ಬೆಂಗಳೂರಿನಲ್ಲಿ ಹಣವಿರುವ ವ್ಯಾನ್‌ದೊಂದಿಗೆ ಚಾಲಕ ಪರಾರಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 18 : ಎಟಿಎಂಗೆ ತುಂಬಬೇಕಾದ ಹಣ ಮತ್ತು ವಾಹನದೊಂದಿಗೆ ವಾಹನ ಚಾಲಕ ಪರಾರಿಯಾದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ.

20 ಲಕ್ಷ ರು. ಹಣವಿದ್ದ ವಾಹನದೊಂದಿಗೆ ಪಾರಾಗಲು ಖಾಸಗಿ ಕಂಪನಿಯ ಉದ್ಯೋಗಿ ಯತ್ನಿಸಿರುವ ಘಟನೆ ಬೆಂಗಳೂರಿನ ವಿಂಡ್ ಟನ್ನೆಲ್ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಆತ ಹಣ ಮತ್ತು ವಾಹನ ಬಿಟ್ಟು ಪರಾರಿಯಾಗಿದ್ದಾನೆ. [ಡೊಮಿನಿಕ್ ಸೆರೆಯ ಹಿಂದೆ ಡೈನಾಮಿಕ್ ಕಥನ]

Bengaluru: Another ATM driver flees with cash

ಡ್ರೈವರನ್ನು ಅಸ್ಸಾಂ ಮೂಲದ 26 ವರ್ಷದ ಸಬ್ಬಿನ್ ಹುಸೇನ್ ಎಂದು ಗುರುತಿಸಲಾಗಿದೆ. ಆತ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಎಟಿಎಂಗೆ ಹಣ ತುಂಬಿಸುವ ಕಾಯಕದಲ್ಲಿ ಆತ ತೊಡಗಿದ್ದ.

52 ಲಕ್ಷ ರುಪಾಯಿ ಇದ್ದ ವಾಹನ ಮಡಿವಾಳವನ್ನು ಶನಿವಾರ 2 ಗಂಟೆಗೆ ಹೊರಟಿತು. 32 ಲಕ್ಷ ರುಪಾಯಿಗಳನ್ನು ಕೋರಮಂಗಲದ ಎಟಿಎಂನಲ್ಲಿ ತುಂಬಲಾಯಿತು. ಇಲ್ಲಿಂದ ವಿಂಡ್ ಟನ್ನೆಲ್ ರಸ್ತೆಗೆ ಹೊರಟಿತು. ಆ ಸಮಯದಲ್ಲಿ ಅಲ್ಲಿಂದ ಹಣದೊಂದಿಗೆ ಪರಾರಿಯಾಗಲು ಆತ ಯತ್ನಿಸಿದ್ದಾನೆ. [ಹಣದ ಜೊತೆ ಎಟಿಎಂ ವಾಹನ ಅಪಹರಿಸಿದವರು ಸಿಕ್ಕಿಬಿದ್ರು]

Bengaluru: Another ATM driver flees with cash

ನವೆಂಬರ್ 23ರಂದು ಡೊಮಿನಿಕ್ ಎಂಬ ತಮಿಳುನಾಡು ಮೂಲದ ವ್ಯಕ್ತಿ 1.37 ಕೋಟಿ ರುಪಾಯಿಗಳೊಂದಿಗೆ ಪರಾರಿಯಾಗಿದ್ದ. ಕೆಲದಿನಗಳ ನಂತರ ಆತನನ್ನು ಹಣದೊಂದಿಗೆ ಬಂಧಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A driver attached to a private firm depositing money in ATMs fled with the van containing Rs 20 lakh cash on Saturday at Bengaluru's Wind Tunnel Road. This is the second such incident reported from the city in the past one month.
Please Wait while comments are loading...