ಪತ್ನಿ ಕನ್ಯತ್ವ ಪರೀಕ್ಷೆ ಮಾಡಿಸಿದ ಬೆಂಗಳೂರಿನ 'ಅಜ್ಞಾನಿ'

Written By:
Subscribe to Oneindia Kannada

ಬೆಂಗಳೂರು, ಮೇ 24: ಈತ ಹೆಸರಿಗೆ ವಿಜ್ಞಾನಿ, ಆದರೆ ಅನುಮಾನದ ಪಿಶಾಚಿ, ಮದುವೆಗೂ ಮುಂಚೆ ಹೆಂಡಿಯಾಗುವವಳಿಗೆ ಕನ್ಯತ್ವ ಪರೀಕ್ಷೆ ಮಾಡಿಸಿದ "ಅಜ್ಞಾನಿ."

ಬೆಂಗಳೂರ ಸಾಫ್ಟ್ ವೇರ್ ಇಂಜಿನಿಯರ್ ಹೆಣ್ಣು ಮಗಳ ನೋವಿನ ಕತೆಗೂ ಮೂಲ ಕಾರಣ ಅನುಮಾನದ ಭೂತ. ಮ್ಯಾಟ್ರಿ ಮೋನಿ ವೆಬ್ ತಾಣದಲ್ಲಿ ಪರಿಚಯ ಮಾಡಿಕೊಂಡು ಒಬ್ಬರನ್ನೊಬ್ಬರು ಮದುವೆಯಾಗಿದ್ದ ಜೋಡಿಯಲ್ಲಿ ಬಿರುಕು ಮೂಡಿಸಲು ಕಾರಣವಾಗಿದ್ದು ಫೇಸ್ ಬುಕ್ ಫೋಟೋಗಳು ಅಂದರೆ ನಂಬಲಬೇಕು.[ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ? ಬೇಡವೋ?]

bengaluru

ಮದುವೆಯಾಗುವ ಎರಡು ತಿಂಗಳ ಮುನ್ನ ವಿಜ್ಞಾನಿ ಯುವತಿಗೆ ಕನ್ಯತ್ವ ಪರೀಕ್ಷೆ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಾನೆ. ರಾಜಾಜಿನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಆಕೆ ಕನ್ಯತ್ವ ಉಳಿಸಿಕೊಂಡಿದ್ದಾಳೆ ಎಂಬ ಫಲಿತಾಂಶವೂ ಬರುತ್ತದೆ. ಅದಾದ ಮೇಲೆ ಮದುವೆಯಾದರೂ ಅನುಮಾನ ಮುಂದುವರಿದೇ ಇರುತ್ತದೆ. ಇದು 2011 ರ ಘಟನೆ.

ವಿದೇಶದಲ್ಲಿದ್ದು ಗಂಡ ಮತ್ತು ಅವನ ಕುಟುಂಬದವರಿಂದ ನಿರಂತರ ಹಿಂಸೆ ಅನುಭವಿಸುತ್ತಿದ್ದ 31 ವರ್ಷದ ಗೀತಾ ಅಂತಿಮವಾಗಿ ಬೆಂಗಳೂರು ಪೊಲೀಸರ ಮೊರೆ ಹೋಗಿದ್ದಾರೆ.[ಕನ್ಯತ್ವ ಕಳೆದುಕೊಂಡವಳನ್ನು ಮದುವೆಯಾಗಲು ರೆಡಿನಾ?]

ಐದು ವರ್ಷಗಳಿಂದ ಹಿಂಸೆ ಅನುಭವಿಸಿ ಬೇಸತ್ತು ಹೋದ ಮಹಿಳೆ ಬೆಂಗಳೂರು ಪೊಲೀಸರು ದೂರು ದಾಖಲಿಸಿದ್ದಾರೆ. ಪೊಲೀಸರು ಆಕೆಯ ಪತಿ ಮತ್ತು ಕುಟುಂಬದವರ ಮೇಲೆ ವರದಕ್ಷಿಣೆ ಕಿರುಕುಳ ಮತ್ತು ಮಹಿಳಾ ದೌರ್ಜನ್ಯ ಪ್ರಕರಣದ ಅಡಿ ಕೇಸು ದಾಖಲಿಸಿಕೊಂಡಿದ್ದಾರೆ.

ಮದುವೆ ಆಗಿದ್ದು ಹೇಗೆ?
2011 ರಲ್ಲಿ ಮ್ಯಾಟ್ರಿ ಮೋನಿ ವೆಬ್ ತಾಣದ ಮೂಲಕ ಪರಸ್ಪರ ಪರಿಚಯ ಆಗಿತ್ತು. ವಿದೇಶದಲ್ಲಿ ಪಿಎಚ್ ಡಿ ಪಡೆದು ಬಂದ ವರನೊಂದಿಗೆ ಗೀತಾ ನಿಶ್ಚಿತಾರ್ಥ ಆಗಿತ್ತು.[ಬೆಂಗಳೂರಿಗರು ಜಾತ್ಯತೀತರಾಗುವುದು ಇನ್ನೂ ಬಹುದೂರ!]

ಫೇಸ್ ಬುಕ್ ಫೋಟೋ
ಗೀತಾ ತನ್ನ ಸ್ನೇಹಿತರೊಂದಿಗೆ ಇದ್ದ ಫೋಟೋಗಳನ್ನು ಫೆಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದೇ ಆಕೆಯ ಸಂಸಾರದಲ್ಲಿ ಬಿರುಗಾಳಿಯನ್ನು ಎಬ್ಬಿಸಿತ್ತು. ಇದನ್ನು ಕಂಡ ಭಾವಿ ಪತಿರಾಯ ಕನ್ಯತ್ವ ಪರೀಕ್ಷೆ ಮಾಡಿಕೊಳ್ಳುವಂತೆ ಒತ್ತಡ ಹೇರಲು ಆರಂಭಿಸಿದ್ದ. ಅನಿವಾರ್ಯವಾಗಿ ಗೀತಾ ಪರೀಕ್ಷೆ ಮಾಡಿಕೊಳ್ಳಬೇಕಾಯಿತು.

ಮುಂದುವರಿದ ದೌರ್ಜನ್ಯ
ಮದುವೆಯಾದ ನಂತರ ಗೀತಾ ವಿದೇಶಕ್ಕೆ ತೆರಳಿದರೂ ಅನುಮಾನ ಮುಂದುವರಿದೆ ಇತ್ತು. ಗಂಡನ ಕುಟುಂಬದಿಂದಲೂ ಆಕೆ ಹಿಂಸೆ ಅನುಭವಿಸಬೇಕಾಗಿ ಬಂತು.

ಶೋಕಿ ಕಳ್ಳ
ಗಂಡ ಮಾಲ್ ಗಳಲ್ಲಿ ರೆಸ್ಟೋರೆಂಟ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡು ಎಂದು ನನಗೂ ಬೆದರಿಸುತ್ತಿದ್ದ ಎಂದು ಪೊಲೀಸರು ಬಳಿ ಗೀತಾ ಹೇಳಿದ್ದಾರೆ. ಎರಡು ಕಡೆಯವರಿಂದ ಅಂತಿಮ ಹೇಳಿಕೆಯನ್ನು ಪಡೆದು ಪ್ರಕರಣದ ಸತ್ಯಾಸತ್ಯತೆಯನ್ನು ಚರ್ಚೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Almost five years later, Geetha, a software engineer approached the police seeking action against her husband and her in-laws for supporting him. The police have now booked a case of dowry harassment against them. According to the police, the couple got in touch through a matrimonial website in 2011.
Please Wait while comments are loading...