ಈ ಹೊತ್ತಿಗೆ ಕಥಾಸ್ಪರ್ಧೆ: ಡಿ.15 ರೊಳಗೆ ಕಥೆ ಕಳಿಸಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 03: ಸಾಹಿತ್ಯಾಸಕ್ತರಿಗಾಗಿ ಒಂದಿಲ್ಲೊಂದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ 'ಈ ಹೊತ್ತಿಗೆ'ಯು ಇದೀಗ ಕಥಾಸ್ಪರ್ಧೆಯನ್ನು ಆಯೋಜಿಸಿದೆ. ನಿಮ್ಮೊಳಗೊಂದು ಕಥೆ ಅವಿತುಕುಳಿತಿದ್ದರೆ, ಈ ಹೊತ್ತಿಗೆಗೆ ತಕ್ಷಣವೇ ಬರೆದುಕಳಿಸಿ!

ಚಿಣ್ಣರ ಸೃಜನಶೀಲತೆಯ ಅಭಿವ್ಯಕ್ತಿಗೆ ವೇದಿಕೆ ಈ 'ಮಕ್ಕಳ ಹಬ್ಬ'

ಕಥಾ ಸ್ಪರ್ಧೆಯು 'ಎಲ್ಲರಿಗಾಗಿ' ಮತ್ತು 'ಕಾಲೇಜು ವಿದ್ಯಾರ್ಥಿಗಳಿಗಾಗಿ' ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದೆ. ಆಸಕ್ತರು ಡಿಸೆಂಬರ್ 15 ರೊಳಗೆ ಕಥೆಗಳನ್ನು ಬರೆದು ಕಳಿಸಲು ಕೋರಲಾಗಿದೆ.

Bengaluru: a story writing competition by E Hottige

ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದವರಿಗೆ 5000 ರೂ. ಬಹುಮಾನ, ಎರಡನೇ ಬಹುಮಾನ 3000ರೂ., ಮೂರನೇ ಬಹುಮಾನ 2000 ರೂ.

ಕಥೆಗಳು ಸ್ವತಂತ್ರವಾಗಿದ್ದು, ಅಪ್ರಕಟಿತವಾಗಿರಬೇಕು(ಬ್ಲಾಗ್, ವೆಬ್ಸೈಟ್, ಫೇಸ್ ಬುಕ್ ಮುಂತಾದ ಯಾವುದೇ ತಾಣಗಳಲ್ಲಿಯೂ ಪ್ರಕಟವಾಗಿರಬಾರದು.) ಗರಿಷ್ಠ ಪದಮಿತಿ 1600 ಪದಗಳು ಮಾತ್ರ. ವಿದ್ಯಾರ್ಥಿಗಳ ವಿಭಾಗದಲ್ಲಿ ಕಥೆ ಬರೆಯುವವರು ತಮ್ಮ ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರ ಲಗತ್ತಿಸುವುದು ಕಡ್ಡಾಯ. 2018 ಜನವರಿ ಕೊನೆಯ ವಾರದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗುವುದು. ಮತ್ತಷ್ಟು ಮಾಹಿತಿಗೆ ಈ ಬರಹದೊಂದಿಗಿರುವ ಆಮಂತ್ರಣ ನೋಡಿ.

ಕಥೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸುವಂತೆ ಕೋರಲಾಗಿದೆ:
ಸಾಫ್ಟ್ ಕಾಪಿ ಕಳಿಸುವವರು: ehottige.ks@gmail.com
ಹಸ್ತಪ್ರತಿ ಕಳಿಸುವವರು: ಈ ಹೊತ್ತಿಗೆ, #65, ಮುಗುಳ್ನಗೆ, 3ನೇ ಅಡ್ಡರಸ್ತೆ, ಪಿ.ಎನ್.ಬಿ.ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು- 560062

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
E Hottige has conducted a competition for story writers. The interested can send stories containing maximum 1600 words before December 15th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ