12 ವರ್ಷಗಳಿಂದ ಟಿವಿ ಕದಿಯುತ್ತಿದ್ದ ಕಳ್ಳ 3ನೇ ಬಾರಿ ಪೊಲೀಸರ ಬಲೆಗೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29 : ಈ ಅಸಾದ್ಯ ಚೋರ ಕೇವಲ 18 ದಿನಗಳಲ್ಲಿ 21 ಟಿವಿ ಕಳ್ಳತನ ಮಾಡಿದ್ದಾನೆ. ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತನ ಕೈಚಳಕ ನೋಡಿ ಪೊಲೀಸರೆ ದಂಗಾಗಿದ್ದಾರೆ.

ಲಾಡ್ಜ್ ಗಳಲ್ಲಿ ರೂಮ್ ಮಾಡುವ ಬೆಂಗಳೂರಿನ ವಾಸುದೇವ ನಾಣಯ್ಯ, ಅಲ್ಲಿನ ಟಿವಿಗಳನ್ನು ಹೊತ್ತೊಯ್ಯುತ್ತಿದ್ದ. ತಿರುಪತಿ, ಪುಟ್ ಪರ್ತಿ, ಶೀವಮೊಗ್ಗ, ಭದ್ರಾವತಿ ಸೇರಿದಂತೆ ನಗರದ ಹಲವೆಡೆ ಲಾಡ್ಜ್ ಗಳಲ್ಲಿ ಟಿವಿ ದೋಚಿದ್ದಾನೆ.

ಬೆಂಗಳೂರು: ನಕಲಿ ಪತ್ರಕರ್ತನ ಅಸಲಿ ದಂಧೆ ಬಯಲು

Bengalurean steals 21 tv sets in 18 days

ಈ ಮುಂಚೆ ಒಮ್ಮೆ ತಮಿಳುನಾಡಿನಲ್ಲಿ ಟಿವಿ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಾಗ ಈತನ ಬಳಿಯಿಂದ 50 ಟಿವಿ ವಶಪಡಿಸಿಕೊಂಡಿದ್ದರು ಅಲ್ಲಿನ ಪೊಲೀಸರು, ಆಂಧ್ರಪ್ರದೇಶದ ಪೊಲೀಸರಿಗೆ ಸಿಕ್ಕಿಬಿದ್ದಾಗ 70 ಟಿವಿಗಳು ಇವನ ಬಳಿ ಸಿಕ್ಕಿಬಿದ್ದಿದ್ದವು.

ಬೆಂಗಳೂರು ಪೊಲೀಸರು ಕೂಡ ಇತನನ್ನು ಎರಡು ತಿಂಗಳ ಹಿಂದಷ್ಟೆ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು, ಬಿಡುಗಡೆ ಆದ ಮರುದಿನವೇ ತಿರುಪತಿಗೆ ಪ್ರಯಾಣ ಮಾಡಿದ ನಾಣಯ್ಯ 18 ದಿನಗಳ ಅವಧಿಯಲ್ಲಿ 21 ಟಿವಿಗಳನ್ನು ಕದ್ದಿದ್ದಾನೆ.

ಸಿಕ್ಕಿಬಿದ್ದದ್ದು ಹೀಗೆ
ತಮಿಳುನಾಡು ಪೊಲೀಸರಿಗೆ ತಾನು ಕದ್ದ ಟಿವಿಯನ್ನು ಯಾರು ಯಾರಿಗೆ ಮಾರಿದ್ದೇನೆ ಎಂದು ನಾಣಯ್ಯ ಹೇಳಿದ್ದ ಅದರಲ್ಲಿ ಬೆಂಗಳೂರಿನ ಟಿವಿ ಅಂಗಡಿ ಮಾಲೀಕನ ಹೆಸರೂ ಇತ್ತು. ತಮಿಳುನಾಡು ಪೊಲೀಸರು ಆ ಟಿವಿ ಅಂಗಡಿ ಮೇಲೆ ದಾಳಿ ನಡೆಸಿ ನಾಣಯ್ಯನಿಂದ ಟಿವಿ ಅಂಗಡಿ ಮಾಲೀಕ ಕೊಂಡಿದ್ದ ಟಿವಿಗಳನ್ನು ವಶಪಡಿಸಿಕೊಂಡಿದ್ದರು.

ಆದರೆ ಬುದ್ದಿಗೇಡಿ ನಾಣಯ್ಯ ಈಗ ಹೊಸದಾಗಿ ಕದ್ದಿದ್ದ ಟಿವಿಗಳನ್ನು ಮತ್ತೆ ಅದೇ ಟಿವಿ ಅಂಗಡಿ ಮಾಲೀಕನಿಗೆ ಮಾರಲು ಹೋಗಿದ್ದಾನೆ. ತಮಿಳುನಾಡು ಪೊಲೀಸರು ಬಂದು ಟಿವಿ ಎತ್ತೊಯ್ದದ್ದರಿಂದ ನಷ್ಟಗೊಂಡು ನಾಣಯ್ಯನ ಮೇಲೆ ಸಿಟ್ಟಿನಿಂದಿದ್ದ ಟಿವಿ ಅಂಗಡಿ ಮಾಲೀಕ. ನಾಣಯ್ಯ ಕದ್ದ ಮಾಲನ್ನು ಮಾರಲು ಬಂದಿರುವುದಾಗಿ ನಗರ ಪೊಲೀಸರಿಗೆ ವಿಷಯ ತಿಳಿಸಿ ಆತ ಬಂಧಿಯಾಗುವಂತೆ ಮಾಡಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Benagalurean Vasudeva nanayya stole 21 TV sets in the next 18 days from lodges in Tirupati, Puttaparthi, Shivamogga and Bhadravathi, among other places, before he was caught a second time.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ