ರಾಸ್ತಾ ಕೆಫೆಯಲ್ಲಿ ಬೆಂಗಳೂರಿನ ಟೆಕ್ಕಿ ಸಾವು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 01: ಬೆಂಗಳೂರು ಮೂಲದ ಸಾಫ್ಟ್ ವೇರ್ ಟೆಕ್ಕಿಯೊಬ್ಬರು ರಾಮನಗರ ಬಳಿ ಇರುವ ರಾಸ್ತಾ ಕೆಫೆಯಲ್ಲಿ ಫುಟ್ಬಾಲ್ ಆಡುವಾಗ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಾಯಗಾನಹಳ್ಳಿಯಲ್ಲಿರುವ ರಾಸ್ತಾ ಕೆಫೆಯಲ್ಲಿ ಪವನ್ ಕುಮಾರ್ (28) ಅವರು ಗೆಳೆಯರೊಡನೆ ಫುಟ್ಬಾಲ್ ಆಡುವ ವೇಳೆ ಕುಸಿದು ಬಿದ್ದರು. ತಕ್ಷಣವೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವನ್ನಪ್ಪಿದ್ದರು.

Bengalruu Techie dies while playing foot ball at Rasta Cafe, Ramanagara

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಪವನ್ ಕುಮಾರ್ ಅವರು ನಾಗರಬಾವಿ ನಿವಾಸಿಯಾಗಿದ್ದು, ಇತ್ತೀಚೆಗೆ ಮೈಸೂರಿಗೆ ತೆರಳಿದ್ದರು. ಅಲ್ಲಿ ಖಾಸಗಿ ಪಾರ್ಟಿಯೊಂದರಲ್ಲಿ ಭಾಗವಹಿಸಿ ನಂತರ ಬೆಂಗಳೂರಿಗೆ ಹಿಂತಿರುಗುವಾಗ ರಾಸ್ತಾಗೆ ಬಂದಿದ್ದರು.

ರಾಸ್ತಾದಲ್ಲಿ ಗೆಳೆಯರೊಡನೆ ಆಟವಾಡುತ್ತಾ ಕಾಲ ಕಳೆದು ನಂತರ ಬೆಂಗಳೂರಿಗೆ ತೆರಳುವ ಯೋಜನೆ ಇತ್ತು. ಆದರೆ, ಫುಟ್ಬಾಲ್ ಆಡುವಾಗ ದಣಿದು ಕುಸಿದು ಬಿದ್ದಿದ್ದಾರೆ. ಹೃದಯಾಘಾತವಾಗಿ ಪ್ರಾಣಬಿಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ರಾಮನಗರ ಪೊಲೀಸರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengalruu based Software techie Pawan Kumar (28) dies while playing foot ball at Rasta Cafe, Ramanagara. Police have booked a case and are investigating.
Please Wait while comments are loading...