ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೀಘ್ರವೇ 2ನೇ ರನ್‌ ವೇ ಆರಂಭ

|
Google Oneindia Kannada News

ಬೆಂಗಳೂರು, ಜನವರಿ 11 : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲೇ 2ನೇ ರನ್‌ ವೇ ಆರಂಭವಾಗಲಿದೆ. ದಕ್ಷಿಣ ಭಾರತದಲ್ಲಿಯೇ ಎರಡು ರನ್‌ ವೇ ಹೊಂದಿರುವ ವಿಮಾನ ನಿಲ್ದಾಣ ಎಂಬ ಕೀರ್ತಿ ಬೆಂಗಳೂರಿನ ಮುಡಿಗೇರಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2ನೇ ರನ್‌ ವೇ ನಿರ್ಮಾಣ ಕಾರ್ಯ ಸೆಪ್ಟೆಂಬರ್ 2019ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್ 1ರಿಂದ ನೂತನ ರನ್‌ ವೇನಲ್ಲಿ ವಿಮಾನಗಳ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ.

ವಿಮಾನ ನಿಲ್ದಾಣಕ್ಕೆ ಮೆಟ್ರೋ: ಭಾರಿ ಮೊತ್ತದ ಕಾಮಗಾರಿಗೆ ಸಂಪುಟ ಅಸ್ತುವಿಮಾನ ನಿಲ್ದಾಣಕ್ಕೆ ಮೆಟ್ರೋ: ಭಾರಿ ಮೊತ್ತದ ಕಾಮಗಾರಿಗೆ ಸಂಪುಟ ಅಸ್ತು

ಹೊಸ ರನ್‌ ವೇ ನಿರ್ಮಾಣಗೊಂಡ ಬಳಿಕ ಮಂಜಿನ ಕಾರಣದಿಂದಾಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳ್ಳುವುದಿಲ್ಲ. ಅಂತಹ ಅತ್ಯಾಧುನಿಕ ವ್ಯವಸ್ಥೆಯನ್ನು ರನ್‌ ವೇನಲ್ಲಿ ಮಾಡಲಾಗಿದೆ.

ಮೈಸೂರಿನಿಂದ ಹೆಚ್ಚುವರಿಯಾಗಿ ಸಂಚರಿಸಲಿವೆ 6 ಹೊಸ ವಿಮಾನಗಳುಮೈಸೂರಿನಿಂದ ಹೆಚ್ಚುವರಿಯಾಗಿ ಸಂಚರಿಸಲಿವೆ 6 ಹೊಸ ವಿಮಾನಗಳು

Bengaluru airport to get 2nd runway; flights to land on Oct 1

ಎರಡು ಹಂತದಲ್ಲಿ 2ನೇ ರನ್‌ ವೇಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 25 ಮಿಲಿಯನ್ ಪ್ಯಾಸೇಂಜರ್ ಕೆಪಾಸಿಟಿ ಹೊಂದಿರುತ್ತದೆ, 2ನೇ ಹಂತದ ಮಾರ್ಗ 4 ಕಿ.ಮೀ. ರನ್‌ ವೇ ನಿರ್ಮಾಣ ಮಾಡಲಾಗುತ್ತದೆ.

ಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

ನೂತನ ರನ್‌ ವೇ ಪರಿಸರ ಸ್ನೇಹಿಯಾಗಿದೆ. 'ಸಿಟಿ ಆಫ್ ಗಾರ್ಡನ್‌' ಎಂಬ ಪರಿಕಲ್ಪನೆಯಲ್ಲಿ ರನ್‌ ವೇಯನ್ನು ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ ಕಟ್ಟಡ ಹಸಿರು ಹೊದಿಕೆಯನ್ನು ಒಳಗೊಂಡಿದೆ.

ನೂತನ ರನ್‌ ವೇಯನ್ನು 13,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲಿಯೇ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣ 2ನೇ ಸ್ಥಾನದಲ್ಲಿದೆ. 2020ರ ವೇಳೆಗೆ ದೇಶದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗುವ ನಿರೀಕ್ಷೆ ಇದೆ.

English summary
Kempegowda International Airport (KIA) in Bengaluru will become the first airport in southern India to have a second runway. The airport will see the first commercial flight to land on a brand new, fully equipped runway on October 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X