ಬೆಂಗಳೂರು: ರೆಡ್ಡಿ ಜನ ಸಂಘದಿಂದ ವೇಮನ ಜಯಂತ್ಯುತ್ಸವ

Subscribe to Oneindia Kannada

ಬೆಂಗಳೂರು, ಜನವರಿ, 19: ಕರ್ನಾಟಕ ರೆಡ್ಡಿಜನ ಸಂಘ ಜ.19 ರಂದು 604ನೇ ವೇಮನ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನವರಿ 19 ರಂದು ಸಂಜೆ 4.30ಕ್ಕೆ ಕೋರಮಂಗಲದಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಸಲಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್.ಕೆ.ಪಾಟೀಲ, ಎಸ್.ಆರ್. ಪಾಟೀಲ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಎಚ್.ಎನ್. ವಿಜಯರಾಘವರೆಡ್ಡಿ ತಿಳಿಸಿದ್ದಾರೆ.

Bengalurru: Reddy Jana Sangha, Yogi Vemana ayanthutsava

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಕಾರ್ತಿಕ್‌ ಅವರಿಂದ ಸಂಗೀತ ರಸಸಂಜೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಸಂಜೆ 7 ರಿಂದ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ. ಸಮುದಾಯದ ಪ್ರಮುಖರು ಮತ್ತು ಚಿತ್ರರಂಗದ ಗಣ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengalurru: Reddy Jana Sangha conducting "Yogi Vemana 604th Jayanthutsava" on 19 January Evening, at Koramangala.
Please Wait while comments are loading...