ಬ್ಲೂವ್ಹೇಲ್ ಗೇಮ್ ಆಡಿ ಸಿಕ್ಕಿಬಿದ್ದ ಬೆಂಗಳೂರು ಹುಡುಗರು!

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 9: ದೇಶದ ಯಾವುದೋ ಮೂಲೆಯಲ್ಲಿ ಬ್ಲೂವ್ಹೇಲ್ ಎಂಬ ಆಟವಿದೆಯಂತೆ ಎಂಬ ಕಾಲ ಹೋಗಿ, ನಮ್ಮ ಮನೆಯ ಮಗುವೂ ಕೈಯಲ್ಲಿ ಮೊಬೈಲ್ ಹಿಡಿದಿದ್ದರೆ ಒಮ್ಮೆ ನಿಗಾ ಇಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ಅದಕ್ಕೆ ಪೂರಕವೆಂಬಂತೆ ಬ್ಲೂವ್ಹೇಲ್ ಗೇಮ್ ಆಡುತ್ತಿದ್ದ ಬೆಂಗಳೂರಿನ ಇಬ್ಬರು ಯುವಕರು ತಮ್ಮ ಉಪನ್ಯಾಸಕರ ಬಳಿ ಸಿಕ್ಕಿಹಾಕಿಕೊಂಡಿದ್ದಾರೆ. ಆ ಮೂಲಕ ಬ್ಲೂವ್ಹೇಲ್ ಎಂಬ ಅಪಾಯಕಾರಿ ಆಟ ಉದ್ಯಾನ ನಗರಿಯ ಮಕ್ಕಳು, ಯುವಕರನ್ನು ತನ್ನ ತೆಕ್ಕೆಯಲ್ಲಿ ಬಿಗಿಗೊಳಿಸಿಕೊಳ್ಳುತ್ತಿದೆ ಎಂಬುದು ಸಾಬೀತಾಗಿದೆ.

Bengaluru: 2 students, playing blue whale game are caught by lecturer

ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದುತ್ತಿರುವ ತಲಾ 18 ಮತ್ತು 19 ವರ್ಷದ ಇಬ್ಬರು ಕಾಮರ್ಸ್ ವಿದ್ಯಾರ್ಥಿಗಳು ಕೆಲವು ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದುದು ಅವರ ಸ್ನೇಹಿತರಲ್ಲಿ ಅಚ್ಚರಿ ತಂದಿತ್ತು. ದೇಹದ ಕೆಲವು ಭಾಗಗಳಲ್ಲಿ ಗಾಯದ ಕಲೆಗಳಿದ್ದಿದ್ದನ್ನು ಕಂಡು ಸ್ನೇಹಿತರು ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಇದಕ್ಕೆ ಸರಿಯಾಗಿ ಒಬ್ಬ ಯುವಕ ತನ್ನ ವ್ಹಾಟ್ಸ್ ಆಪ್ ಸ್ಟೇಟಸ್ ನಲ್ಲಿ "I am on my way" ಎಂದು ಬರೆದುಕೊಂಡು ಬ್ಲೂವ್ಹೇಲ್ ಚಿತ್ರ ಹಾಕಿದ್ದ. ಇವನ್ನೆಲ್ಲ ಕಂಡು ಸುಮ್ಮನಿರುವುದು ಸರಿಯಲ್ಲ ಎಂಬುದನ್ನು ತಿಳಿದ ಸ್ನೇಹಿತರು ಈ ಕುರಿತು ಉಪನ್ಯಾಸಕರ ಬಳಿ ಹೇಳಿದ್ದಾರೆ.

ಮಂಗಳೂರಿಗೂ ಕಾಲಿಟ್ಟ 'ಬ್ಲೂವೇಲ್', ಪೋಷಕರ ಎಚ್ಚರದಿಂದ ವಿದ್ಯಾರ್ಥಿ ಸೇಫ್

ಯುವಕರ ಫೋನ್ ಪಡೆದುಕೊಂಡು ತನಿಖೆ ಮಾಡಿದಾಗ ಇಬ್ಬರೂ ಬ್ಲೂವ್ಹೇಲ್ ಆಡುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಈ ಇಬ್ಬರು ಯುವಕರನ್ನೂ ಆಪ್ತಸಮಾಲೋಚನೆಯ ಮೂಲಕ ಬ್ಲೂವ್ಹೇಲ್ ಚಟದಿಂದ ಹೊರತರಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳಿಗೆ ಬ್ಲೂವ್ಹೇಲ್ ನ ಕುರಿತು ಎಚ್ಚರಿಕೆ ನೀಡುವುದೂ ಮತ್ತು, ಅವರು ಮೊಬೈಲ್ ಬಳಸುವಾಗ ನಿಗಾ ಇಡುವುದು ಮುಖ್ಯ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಬ್ಲೂವ್ಹೇಲ್ ಗೇಮ್ 50 ಅಪಾಯಕಾರಿ ಟಾಸ್ಕ್ ಗಳನ್ನು ಹೊಂದಿರುವ ಆನ್ ಲೈನ್ ಆಟವಾಗಿದ್ದು, ಇದರ ಕೊನೆಯ ಟಾಸ್ಕ್ ನಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಈ ಆಟದ ಹುಚ್ಚಿನಿಂದ ಪ್ರಪಂಚದಾದ್ಯಂತ ಹಲವು ಯುವಕರು, ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two students studying commerce in a prominent college in Bengaluru are caught by their lecturer when the are playing deadly blue whale game.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ