ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಾರ್ಟ್ ಮೆಂಟ್ ನಿವಾಸಿಗಳ ಸಮಸ್ಯೆ ಕುರಿತು ಸಂವಾದ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಅಪಾರ್ಟ್ ಮೆಂಟ್ ನಿವಾಸಿಗಳ ಬೇಡಿಕೆಗಳನ್ನು ರಾಜಕೀಯ ಪಕ್ಷಗಳ ಮುಂದಿಡಲು ಬೆಂಗಳೂರು ಅಪಾರ್ಟ್ ಮೆಂಟ್ಸ್ ಫೆಡರೇಷನ್ ಏ.22ರಂದು ಬೆಳಗ್ಗೆ 10.30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ಸಂವಾದ ಏರ್ಪಡಿಸಿದೆ.

ಹೊಸ ಅಪಾರ್ಟ್ ಮೆಂಟ್ ಗಳಿಗೆ ಮಾತ್ರ ಎಸ್ ಟಿಪಿ ಅಳವಡಿಕೆ ಸಾಧ್ಯತೆ!ಹೊಸ ಅಪಾರ್ಟ್ ಮೆಂಟ್ ಗಳಿಗೆ ಮಾತ್ರ ಎಸ್ ಟಿಪಿ ಅಳವಡಿಕೆ ಸಾಧ್ಯತೆ!

ಬಿಎಎಎಫ್ ನಿಂದ ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕುಪತ್ರವನ್ನು ರಚಿಸುತ್ತಿದ್ದು, ನಗರದ ಅಪಾರ್ಟ್ ಮೆಂಟ್ ನಿವಾಸಿಗಳ ಬೇಡಿಕೆಯನ್ನು ಇದು ಒಳಗೊಂಡಿದೆ. ಸರ್ಕಾರಿ ಸಂಸ್ಥೆಗಳು ನಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇದು ಒಳಗೊಂಡಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ತ್ಯಾಜ್ಯ ನೀರು ಶುದ್ಧೀಕರಣ ಘಟಕವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮ, ಕುಡಿಯುವ ನೀರಿಗೆ ಅಧಿಕ ದರ ವಿಧಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಬಗೆಹರಿಸಲು ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಲು ಸಂವಾದ ನಡೆಸಲಾಗುತ್ತಿದೆ.

Bengaluru apartment federation meeting on Sunday

ಎಲ್ಲ ಪಕ್ಷಗಳ ಮುಖಂಡರನ್ನು ಸಂವಾದಕ್ಕೆ ಆಹ್ವಾನಿಸಲಾಗಿದ್ದು, ನಿವಾಸಿಗಳ ಬೇಡಿಕೆಯನ್ನು ತಮ್ಮ ಪಕ್ಷಗಳ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಲು ಆಗ್ರಹಿಸಲಾಗುತ್ತದೆ.

ಈ ಕುರಿತು ಮಾಹಿತಿ ನೀಡಿದ ಬಿಎಎಫ್ ಅಧ್ಯಕ್ಷ ಆರ್. ಸುಬ್ರಮಣಿಯನ್, ಪ್ರಸ್ತುತ 357 ಅಪಾರ್ಟ್ ಮೆಂಟ್ ಗಳು ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ 40 ಸಾವಿರಕ್ಕೂ ಅಧಿಕ ಫ್ಲ್ಯಾಟ್ ಗಳಿವೆ. ಅಂದರೆ ಒಂದು ಲಕ್ಷಕ್ಕೂ ಅಧಿಕ ಮತದಾರರನ್ನು ಒಕ್ಕೂಟವು ಪ್ರತಿನಿಧಿಸುತ್ತಿದೆ. ಇದರ ಜತೆಗೆ ಒಕ್ಕೂಟವು 500ಕ್ಕೂ ಅಧಿಕ ಅಪಾರ್ಟ್ ಮೆಂಟ್ ಸಂಘಗಳೊಂದಿಗೆ ಸಂಪರ್ಕ ಹೊಂದಿದೆ. ಈ ಸಂಘಗಳು ಸುಮಾರು 1.5 ಲಕ್ಷ ಮತದಾರರನ್ನು ಪ್ರತಿನಿಧಿಸುತ್ತಿದೆ.

English summary
Bengaluru Apartment Federation has called meeting of members to discuss various issues of apartment residents to put before political parties to resolve. The meeting will be held on April 22, at 10.30 at Chowdaiaha memorial hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X