• search

ನಗದು ಕೊರತೆ ಎಂಬುದು ಕಾಂಗ್ರೆಸ್ ಷಡ್ಯಂತ್ರ: ರಾಜೀವ್ ಚಂದ್ರಶೇಖರ್

Subscribe to Oneindia Kannada
For bangalore Updates
Allow Notification
For Daily Alerts
Keep youself updated with latest
bangalore News

  ದೇಶದ ಅನೇಕ ರಾಜ್ಯಗಳಲ್ಲಿ ನಗದು ಕೊರತೆ ಇದೆ. ಎಟಿಎಂಗಳಲ್ಲಿ ಹಣ ಇಲ್ಲ, ಅದರಲ್ಲೂ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ನಾಗರಿಕರಲ್ಲಿ ಆತಂಕ ಹುಟ್ಟಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

  ನಗದು ಕೊರತೆ ಎಂಬ ಈಚಿನ ವರದಿಯು ಕೇಂಬ್ರಿಜ್ ಅನಲಿಟಿಕಾದ ತಂತ್ರದ್ದೇ ಭಾಗ. ಮತದಾರರ ಮನಸಿನ ಮೇಲೆ ದುಷ್ಪರಿಣಾಮ ಬೀರುವ ಸಲುವಾಗಿ ಹಾಗೂ ತನ್ನ ಪರವಾಗಿ ಒಲವು ಮೂಡಿಸಲು ಕಾಂಗ್ರೆಸ್ ಹೆಣೆದಿರುವ ಬಲೆ ಇದು ಎಂದು ಆರೋಪಿಸಿದ್ದಾರೆ.

  ಈ ಅಂಕಿಅಂಶ ನೋಡಿದರೆ ತಲೆತಿರುಗಿ ಬೀಳುತ್ತೀರಿ!

  ಜನರಲ್ಲಿ ಭಯ ಹುಟ್ಟಿಸುವ, ಸುಳ್ಳು ಹಾಗೂ ವಿಭಜನೆ ರಾಜಕಾರಣದ ಮೂಲಕ ಹಿಂಸಾಚಾರ ಸೃಷ್ಟಿಯಾಗುವಂತೆ ಕಾಂಗ್ರೆಸ್ ತಂತ್ರ ಹೆಣೆದಿದೆ. ವಾರದ ಹಿಂದೆ ಕೆಲವರು ನನಗೆ ಈ ಬಗ್ಗೆ ತಿಳಿಸಿದ್ದರು. ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ವಿವಾದವೊಂದನ್ನು ಎಳೆಯಲು ಯತ್ನಿಸುತ್ತಿದೆ ಎಂದು ತಿಳಿಸಿದ್ದರು ಎಂದಿದ್ದಾರೆ.

  Bengaluru and Karnataka will reject dirty tricks of Congress and Cambridge Analytica

  ಚುನಾವಣೆಗೆ ಮುನ್ನ ಈ ರೀತಿ ಎಟಿಎಂಗಳಲ್ಲಿ ಹಣ ಇಲ್ಲದಂತಾಗುವುದು ತೀರಾ ವಿಚಿತ್ರ. ಈ ಸನ್ನಿವೇಶದ ಬಗ್ಗೆ ತನಿಖಾ ದಳಗಳಿಂದ ತನಿಖೆ ನಡೆಯಬೇಕು. ಕೆಲ ತಿಂಗಳ ಹಿಂದೆಯೇ ನಾನು ಹೇಳಿದ್ದೆ: ಇಂಥದ್ದೇನೋ ಕೆಟ್ಟ ತಂತ್ರವನ್ನೇನೋ ಕಾಂಗ್ರೆಸ್ ಮಾಡುತ್ತದೆ ಎಂದು ತಿಳಿಸಿದ್ದೆ ಎಂಬುದಾಗಿ ಹೇಳಿದ್ದಾರೆ.

  ಕರ್ನಾಟಕದ ಜನರ ಏಳ್ಗೆಗಾಗಿ ಯಾವುದೇ ಯೋಜನೆಗಳಿಲ್ಲದ ಕಾಂಗ್ರೆಸ್ ನ ನೋಡಿಯೇ ನಾನು ಆ ಮಾತು ಹೇಳಿದ್ದೆ. ಯಾವಾಗ ಕೇಂಬಿಜ್ ಅನಲಿಟಿಕಾ ಕಾಂಗ್ರೆಸ್ ಗಾಗಿ ಕೆಲಸ ಮಾಡುವುದು ಪಕ್ಕಾ ಆಯಿತೋ ಆಗ ಈ ಅಂಶ ಖಾತ್ರಿಯಾಯಿತು. ಆ ಮೂಲಕ ದೇಶದ ಅತ್ಯಂತ ಹಳೆಯ ಪಕ್ಷದ ಕೆಟ್ಟ ಮುಖವೊಂದು ಬಯಲಾಯಿತು ಎಂದು ಆರೋಪಿಸಿದ್ದಾರೆ.

  ಇದೊಂದೇ ಪ್ರಕರಣವಲ್ಲ. ಇಂಥ ಆಟಗಳನ್ನು ಸಾಕಷ್ಟು ಆಡಿದೆ ಕಾಂಗ್ರೆಸ್. ಆದರೆ ಪ್ರಜಾಪ್ರಭುತ್ವದ ಮುಖ್ಯ ಸಿದ್ಧಾಂತ ಮೇಲೆಯೇ ದಾಳಿಯಾಗುತ್ತಿದೆ. ಡಿಜಿಟಲ್ ಗ್ರಾಹಕರ ಮಾಹಿತಿಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದರಿಂದ ನಾಗರಿಕರ ಖಾಸಗಿ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

  ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆಗೆ ಇಂಥ ನಡವಳಿಕೆಯಿಂದ ತಡೆಯಾಗುತ್ತದೆ. ಯಾವುದೇ ಪ್ರಜಾಪ್ರಭುತ್ವ ಉಳಿಯಬೇಕು ಹಾಗೂ ಸತ್ಯ ಹೊರಬರಬೇಕು ಅಂದರೆ ಕೇಂದ್ರ ತನಿಖಾ ದಳಗಳು ಇಂಥ ಷಡ್ಯಂತ್ರಗಳ ಬಗ್ಗೆ ತನಿಖೆ ನಡೆಸಬೇಕು. ರಾಹುಲ್ ಗಾಂಧಿ ಅವರ ಸುಳ್ಳು ಪ್ರಚಾರ, ಭಯ ಬಿತ್ತನೆ ಹಾಗೂ ವಿಭಜನೆ ರಾಜಕೀಯವನ್ನು ಜನರು ನಿರ್ಲಕ್ಷ್ಯ ಮಾಡಬೇಕು ಎಂದು ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.

  ಇನ್ನಷ್ಟು ಬೆಂಗಳೂರು ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The recent reports of ATMs running short of cash in several states of India including the poll-bound Karnataka are purposefully designed by Congress to create unwarranted apprehension among the citizens, said Rajya sabha MP Rajeev Chandrasekhar in a press statement.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more