿಸೆಂಬರ್ 2 ಶನಿವಾರ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ.+

ಜುಲೈ 1ರಿಂದ ಅಪಾರ್ಟ್ ಮೆಂಟ್ ಮೇಂಟೆನೆನ್ಸ್ ಶುಲ್ಕ ಹೆಚ್ಚಳ

Bengaluru Apartment residents form human chain on Dec 2

ನಗರದ ಅಪಾರ್ಟ್ ಮೆಂಟ್ ನಿವಾಸಗಳಿಗೆ ಡಬ್ಬಲ್ ಪೈಪಿಂಗ್ ಸಿಸ್ಟಂ ಮತ್ತು ಎಸ್.ಟಿ.ಪಿ(ಕೊಳಚೆ ನೀರು ಸಂಸ್ಕರಣಾ ಘಟಕ) ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿರುವ ಜಲಮಂಡಳಿ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳ ಅಸೋಸಿಯೇಷನ್ ಈಗಾಗಲೇ ಆನ್ ಲೈನ್ ಮೂಲಕ ಸಹಿ ಸಂಗ್ರಹಣೆ ಪ್ರಾರಂಭಿಸಿದ್ದಾರೆ.

ಅಪಾರ್ಟ್ ಮೆಂಟ್ ಗಳಿಗೆ ಎಸ್ ಟಿಪಿ ಕಡ್ಡಾಯ: ತಿಳಿಯಬೇಕಾದ 5 ಅಂಶಗಳು

Bengaluru Apartment residents form human chain on Dec 2

ಈಗಾಗಲೇ ಹಲವು ಬಗೆಯ ಸೆಸ್ ಹಾಗೂ ತೆರಿಗೆಗಳಿಂದ ತತ್ತರಿಸಿ ಹೋಗಿರುವ ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಈಗ ಬೆಂಗಳೂರು ಜಲಮಂಡಳಿ ಮತ್ತೊಂದು ಬರೆ ಎಳೆದಿದೆ. ಜಲಮಂಡಳಿ ನಿಲುವಿನಿಂದ ನಿವಾಸಿಗಳನ್ನು ತೀವ್ರ ಸಂಕಷ್ಟಕ್ಕೀಡುಮಾಡಿದೆ.

ಈಗಾಗಲೇ ಅಪಾರ್ಟ್ ಮೆಂಟ್ ನಿವಾಸಿಗಳು ಆಸ್ತಿ ತೆರಿಗೆ, ನೀರಿನ ಬಿಲ್, ವಿದ್ಯುತ್ ಶುಲ್ಕ, ತ್ಯಾಜ್ಯ ಸಂಸ್ಕರಣಾ ಶುಲ್ಕ ಹೀಗೆ ವಿವಿಧ ರೀತಿಯಿಂದ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಹೀಗೆ ಅನೇಕ ರೀತಿಗಳಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಅವರಿಗೆ ತಿಳಿಸಲು ಪ್ರತಿಭಟನಾ ಮೆರವಣಿಗೆ ಆಯೋಜಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Apartment Federation will form human rally on December 2, to make a voice against authorities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ