ರೆಡ್‌ಬಸ್‌ಗೆ 'ಸುರಕ್ಷಾ' ಟಿಕೆಟ್ ನೀಡಿದ ಬೆಂಗಳೂರ ಯುವತಿ

Written By:
Subscribe to Oneindia Kannada

ಬೆಂಗಳೂರು, ಜೂನ್ 13: ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸುತ್ತಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಬಸ್ ಚಾಲಕನಿಂದ ಕಿರುಕುಳಕ್ಕೆ ಒಳಗಾಗಿದ್ದ ಯುವತಿ ಆರಂಭ ಮಾಡಿದ್ದ ಆನ್ ಲೈನ್ ಪೆಟಿಶನ್ ಗೆ ಅಂತಿಮವಾಗಿ ಜಯ ಸಿಕ್ಕಿದೆ.

ಮಹಿಳೆಯರ ರಕ್ಷಣೆ, ಭದ್ರತೆ ಬಗ್ಗೆ ಒಂದೆಲ್ಲಾ ಒಂದು ಪ್ರಶ್ನೆಗಳು ಉದ್ಘವಾಗುತ್ತಲೇ ಇರುತ್ತವೆ. ಅದರಲ್ಲೂ ಒಂದು ಕಡೆಯಿಂದ ಇನ್ನೊಂದು ಕಡೆ ಒಂಟಿ ಮಹಿಳೆ ಪ್ರಯಾಣ ಮಾಡಬೇಕು ಎಂದಾಗ ಆಕೆಯ ಕುಟುಂಬ ಹಿಂದೆ ಮುಂದೆ ನೋಡುವುದು ಇದೆ.[ಕೆಎಸ್ಸಾರ್ಟಿಸಿ ಪ್ರೀಮಿಯರ್ ಬಸ್ ಗಳ ದರ ಇಳಿಕೆ]

ಆದರೆ ಇದಕ್ಕೆಲ್ಲ ರೆಡ್ ಬಸ್ ಉತ್ತರ ಮತ್ತು ಪರಿಹಾರ ನೀಡಿದೆ. ಬಸ್ ಟಿಕೆಟ್ ಬುಕಿಂಗ್ ನಲ್ಲಿ ಹೆಸರು ಮಾಡಿರುವ ರೆಡ್ ಬಸ್ ಹೊಸ ವ್ಯವಸ್ಥೆಯನ್ನು ಜೂನ್ 10 ರಿಂದ ಆರಂಭ ಮಾಡಿದೆ.

ರೆಡ್ ಬಸ್ ಹೊಸ ಸೇವೆ ಆರಂಭಿಸಲು ಕಾರಣವೇನು?
ಬೆಂಗಳೂರು ಮೂಲದ ರಶ್ಮಿ ಆರಂಭ ಆನ್ ಲೈನ್ ಪೆಟಿಶನ್ ಹೋರಾಟಕ್ಕೆ ಜಯ ಸಿಕ್ಕಿದೆ. ಬಸ್ ಚಾಲಕನೊಬ್ಬನಿಂದ ಕಿರುಕುಳಕ್ಕೆ ತುತ್ತಾಗಿದ್ದ ರಶ್ಮಿ ಎರಡು ತಿಂಗಳ ಹಿಂದೆ ಪೆಟಿಶನ್ ಆರಂಭ ಮಾಡಿದ್ದರು. ಮಹಿಳೆಯರಿಗೆ ಮೂಲ ಸೌಕರ್ಯ ಮತ್ತು ಭದ್ರತೆಯನ್ನು ಒದಗಿಸುವಂತೆ ಆಗ್ರಹಿಸಿದ್ದರು.[ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]

ಸುಮಾರು 1,49,264 ಜನ ಬೆಂಬಲ ನೀಡಿದ ನಂತರ ರೆಡ್ ಬಸ್ ಕ್ರಮ ತೆಗೆದುಕೊಂಡಿದೆ. ತುರ್ತು ಸೇವೆಗಳ ನಂಬರ್ ಗಳನ್ನು ಹಾಕುವುದು, ಸಿಬ್ಬಂದಿಗಳನ್ನು ಸೂಕ್ತ ತಪಾಸಣೆ ಮೂಲಕ ಆಯ್ಕೆ ಮಾಡಿಕೊಳ್ಳುವ ಕ್ರಮಕ್ಕೆ ಮುಂದಾಗಿದೆ.

ಆದರೆ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಚಾಲಕನ ಹಿನ್ನೆಲೆ ಕಲೆಹಾಕುವುದು ಸೇರಿದಂತೆ ಅನೇಕ ಸುರಕ್ಷಾ ಕ್ರಮಗಳ ಬಗ್ಗೆ ರೆಡ್ ಬಸ್ ಉತ್ತರ ನೀಡಿಲ್ಲ. ಆದರೆ ಪ್ರಯಾಣಿಕರಿಂದ ಪ್ರಯಾಣದ ನಂತರ ಪ್ರತಿಕ್ರಿಯೆ ಕಲೆಹಾಕಲು ಶುರುವಿಟ್ಟುಕೊಂಡಿದೆ.

ಒಲಾ ಮತ್ತು ಉಬರ್ ನಂಥಹ ಟ್ಯಾಕ್ಸಿ ಸೇವೆಗಳೇ ಚಾಲಕನ ಹಿನ್ನೆಲೆಯನ್ನು ಪರಿಶಿಲನೆ ಮಾಡುತ್ತಿರುವಾಗ ಬಸ್ ಸೇವೆ ನೀಡುತ್ತಿರುವವರು ಯಾಕೆ ಹಿಂದೆ ಬಿದ್ದಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ರಶ್ಮಿ ಹೇಳಿದ್ದರು.

ನನಗೆ ಹೊಸ ವ್ಯವಸ್ಥೆ ತೃಪ್ತಿ ತಂದಿಲ್ಲ, ಈ ಬಗ್ಗೆ ಮತ್ತಷ್ಟು ವಿವರಗಳನ್ನು ಕೇಳಿ ರೆಡ್ ಬಸ್ ಗೆ ಪತ್ರ ರವಾನಿಸಿದ್ದೇನೆ ಮತ್ತು ಅನೇಕ ವಿಚಾರಗಳನ್ನು ಜನರಿಗೆ ಬಿಟ್ಟಿದ್ದೇನೆ ಎಂದು ರಶ್ಮಿ ಹೇಳುತ್ತಾರೆ. [ಚತುರ ಸಾರಿಗೆ ಎಂದರೇನು?]

ಆನ್ ಲೈನ್ ಪೆಟಿಶನ್ ಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಕೆ ಮಾಡುತ್ತೇನೆ. ಬಸ್ ಬುಕಿಂಗ್ ವೇಳೆ ಯಾವ ಬಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಯೋಚನೆ ಬಂದಾಗ ಎರಡು ಸಾರಿ ಯೋಚನೆ ಮಾಡುವುದು ಉತ್ತಮ ಎಂಬ ಸಲಹೆಯನ್ನು ರಶ್ಮಿ ನೀಡುತ್ತಾರೆ.

ಬೆಂಗಳೂರಿನ ಯುವತಿಗೆ ಆರಂಭದ ಗೆಲುವು ಸಿಕ್ಕಿದ್ದರೂ ಎಲ್ಲ ವ್ಯವಸ್ಥೆ ಮತ್ತು ಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನ ಮಾಡಿದರೆ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three months ago, Rashmi Bachani, a Bengalurean, started a petition on Change.org after she was molested by the driver on a bus. She wanted to call Redbus CEO Prakash Sangam's attention to the incident and get the online bus services aggregator to take steps to ensure women's safety. The petition, which garnered 1.4 lakh supporters, now stands closed with a triumphant 'Victory' post.
Please Wait while comments are loading...