ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲೆಂದರಲ್ಲಿ ಕಸ ಎಸೆಯುವವರೇ ಎಚ್ಚರ! ಬರ್ತಿವೆ 1,000 ಸಿಸಿಟಿವಿ

ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ (ಬಿಬಿಎಂಪಿ) ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ. ಹೆಚ್ಚಾಗಿ ಕಸ ಎಸೆಯುವ ಸ್ಥಳಗಳಲ್ಲಿ 1,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ (ಬಿಬಿಎಂಪಿ) ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ. ಹೆಚ್ಚಾಗಿ ಕಸ ಎಸೆಯುವ ಸ್ಥಳಗಳಲ್ಲಿ 1,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

ಸದ್ಯ ಬಿಬಿಎಂಪಿ ಮನೆಗಳಿಂದ ವಿಭಜನೆ ಮಾಡಿದ ಕಸವನ್ನು ಮಾತ್ರ ಸ್ವೀಕರಿಸುತ್ತಿದೆ. ಹಸಿ ಮತ್ತು ಒಣ ಕಸ ಮಿಕ್ಸ್ ಆಗಿದ್ದರೆ ಅಂಥ ಕಸಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಜನ ಎಲ್ಲೆಂದರಲ್ಲಿ ಕಸ ಎಸೆಯಲು ಆರಂಭಿಸಿದ್ದಾರೆ. ಕೆಲೆವೆಡೆ ಕಸ ಎಸೆದು ಎಸೆದು ರಸ್ತೆ ಮುಚ್ಚುವ ಪರಿಸ್ಥಿತಿ ಬಂದಿದೆ. ಇದಕ್ಕೀಗ ಕಡಿವಾಣ ಹಾಕಲು ಮಹಾನಗರ ಪಾಲಿಗೆ ಸಿಸಿಟಿವಿ ಮೊರೆ ಹೋಗಿದೆ.[ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ]

Bengaluru: 1,000 CCTVs to monitor reckless garbage disposal

ಈಗಾಗಲೇ ಕಸ ಹೆಚ್ಚಾಗಿ ಬೀಳುವ 450 ಸ್ಥಳಗಳನ್ನು ಬಿಬಿಎಂಪಿ ಪತ್ತೆ ಹಚ್ಚಿದೆ. ಇದಲ್ಲದೆ ಸಣ್ಣ ಆಟೋಗಳಿಂದ ದೊಡ್ಡ ದೊಡ್ಡ ಟಿಪ್ಪರುಗಳಿಗೆ ಕಸ ವರ್ಗಾವಣೆ ಮಾಡುವ 600 ಕೇಂದ್ರಗಳಲ್ಲಿಯೂ ಸಿಸಿಟವಿ ಅಳವಡಿಸಲು ಬಿಬಿಎಂಪಿ ನಿರ್ಧರಿಸಿದೆ.[ಬೇಡಿಕೆಗಳ ಮೂಟೆ ಹೊತ್ತು ಜೈಲಿಗೆ ಬರುತ್ತಿರುವ ಶಶಿಕಲಾ]

ಸದ್ಯ ಈ ಸಿಸಿಟವಿ ಅಳವಡಿಕೆಯಿಂದ ರಸ್ತೆ ಬದಿಯಲ್ಲಿ ಕಸ ಬೀಳುವುದು ನಿಯಂತ್ರಣಕ್ಕೆ ಬರಲಿದೆ ಎಂದುಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಕಸ ನಿಯಂತ್ರಣಕ್ಕಾಗಿ ಬಿಬಿಎಂಪಿ ದೊಡ್ಡ ಮಟ್ಟಕ್ಕೆ ಹಣ ವ್ಯಯಿಸುತ್ತಿದ್ದು, ಮುಂದೇನಾಗುತ್ತದೋ ಕಾದು ನೋಡಬೇಕು.

English summary
Bruhat Bengaluru Mahanagara Palike (BBMP) planned to put up over 1,000 CCTV cameras to monitor reckless garbage disposal by citizens in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X